ಸಾಮಾಜಿಕ ಜಾಲತಾಣದಲ್ಲಿ ಸಹೋದರತ್ವ ಸಾರುವ ವಿಡಿಯೋವೊಂದು ವೈರಲ್ ಆಗಿದೆ. ಸ್ಪೇನ್ನಲ್ಲಿ ನಡೆದ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವ ಭಾರತೀಯ ಗುಂಪು ಮತ್ತು ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಜನರು ಸಹೋದರತ್ವ ಮತ್ತು ಸಹಾನುಭೂತಿಯ ಬಲವಾದ ಸಂದೇಶವನ್ನು ಸಾರಿದ್ದಾರೆ. ಹಳೆಯ ವಿಡಿಯೋ ಗಣೇಶ ಚತುರ್ಥಿಯ ಪ್ರಯುಕ್ತ ಮತ್ತೆ ವೈರಲ್ ಆಗಿದೆ.
ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸ್ಪೇನ್ನಲ್ಲಿ ವಾಸಿಸುತ್ತಿರುವ ಭಾರತದ ಜನರ ಗುಂಪು ಗಣೇಶನ ಮೆರವಣಿಗೆ ಹೊತ್ತು ಹೊರಟಿತ್ತು. ಚರ್ಚ್ ದಾರಿಯಲ್ಲಿಯೇ ಅವರ ಮೆರಣವಣಿಗೆ ಸಾಗಬೇಕಿತ್ತು. ಗಣೇಶನ ವಿಗ್ರಹ ಹೊತ್ತ ಭಾರತೀಯ ಗುಂಪು ಚರ್ಚ್ನ ಧಾರ್ಮಿಕ ಸ್ಥಳದ ಆಡಳಿತ ಮಂಡಳಿಯಿಂದ ಒಳಕ್ಕೆ ಪ್ರವೇಶಿಸಲು ಮತ್ತು ಇದರಿಂದ ಇಬ್ಬರು ದೇವರು ಭೇಟಿಯಾಗಬಹುದು ಎಂದು ಪರವಾನಗಿ ಪಡೆಯಿತು.
In Spain, Indians who organized the Ganesh festival asked the Church if they could take the Ganesh ji from the Church’s way. The church asked them to bring Ganpati Bappa inside the church so that both Gods can meet with each other.
(From a friend in Spain) pic.twitter.com/cub9krjnS3— Vivek Ranjan Agnihotri (@vivekagnihotri) September 8, 2021
ಸ್ಪೇನ್ನಲ್ಲಿ ಗಣೇಶ ಹಬ್ಬ ಆಯೋಜಿಸಿದ ಭಾರತೀಯ ಗುಂಪು, ಸ್ಥಳೀಯ ಆಡಳಿತ ಮಂಡಳಿಗೆ ಚರ್ಚ್ ಮಾರ್ಗವಾಗಿ ಗಣೇಶನನ್ನು ತೆಗೆದುಕೊಂಡು ಹೋಗಬಹುದೇ ಎಂದು ಕೇಳಿದೆ ಇದರಿಂದ ದೇವರು ಪರಸ್ಪರ ಭೇಟಿಯಾಗಬಹುದು ಎಂದು ಸಹ ಕೇಳಿದೆ ಎಂದು ಅಗ್ನಿಹೋತ್ರಿ ಟ್ವೀಟ್ ಮಾಡುವಾಗ ಬರೆದಿದ್ದಾರೆ.
ಗಣಪತಿ ಬಪ್ಪನನ್ನು ಚರ್ಚ್ನ ಒಳಗೆ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಚರ್ಚ್ ಒಳಗಿದ್ದ ಜನರು ಹಾಡು ಹೇಳಲು ಪ್ರಾರಂಭಿಸಿದ್ದಾರೆ ಎಂದು ವಿಡಿಯೋ ತೋರಿಸಿದೆ. ನನ್ನ ಸ್ನೇಹಿತನಿಂದ ವಿಡಿಯೋವನ್ನು ತರಿಸಿಕೊಂಡಿದ್ದೇನೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.
ಇದನ್ನೂ ಓದಿ:
Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ
Viral Video: ಭಾರೀ ಮಳೆಯಿಂದ ಕೊಚ್ಚಿ ಹೋಯ್ತು ಡೆಹ್ರಾಡೂನ್- ಹೃಷಿಕೇಶದ ರಸ್ತೆ; ವಿಡಿಯೋ ವೈರಲ್
(Lord Ganapati met jesus in spain video goes viral)
Published On - 3:57 pm, Thu, 9 September 21