Viral Video: ಭೇಲ್​ಪುರಿ, ಮಂಡಕ್ಕಿ ಸೂಸಲ, ಚುರುಮುರಿ ಒಗ್ಗರಣೆ ಪ್ರಿಯರಿಗೆ ಈ ವಿಡಿಯೋ ಸಮರ್ಪಣೆ

|

Updated on: Aug 02, 2023 | 1:32 PM

Puffed Rice : ನೀವೇನೇ ಹೇಳಿ ಈ ವಿಡಿಯೋ ನೋಡಿದ ಮೇಲೆಯೂ ನಾವು ಚುರುಮುರಿ ತಿಂದೇ ತಿನ್ನುತ್ತೇವೆ ಎಂದು ಕೆಲವರು. ಕೆಮಿಕಲ್ ಹಾಕಿದ ಆಹಾರ ತಿಂದು ಕ್ಯಾನ್ಸರ್​ಗೆ ಈಡಾಗುವುದಕ್ಕಿಂತ ಇಂಥದನ್ನು ತಿನ್ನುವುದೇ ವಾಸಿ ಎಂದು ಕೆಲವರು. ನೀವು?

Viral Video: ಭೇಲ್​ಪುರಿ, ಮಂಡಕ್ಕಿ ಸೂಸಲ, ಚುರುಮುರಿ ಒಗ್ಗರಣೆ ಪ್ರಿಯರಿಗೆ ಈ ವಿಡಿಯೋ ಸಮರ್ಪಣೆ
ಚುರುಮುರಿ ತಯಾರಿಸುತ್ತಿರುವುದು
Follow us on

Murmure: ಕಟುಮ್ ಕುಟುಮ್​ ಹಸಿರು ಬಟಾಣಿಯನ್ನು ರಾಶಿಗಟ್ಟಲೆ ಹೇಗೆ ತಯಾರಿಸುತ್ತಾರೆ ಎನ್ನುವ ವಿಡಿಯೋ ಅನ್ನು ಕೆಲವಾರಗಳ ಹಿಂದೆ ನೋಡಿದ್ದಿರಿ. ಬಾಲ್ಯದಿಂದ ಈತನಕವೂ ನಾನು ಮೋಸ ಹೋದೆ, ಜನ್ಮದಲ್ಲಿ ಕೆಂಪು ಹಸಿರು ಬಣ್ಣದ ಬಟಾಣಿಗಳನ್ನು ತಿನ್ನಲಾರೆ ಎಂದು ಅನೇಕ ನೆಟ್ಟಿಗರು ಶಪಥವನ್ನೂ ಮಾಡಿದರು. ಇದೀಗ ಈ ವಿಡಿಯೋ ಕಳ್ಳೆಪುರಿ (Puffed Rice) ಮಂಡಕ್ಕಿ, ಚುರುಮುರಿಪ್ರಿಯರಿಗಾಗಿ. ತೋಯಿಸಿ ಒಗ್ಗರಣೆ ಹಾಕಿದರೆ ಮಂಡಕ್ಕಿ ಸೂಸಲ. ಕಡಲೆಬೀಜ, ಹುರಿಗಡಲೆಯೊಂದಿಗೆ ಒಗ್ಗರಣೆ ಹಾಕಿದರೆ ಕುರುಮ್ ಕುರುಮ್ ಚುರುಮುರಿ, ಷಡ್ರಸಗಳಲ್ಲಿ ಗಿರಗಿರ ತಿರುಗಿಸಿದರೆ ಭಲೇ ಭೇಲ್​ಪುರಿ. ನೋಡಿ ನಿಮ್ಮ ಪ್ರೀತಿಯ ಚುರುಮುರಿಯನ್ನು ತಯಾರಿಸುವ ಈ ವಿಧಾನವನ್ನು.

ಈ ವಿಡಿಯೋ ಅನ್ನು ಈತನಕ ಸುಮಾರು 10 ಲಕ್ಷ ಜನರು ಲೈಕ್ ಮಾಡಿದ್ದಾರೆ. 10 ಮಿಲಿಯನ್​ಗಿಂತಲೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. 7,000 ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದವರಂತೆ ಆಹಾರೋತ್ಪನ್ನಗಳಿಗೆ ಕೆಮಿಕಲ್​ ಉಪಯೋಗಿಸಿ ಕ್ಯಾನ್ಸರ್​ಗೆ ಈಡುಮಾಡುವುದಕ್ಕಿಂತ ಇದು ಎಷ್ಟೋ ವಾಸಿ ಎಂದಿದ್ದಾರೆ ಒಬ್ಬರು. ಹೀಗೆಲ್ಲ ಅಪಪ್ರಚಾರ ಮಾಡಿದರೆ ನಿಮ್ಮ ಅಕೌಂಟ್​ ರಿಪೋರ್ಟ್​ ಮಾಡಬೇಕಾಗುತ್ತದೆ, ಈ ರೀತಿ ತಯಾರಿಸುವುದು ಶೇ. 1 ಮಾತ್ರ. ಉಳಿದಂತೆ ಶುದ್ಧವಾಗಿ ಚುರುಮುರಿಯನ್ನು ತಯಾರಿಸುವ ಸಾಕಷ್ಟು ಫ್ಯಾಕ್ಟರಿಗಳು ಇವೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂಓದಿ : Viral: ಹಡಗಿನಲ್ಲಿಯೂ ಸಂಧ್ಯಾವಂದನೆ ಮಾಡುವ ಕ್ಯಾಪ್ಟನ್​; ಲಿಂಕ್ಡ್ಇನ್​ನಲ್ಲಿ ಫೋಟೋ ವೈರಲ್

ಕಂಟೆಂಟ್​ಗಾಗಿ, ಲೈಕ್ಸ್​​​ಗಾಗಿ ವಿಡಿಯೋ ಮಾಡುವ ಬದಲಾಗಿ ಶುದ್ಧವಾಗಿ ಚುರುಮುರಿ ತಯಾರಿಸುವುದು ಹೇಗೆ ಎಂದು ಫ್ಯಾಕ್ಟರಿಗೆ ಹೋಗಿ ಪಾಠ ಮಾಡಿ ಎಂದಿದ್ದಾರೆ ಮತ್ತೊಬ್ಬರು. ಆದರೂ ನಾನು ಚುರುಮರಿಯನ್ನು ತಿಂದೇತಿನ್ನುತ್ತೇನೆ ಎಂದು ಮಗದೊಬ್ಬರು. ಈ ಚುರುಮುರಿಯ ಸ್ವಾದದ ಸೀಕ್ರೇಟ್​ ಕಾಲುಗಳಲ್ಲಿದೆ ಎಂದಿದ್ದಾರೆ ಇನ್ನೊಬ್ಬರು. ಭಾರತದಲ್ಲಿ ಹೀಗೆಲ್ಲ ಮಾಡುವುದಿಲ್ಲ ಎಂದಿದ್ದಾರೆ ಕೆಲವರು. ಈ ರೀತಿಯಾಗಿ ಇದನ್ನು ತಯಾರಿಸುವ ಪರಿ ಮಾಂಸಾಹಾರ ತಿನ್ನುವವರಿಗೆ ಯಾವುದೇ ರೀತಿಯ ವ್ಯತ್ಯಾಸ ಉಂಟು ಮಾಡಲಾರದು ಎಂದಿದ್ದಾರೆ ಇನ್ನೂ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:29 pm, Wed, 2 August 23