Video: ಬಸ್ ಸ್ಟ್ಯಾಂಡ್‌ನಲ್ಲಿ ಲಿಪ್ ಟು ಲಿಪ್ ಕಿಸ್ ಕೊಟ್ಟ ಪ್ರೇಮಿಗಳು

ಕೆಲ ಪ್ರೇಮಿಗಳೇ ಹಾಗೆ, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲ. ಎಲ್ಲೆಂದರಲ್ಲಿ ಅಸಹ್ಯವಾಗಿ ವರ್ತಿಸುವ ಪ್ರೇಮಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪ್ರೇಮಿಗಳಿಬ್ಬರೂ ಹಗಲು ಹೊತ್ತಿನಲ್ಲಿ ಬಸ್ ಸ್ಟ್ಯಾಂಡ್‌ನಲ್ಲಿಯೇ ರೊಮ್ಯಾನ್ಸ್‌ನಲ್ಲಿ ತೇಲಿ ಹೋಗಿದ್ದಾರೆ.  ಮುಜುಗರ ತರಿಸುವ ಈ ವಿಡಿಯೋ ಕ್ಲಿಪಿಂಗ್ಸ್ ಸದ್ಯ ಸಖತ್ ವೈರಲ್ ಆಗುತ್ತಿದೆ.

Video: ಬಸ್ ಸ್ಟ್ಯಾಂಡ್‌ನಲ್ಲಿ ಲಿಪ್ ಟು ಲಿಪ್ ಕಿಸ್ ಕೊಟ್ಟ ಪ್ರೇಮಿಗಳು
ಪ್ಲಬಿಕ್‌ನಲ್ಲಿ ಜೋಡಿಹಕ್ಕಿಗಳ ರೊಮ್ಯಾನ್ಸ್‌
Image Credit source: Twitter

Updated on: Sep 21, 2025 | 4:25 PM

ಕೆಲ ಪ್ರೇಮಿಗಳು (Lovers) ತೋರುವ ಹುಚ್ಚಾಟಗಳನ್ನು ನೋಡಿದಾಗ ಸಮಾಜ ಎತ್ತ ಸಾಗುತ್ತಿದೆ ಎಂದೆನಿಸುತ್ತದೆ. ಮೆಟ್ರೋ, ರೈಲು, ಬಸ್ಸು, ಪಾರ್ಕ್ ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುವಂತಹ ಸ್ಥಳಗಳಲ್ಲಿ ಪ್ರೇಮಿಗಳು ಲೋಕದ ಪರಿವೇ ಇಲ್ಲದೆ ಕಿಸ್ಸಿಂಗ್‌, ರೊಮ್ಯಾನ್ಸ್‌, ಸರಸವಾಡುತ್ತಾ, ಇತರರಿಗೂ ಮುಜುಗರ ಉಂಟು ಮಾಡಿದಂತಹ ಘಟನೆಗಳು ನಡೆಯುತ್ತಿರುತ್ತದೆ. ತಾವು ಎಲ್ಲಿದ್ದೇವೆ ಎನ್ನುವುದನ್ನೇ ಮರೆತ ಪ್ರೇಮಿಗಳಿಬ್ಬರೂ ಬಸ್ ಸ್ಟ್ಯಾಂಡ್‌ನಲ್ಲಿ ಪ್ರೇಮಿಗಳಿಬ್ಬರೂ ಪರಸ್ಪರ ಚುಂಬಿಸುತ್ತಾ ರೊಮ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇದೇನಾ ಸಂಸ್ಕಾರ ಎಂದು ಈ ಪ್ರೇಮಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

@divyakumari ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಪ್ರೇಮಿಗಳಿಬ್ಬರ ಸರಸ ಸಲ್ಲಾಪದ ಕ್ಷಣಗಳು ಇಲ್ಲಿವೆ. ಹಗಲು ಹೊತ್ತಿನಲ್ಲಿ ಬಸ್ ಸ್ಟ್ಯಾಂಡ್‌ನಲ್ಲಿ ಪ್ರೇಮಿಗಳಿಬ್ಬರೂ ರೊಮ್ಯಾನ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದೆ. ಬಿಳಿ ಬಣ್ಣದ ಸೀರೆಯುಟ್ಟ ಯುವತಿಗೆ ಯುವಕನು ಚುಂಬಿಸುವುದನ್ನು ಕಾಣಬಹುದು. ಮೊದಲಿಗೆ ಓಲ್ಲೆ ಎನ್ನುತ್ತಾ ಆತನ ಕೆನ್ನೆ ತಟ್ಟಿದರೂ ಆ ಬಳಿಕ ಯುವಕನೊಂದಿಗೆ ಸರಸವಾಡಿದ್ದಾಳೆ. ಇತ್ತ ಅಲ್ಲೇ ಕೆಲ ಪ್ರಯಾಣಿಕರು ಬಸ್ ಬರುವುದನ್ನು ಕಾಯುತ್ತಾ ನಿಂತಿದ್ದಾರೆ. ಆದರೆ ಇದ್ಯಾವುದರ ಪರಿವೇ ಇಲ್ಲ ಈ ಜೋಡಿಗಳು ಮಾತ್ರ ತಮ್ಮದೇ ಲೋಕದಲ್ಲಿ ಮುಳುಗಿದೆ.

ಇದನ್ನೂ ಓದಿ
ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು
ಗೆಳೆಯನ ಹೆಂಡತಿಯ ಬದಲಾಗಿ ತನ್ನ ಹೆಂಡತಿಯನ್ನು ಕೊಟ್ಟ ಯುವಕ!
ಹೆಣ್ಣಿನ ಆಸೆಗೆ 8 ಲಕ್ಷ ರೂ ಕಳೆದುಕೊಂಡ ಯುವಕ
ಮಾಡೆಲ್ ಮುಂದೆಯೇ ರಸ್ತೆಯಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು, ಕಿಸ್ಸಿಂಗ್ ವಿಡಿಯೋ ವೈರಲ್

ಸೆಪ್ಟೆಂಬರ್ 18 ರಂದು ಶೇರ್ ಮಾಡಲಾದ ಈ ವಿಡಿಯೋ ಇದುವರೆಗೂ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು ಈ ದೃಶ್ಯ ನೋಡುವಾಗ ಈಗಿನ ಜನರೇಷನ್ ಎತ್ತ ಸಾಗುತ್ತಿದೆ ಎಂದೆನಿಸುತ್ತದೆ. ಮತ್ತೊಬ್ಬ ಬಳಕೆದಾರ ಹೆತ್ತವರ ನಂಬಿಕೆಗೆದ್ರೋಹ ಬಗೆಯುವ ಇಂತಹ ಮಕ್ಕಳಿದ್ದೂ ವ್ಯರ್ಥ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:22 pm, Sun, 21 September 25