ಬಿಯರ್‌ ಬಾಟಲ್‌ ಹಿಡಿದು ತರಗತಿಯಲ್ಲಿ ಶಿಕ್ಷಕಿಯ ಮುಂದೆ ಬರ್ತ್‌ ಡೇ ಪಾರ್ಟಿ ಮಾಡಿದ ವಿದ್ಯಾರ್ಥಿಗಳು; ವಿಡಿಯೋ ವೈರಲ್‌

ಶಾಲಾ-ಕಾಲೇಜುಗಳನ್ನು ವಿದ್ಯಾ ದೇಗುಲವೆಂದು ಹೇಳಲಾಗುತ್ತದೆ. ಆದ್ರೆ ಇಲ್ಲೊಂದಷ್ಟು ವಿದ್ಯಾರ್ಥಿಗಳು ವಿದ್ಯಾ ದೇಗುಲದಲ್ಲಿಯೇ ಅನಾಗರಿಕರಂತೆ ವರ್ತನೆ ತೋರಿದ್ದಾರೆ. ಹೌದು ಒಂದಷ್ಟು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಶಿಕ್ಷಕಿಯ ಸಮ್ಮುಖದಲ್ಲಿಯೇ ಕೈಯಲ್ಲಿ ಬಿಯರ್‌ ಬಾಟಲ್‌ ಹಿಡಿದು, ಕೇಕ್‌ ಕಟ್‌ ಮಾಡಿ ಭರ್ಜರಿ ಬರ್ತ್‌ ಡೇ ಪಾರ್ಟಿ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬಿಯರ್‌ ಬಾಟಲ್‌ ಹಿಡಿದು ತರಗತಿಯಲ್ಲಿ ಶಿಕ್ಷಕಿಯ ಮುಂದೆ ಬರ್ತ್‌ ಡೇ ಪಾರ್ಟಿ ಮಾಡಿದ ವಿದ್ಯಾರ್ಥಿಗಳು; ವಿಡಿಯೋ ವೈರಲ್‌
ವೈರಲ್​ ವಿಡಿಯೋ
Edited By:

Updated on: Feb 14, 2025 | 5:12 PM

ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಚಾಕೊಲೇಟ್‌, ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಆಘಾತಕಾರಿ ನಡೆದಿದ್ದು, ವಿದ್ಯಾರ್ಥಿಗಳು ವಿದ್ಯಾ ದೇಗುಲದಲ್ಲಿಯೇ ಬಿಯರ್‌ ಬಾಟಲ್‌ ಕೈಯಲ್ಲಿ ಹಿಡಿದು ಬರ್ತ್‌ಡೇ ಪಾರ್ಟಿ ಮಾಡಿದ್ದಾರೆ. ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಶಿಕ್ಷಕಿಯ ಸಮ್ಮುಖದಲ್ಲಿಯೇ ಕೈಯಲ್ಲಿ ಬಿಯರ್‌ ಬಾಟಲ್‌ ಹಿಡಿದು, ಕೇಕ್‌ ಕಟ್‌ ಮಾಡಿ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವಿದ್ಯಾರ್ಥಿಗಳ ಅನಾಗರಿಕ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ಮಧ್ಯಪ್ರದೇಶದ ಮೌಗಂಜ್‌ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೈಯಲ್ಲಿ ಬಿಯರ್‌ ಬಾಟಲ್‌ ಹಿಡಿದು, ಕೇಕ್‌ ಕಟ್‌ ಮಾಡಿ ಬರ್ತ್‌ ಡೇ ಪಾರ್ಟಿ ಮಾಡಿದ್ದಾರೆ. ಶಿಕ್ಷಕಿಯ ಸಮ್ಮುಖದಲ್ಲಿಯೇ ತರಗತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಬರ್ತ್‌ ಡೇ ಪಾರ್ಟಿ ಮಾಡಿದ್ದು, ಈ ಘಟನೆ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ.

ವೈರಲ್​ ವಿಡಿಯೋ  ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು NDTV India ಅಧೀಕೃತ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾಲೇಜು ವಿದ್ಯಾರ್ಥಿಗಳೆಲ್ಲರೂ ಸೇರಿ ತಮ್ಮ ಸಹಪಾಠಿಯ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಶಿಕ್ಷಕಿಯ ಸಮ್ಮುಖದಲ್ಲಿಯೇ ಒಬ್ಬ ವಿದ್ಯಾರ್ಥಿ ಕೇಕ್‌ ಕತ್ತರಿಸುತ್ತಿದ್ದರೆ ಇನ್ನೊಬ್ಬ ವಿದ್ಯಾರ್ಥಿ ಬಿಯರ್‌ ಬಾಟಲ್‌ ಓಪನ್‌ ಮಾಡಿ ಸಂಭ್ರಮಿಸಿದ್ದಾನೆ. ಜನ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯ ನಡವಳಿಕೆಯನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಘಾತಕಾರಿ ದೃಶ್ಯ ವೈರಲ್‌

ಫೆಬ್ರವರಿ 12 ರಂದು ಹಂಚಿಕೊಳ್ಳಲಾದ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಲಜ್ಜೆಗೆಟ್ಟ ವಿದ್ಯಾರ್ಥಿಗಳು ಶಾಲೆಯಂತಹ ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸುತ್ತಿದ್ದಾರೆʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೆಲ್ಲಾ ಸೋಷಿಯಲ್‌ ಮೀಡಿಯಾದ ಅಡ್ಡಪರಿಣಾಮʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ವಿದ್ಯಾರ್ಥಿಗಳ ಈ ನಡೆಯನ್ನು ಟೀಕಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ