ಕೋತಿಗೆ ಕಲ್ಲು ಎಸೆದಿರೋ ಮುಂದೇನಾಗುತ್ತದೆಯೋ ಅದನ್ನೂ ಎದುರಿಸಲು ಸಿದ್ಧರಾಗಿ

| Updated By: ಶ್ರೀದೇವಿ ಕಳಸದ

Updated on: Oct 21, 2022 | 11:22 AM

Monkey : ಪ್ರೀತಿಗೆ ಪ್ರೀತಿ, ದ್ವೇಷಕ್ಕೆ ದ್ವೇಷ! ಹೀಗೆಂದರೆ ಏನು? ಸೆಕೆಂಡಿನಲ್ಲಿಯೇ ಇದನ್ನು ನೀವು ಅರ್ಥ ಮಾಡಿಕೊಳ್ಳಬಹುದು ಈ ವಿಡಿಯೋ ನೋಡಿದಲ್ಲಿ. ನೆಟ್ಟಿಗರೆಲ್ಲ ಬಿದ್ದುಬಿದ್ದು ನಗುತ್ತಿದ್ದಾರೆ, ಮುಂದಿನ ಸಲ ನಿನಗೇ ಒಳ್ಳೆಯದಾಗಲಿ ಅಣ್ಣಾ ಎಂದು.

ಕೋತಿಗೆ ಕಲ್ಲು ಎಸೆದಿರೋ ಮುಂದೇನಾಗುತ್ತದೆಯೋ ಅದನ್ನೂ ಎದುರಿಸಲು ಸಿದ್ಧರಾಗಿ
Source : Twitter
Follow us on

Viral Video : ಪ್ರಾಣಿಗಳು ನಿಮ್ಮ ಮನೆಗೆ ಬರುವುದೇ ಆಹಾರ ಹುಡುಕಿಕೊಂಡು. ನೀವು ಆಹಾರ ಕೊಟ್ಟರೆ ನಿಮ್ಮೊಂದಿಗೆ ಮಿತೃತ್ವದಿಂದ ಇರುತ್ತವೆ. ನೀವು ಹೊಡೆದು ಬಡೆದು ಮಾಡಿದಿರೋ ಅವೂ ನಿಮಗೇನು ಮಾಡಬೇಕೋ ಅದನ್ನೇ ಮಾಡುತ್ತವೆ. ಅದರಲ್ಲೂ ಮಂಗಗಳು ಮಾತ್ರ ಭಯಂಕರ. ತಿಂಡಿ ಕೊಟ್ಟರೆ ಸುಮ್ಮನೆ ತಿಂದು ಹೋಗುತ್ತವೆ. ಕೈ ಎತ್ತುವುದು, ಅಣಕಿಸುವುದು, ಕಲ್ಲು ಬೀಸುವುದು ಮಾಡಿದಿರೋ ಅಷ್ಟೇ ಕಥೆ! ನೀವು ಒಂದು ಪಟ್ಟು ಕೊಟ್ಟರೆ ಅವು ಹತ್ತು ಪಟ್ಟು ಬಹುಮಾನವನ್ನು ನಿಮಗೇ ಮರಳಿಸಿ ಹೋಗುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ನೋಡಿ.

ಈ ಘಟನೆ ನಡೆದಿರುವುದು ತಿರುವನಂತಪುರದಲ್ಲಿ. ಈ ಗಲ್ಲಿಯಲ್ಲಿರುವ ಈ ವ್ಯಕ್ತಿ ತನ್ನ ಮನೆಯ ಮಾಳಿಗೆಯ ಮೇಲೆ ಬಂದ ಕೋತಿಗೆ ಕಲ್ಲನ್ನು ಎಸೆಯುತ್ತಾನೆ. ಅದು ವಾಪಸ್​ ಅವನನ್ನು ಕೆಳಕ್ಕೆ ಕೆಡವಿ ದಾಳಿ ಮಾಡುತ್ತದೆ. ಕೋತಿಯ ಸ್ವಭಾವವೇ ಹಾಗೇ. ನೀವು ಕೋಪ ಅಥವಾ ಕಿರಿಕಿರಿಯಿಂದ ಸಣ್ಣ ಸನ್ನೆ ಮಾಡಿದರೂ ಸರಿ. ಅದಕ್ಕೆ ಬೇಗ ಅರ್ಥವಾಗುತ್ತದೆ. ಅಷ್ಟೇ ವೇಗದಲ್ಲಿ ಸೇಡು ತೀರಿಸಿಕೊಂಡು ಹೋಗುತ್ತದೆ. ಹಾಗಾಗಿ ಪ್ರಾಣಿಗಳೊಂದಿಗೆ ಮಿತೃತ್ವ ಸಾಧ್ಯವಿಲ್ಲವೆಂದರೆ ಉಪಾಯವಾಗಿ ಅವುಗಳನ್ನು ಓಡಿಸಬೇಕೇ ಹೊರತು ಹೀಗೆ ಆವೇಶಕ್ಕೆ ಒಳಗಾಗಿ ಅಲ್ಲ.

ನೆಟ್ಟಿಗರಂತೂ ಈ ದೃಶ್ಯ ನೋಡಿ ನಗುತ್ತಿದ್ದಾರೆ. ‘ಮುಂದಿನ ಸಲ ನಿನಗೆ ಒಳ್ಳೆಯದಾಗಲಿ ಫ್ರೆಂಡ್​, ನೀವೇ ಗೆಲ್ಲುತ್ತೀರಿ ಮಂಗನೊಂದಿಗೆ’ ಎಂದಿದ್ದಾರೆ ಒಬ್ಬರು. ‘ಹತ್ತಿರದಲ್ಲಿ ಅರಣ್ಯವಿದ್ದರೆ ಅವು ಹೀಗೆ ಆಗಾಗ ಮನೆಗಳಿಗೆ ದಾಳಿ ಇಡುತ್ತವೆ. ನಿಮ್ಮ ಮನೆಯ ವಸ್ತುಗಳ ಬಗ್ಗೆ ನಿಗಾ ಇರಲಿ’ ಎಂದು ಇನ್ನೊಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ ಮಂಗಗಳ ಸಹವಾಸ ಹುಷಾರು!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ