ಬೈಕ್​​ ಓಡಿಸುತ್ತಿದ್ದ ಗಂಡನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಹೆಂಡತಿ

ಜಗಳ ಆಡಲು ಕೆಲವರಿಗೆ ಹೊತ್ತು ಗೊತ್ತು ಬೇಕಾಗಿಲ್ಲ. ಕೆಲವರಂತೂ ನಡುರಸ್ತೆಯಲ್ಲೇ ಜಗಳಕ್ಕೆ ಇಳಿಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜಗಳಗಳಿಗೆ ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ದೃಶ್ಯ ನೋಡಿದಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ನ ಹಿಂಬದಿ ಕುಳಿತಿರುವ ಮಹಿಳೆಯೊಬ್ಬಳು ಬೈಕ್ ಓಡಿಸುತ್ತಿರುವ ವ್ಯಕ್ತಿಗೆ ಚಪ್ಪಲಿಯಿಂದ ಮನಬಂದಂತೆ ಹೊಡೆಯುತ್ತಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಅವನ ಕಥೆ ಮುಗಿತು ಎಂದಿದ್ದಾರೆ.

ಬೈಕ್​​ ಓಡಿಸುತ್ತಿದ್ದ ಗಂಡನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಹೆಂಡತಿ
ವೈರಲ್ ವಿಡಿಯೋ
Image Credit source: Twitter

Updated on: May 22, 2025 | 3:52 PM

ಲಕ್ನೋ, ಮೇ 22 : ಕೆಲವೊಮ್ಮೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ (fights)  ಉಂಟಾಗಿ ಅತಿರೇಕಕ್ಕೆ ಹೋಗುವುದನ್ನು ನೀವು ನೋಡಿರಬಹುದು. ಹೌದು, ಮಹಿಳಾ ಮಣಿಗಳ ನಡುವೆ ನೀರಿಗಾಗಿ, ಬಸ್ಸಿನಲ್ಲಿ ಸೀಟಿಗಾಗಿ ಹೀಗೆ ಹತ್ತು ಹಲವು ವಿಚಾರಗಳು ಜಗಳಗಳು ನಡೆಯುತ್ತವೆ. ಕೆಲವೊಮ್ಮೆ ಹೊಡೆದಾಟದವರೆಗೂ ಕೂಡ ತಲುಪುದಿದೆ. ಆದರೆ ನೋಡುವವರಿಗೆ ಮಾತ್ರ ಇದು ತಮಾಷೆಯಾಗಿ ಕಾಣುವುದಿದೆ. ಆದರೆ ಇದೀಗ ಬೈಕ್ ಓಡಿಸುತ್ತಿರುವಾಗಲೇ ವ್ಯಕ್ತಿ ಹಾಗೂ ಹಿಂಬದಿ ಕುಳಿತ ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಪತಿಗೆ ಹಿಂಬದಿ ಕುಳಿತ ಮಹಿಳೆಯೂ ಚಪ್ಪಲಿಯಿಂದ ಹಿಗ್ಗಾಮುಗ್ಗವಾಗಿ ಥಳಿಸಿದ್ದು, ಈ ಘಟನೆಯೂ ಉತ್ತರ ಪ್ರದೇಶ (Uttar Pradesh) ದ ಲಕ್ನೋ (Lucknow) ದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

@deepikaBhardwaj ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬೈಕ್ ಓಡಿಸುತ್ತಿದ್ದು ಹಿಂಬದಿಯಲ್ಲಿ ಮಹಿಳೆಯೂ ಕುಳಿತುಕೊಂಡಿದ್ದಾಳೆ. ಪ್ರಾರಂಭದಲ್ಲಿ ಎಲ್ಲವೂ ಸರಿಯಿದ್ದಂತೆ ತೋರುತ್ತದೆ. ಆದರೆ ಸ್ವಲ್ಪ ಸಮಯದಲ್ಲೇ ಇಬ್ಬರ ನಡುವೆ ವಾಗ್ವಾದ ನಡೆಯುತ್ತದೆ. ಕೊನೆಗೆ ಕೋಪಗೊಂಡ ಮಹಿಳೆಯೂ ಬೈಕ್ ಓಡಿಸುವ ವ್ಯಕ್ತಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗವಾಗಿ ಥಳಿಸಿದ್ದಾಳೆ. ಆ ವ್ಯಕ್ತಿಯು ಬೈಕ್ ಓಡಿಸುವುದನ್ನು ಮುಂದುವರಿಸುತ್ತಿದ್ದಂತೆ, ಈ ಮಹಿಳೆಯೂ ಜೋರಾಗಿ ಕೂಗುತ್ತಾ ಬಿರುಸಿನಿಂದ ಹೊಡೆಯುವುದನ್ನು ಕಾಣಬಹುದು. ಈ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಈ ರೀತಿ ಹೊಡೆಯುತ್ತಿರುವುದು ಯಾಕೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

ಇದನ್ನೂ ಓದಿ
ಕೆಲಸಕ್ಕೆ ಮನುಷ್ಯರನ್ನು ಇಂಟರ್​​​ವ್ಯೂ ಮಾಡುತ್ತಿವೆ ಯಂತ್ರಗಳು...
ಇನ್ಮುಂದೆ ಬೆಂಗಳೂರಿನ ರಸ್ತೆಯಲ್ಲಿ ಓಡಾಡಲಿದೆ ಟೈಟಾನಿಕ್​​​​ ಹಡಗು
ಲಾರಿಗೆಡಿಕ್ಕಿ ಹೊಡೆದ ಕಾರು, ಮೂವರು ಸಾವು
ಈ ಮನೆಯಲ್ಲಿ ಹಾವುಗಳದ್ದೇ ರಾಶಿ, ವಿಡಿಯೋ ವೈರಲ್

ಇದನ್ನೂ ಓದಿ : Video: ರಾಂಗ್ ರೂಟ್​​​ನಲ್ಲಿ ಬಂದು ಬೈಕ್​​​ಗೆ ಡಿಕ್ಕಿ ಹೊಡೆದ ಕಾರು, ಭಯಾನಕ ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ವಿಡಿಯೋಗೆ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರು, ಹೆಂಡ್ತೀನಾ ಬೈಕ್ ನಲ್ಲಿ ಹಿಂಬದಿ ಕೂರಿಸಿಕೊಳ್ಳುವ ಗಂಡಸರೇ ಸ್ವಲ್ಪ ಹುಷಾರು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುರುಷರನ್ನು ಮಹಿಳೆ ಹೊಡೆದರೆ ಅದು ಸಬಲೀಕರಣ, ಅದುವೇ ಪುರುಷ ಮಹಿಳೆಯನ್ನು ಹೊಡೆದರೆ ಅಪರಾಧ ಎಂದಿದ್ದಾರೆ. ಇನ್ನೊಬ್ಬರು, ಸೋಶಿಯಲ್ ಮೀಡಿಯಾಗಳು ಮಹಿಳೆಯರ ಮತ್ತೊಂದು ಮುಖವನ್ನು ಬಹಿರಂಗ ಪಡಿಸುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ