ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ವಿಶೇಷವಾಗಿ ಕಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹುಕಾಲ ಹಾಗೇ ಉಳಿಯುತ್ತದೆ. ಮತ್ತೆ ಮತ್ತೆ ಶೇರ್ ಆಗಿ ವೈರಲ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋಗಳು ಬಹಳ ವರ್ಷದ ಬಳಿಕವೂ ವೈರಲ್ ಆಗುವುದಿದೆ. ಅಂತಹ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಒಬ್ಬ ವ್ಯಕ್ತಿ ರೋಲರ್ ಕೋಸ್ಟರ್ನಲ್ಲಿ ಹೋಗುತ್ತಿರಬೇಕಾದರೆ ಮಾಡಿದ ಸಾಹಸ ಕಾರ್ಯವೊಂದು ಕಂಡುಬಂದಿದೆ. ವ್ಯಕ್ತಿಯ ಕೈಚಳಕಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ. ಬಾರ್ಸಿಲೋನಾದ ಥೀಮ್ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೋದಲ್ಲಿ ಸ್ಯಾಮುಯಲ್ ಕೆಂಪ್ಫ್ ಎಂಬ ವ್ಯಕ್ತಿ ಬೀಳುತ್ತಿದ್ದ ಐಫೋನ್ ಒಂದನ್ನು ತಕ್ಷಣ ಹಿಡಿದಿದ್ದಾರೆ. 134 ಕಿಲೋ ಮೀಟರ್ ವೇಗದಲ್ಲಿ ಹೋಗುತ್ತಿರಬೇಕಾದರೂ ಅವರು ಗಾಳಿಯಲ್ಲಿ ತೇಲಿದ ಮೊಬೈಲ್ ಹಿಡಿದಿದ್ದಾರೆ. ಹೀಗೆ ಅಪರಿಚಿತರೊಬ್ಬರ ಮೊಬೈಲ್ ಫೋನ್ ಹಿಡಿದ ಬಳಿಕ ನ್ಯೂಜಿಲ್ಯಾಂಡ್ನ ಕೆಂಪ್ಫ್ ಹೀರೋ ಆಗಿ ಮೆರೆದಿದ್ದಾರೆ.
ಈ ಘಟನೆಯ ವಿಡಿಯೋ 2019ರ ಸಪ್ಟೆಂಬರ್ ವೇಳೆಯಲ್ಲಿ ಶೇರ್ ಆಗಿತ್ತು. ಬಳಿಕ ಇದೀಗ ಮತ್ತೆ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 6 ಮಿಲಿಯನ್ಗೂ ಹೆಚ್ಚು ಜನ ನೋಡಿದ್ದಾರೆ. ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ.
ಎರಡು ಸಾಲು ಮುಂದೆ ಇದ್ದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕೆಳಗೆ ಬಿತ್ತು ಎಂದು ಕೆಂಪ್ಪ್ 2019ರಲ್ಲಿ ಹೇಳಿಕೆ ನೀಡಿದ್ದರು. ಈ ಪಯಣ ಆರಂಭವಾದ ನಂತರ ನಾನು ಎಲ್ಲವನ್ನೂ ಮರೆತಂತಿದ್ದೆ. ಯಾಕೆಂದರೆ ಆ ರೈಡ್ ಹಾಗಿತ್ತು. ಆದರೆ, ಫೋನ್ ಬೀಳುವಾಗ ಗಮನಿಸಿ ಅದನ್ನು ಹಿಡಿಯಲು ಸಾಧ್ಯವಾಯಿತು ಎಂದು ಕೆಂಪ್ಫ್ ಹೇಳಿದ್ದರು.
ಮೊಬೈಲ್ ಹಿಂದಿರುಗಿಸಿದ ಬಳಿಕ ಮೊಬೈಲ್ ಯಜಮಾನನಿಂದ ಕೆಂಪ್ಫ್ಗೆ ಬಹಳ ಪ್ರಶಂಸೆ ವ್ಯಕ್ತವಾಗಿದೆ. ಆಲ್ಲಿನ ಜನರು ಕೂಡ ಕೆಂಪ್ಫ್ನ್ನು ಹೊಗಳಿದ್ದಾರೆ. ನೆಟ್ಟಿಗರು ಕೆಂಪ್ಫ್ನ ಕ್ಯಾಚ್ ಹಿಡಿಯುವ ಕುಶಲತೆಗೆ ತಲೆದೂಗಿದ್ದಾರೆ. ಹಲವರು ಹೊಗಳಿಕೆಯ ಮಾತುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು
Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು
Published On - 8:07 pm, Mon, 31 May 21