Viral Video: ‘ಮೂರ್ಖತನದ ಪರಮಾವಧಿ’; ರೀಲ್ಸ್​​​ಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಕಾಲು ಮುರಿದುಕೊಂಡ ಯುವಕ

|

Updated on: Sep 17, 2024 | 11:20 AM

ಯುವಕನೊಬ್ಬ ತನ್ನ ಎರಡು ಕಾಲುಗಳಿಂದ ಟ್ರ್ಯಾಕ್ಟರ್‌ನ ಹಿಂಬದಿಯ ಚಕ್ರವನ್ನು ಎತ್ತಲು ಪ್ರಯತ್ನಿಸಿದ್ದಾನೆ. ಚಕ್ರ ಎತ್ತುತ್ತಿದ್ದಂತೆ ಏಕಾಏಕಿ ಕಾಲಿನ ಮೂಳೆ ಮುರಿದಿದೆ. ಸದ್ಯ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಯುವಕ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದು, ಪರಿಣಾಮ ತನ್ನ ಕಾಲನ್ನೇ ಕಳೆದುಕೊಂಡಿದ್ದಾನೆ.

Viral Video: ಮೂರ್ಖತನದ ಪರಮಾವಧಿ; ರೀಲ್ಸ್​​​ಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಕಾಲು ಮುರಿದುಕೊಂಡ ಯುವಕ
Follow us on

ಸೋಶಿಯಲ್​ ಮೀಡಿಯಾಗಳಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದಿಷ್ಟು ಜನರು ಮಿಲಿಯನ್​​ ವೀಕ್ಷಣೆಯನ್ನು ಪಡೆಯಲು ಹುಚ್ಚು ಸಾಹಸಕ್ಕೂ ಕೈ ಹಾಕುತ್ತಾರೆ. ಇದೀಗ ಅಂತದ್ದೇ ವಿಡಿಯೋವೊಂದು ವೈರಲ್​ ಆಗಿದ್ದು, ಈ ವಿಡಿಯೋ ಒಂದೇ ದಿನದಲ್ಲಿ ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಯುವಕ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದು, ಪರಿಣಾಮ ತನ್ನ ಕಾಲನ್ನೇ ಕಳೆದುಕೊಂಡಿದ್ದಾನೆ.

ವೈರಲ್ ಆದ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಎರಡು ಕಾಲುಗಳಿಂದ ಟ್ರ್ಯಾಕ್ಟರ್‌ನ ಹಿಂಬದಿಯ ಚಕ್ರವನ್ನು ಎತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಯುವಕನಿಗೆ ತಾನು ಎಷ್ಟು ತೊಂದರೆಯನ್ನು ಆಹ್ವಾನಿಸುತ್ತಿದ್ದೇನೆಂದು ತಿಳಿದಿರಲಿಲ್ಲ. ತನ್ನ ಕಾಲುಗಳಿಂದ ಟ್ರ್ಯಾಕ್ಟರ್‌ನ ಹಿಂಬದಿಯ ಚಕ್ರ ಎತ್ತುತ್ತಿದ್ದಂತೆ ಏಕಾಏಕಿ ಕಾಲಿನ ಮೂಳೆ ಮುರಿದಿದೆ. ಸದ್ಯ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಮತ್ತಷ್ಟು ಓದಿ:  ಪ್ರಥಮ ವರ್ಷದ ಪುಣ್ಯ ಸ್ಮರಣೆ, ತೀರಿ ಹೋದ ಬೆಕ್ಕಣ್ಣನ ನೆನೆದು ದಿನ ಪ್ರತಿಕೆಯಲ್ಲಿ ಭಾವುಕ ಫೋಟೊ ಹಾಕಿಸಿದ ಕುಟುಂಬಸ್ಥರು

@deathpositive ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡು ದಿನಗಳಲ್ಲಿ 21.7 ಮಿಲಿಯನ್​ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ