Viral : ಫ್ಲಿಪ್​ಕಾರ್ಟ್​ನಿಂದ ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನು ಪಡೆದ ಗ್ರಾಹಕ

| Updated By: ಶ್ರೀದೇವಿ ಕಳಸದ

Updated on: Sep 27, 2022 | 2:30 PM

Flipcart : ಆರ್ಡರ್​ ಬಾಕ್ಸ್​ ಓಪನ್ ಮಾಡದೆ ಡೆಲಿವರಿ ಏಜೆಂಟ್​ಗೆ ಒಟಿಪಿ ಕೊಟ್ಟಿದ್ದು ನಿಮ್ಮದೇ ತಪ್ಪು. ಈ ವಿಷಯವಾಗಿ ನಾವು ಏನೂ ಸಹಾಯ ಮಾಡಲಾಗದು ಎಂದು ಫ್ಲಿಪ್​ಕಾರ್ಟ್​ ಕಸ್ಟಮರ್ ಸಪೋರ್ಟ್ ವಿಭಾಗವು ತನ್ನ ಗ್ರಾಹಕರಿಗೆ ಹೇಳಿದೆ.

Viral : ಫ್ಲಿಪ್​ಕಾರ್ಟ್​ನಿಂದ ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನು ಪಡೆದ ಗ್ರಾಹಕ
ಫ್ಲಿಪ್​ಕಾರ್ಟ್​ ಕಳಿಸಿದ ಘಡಿ ಸಾಬೂನು
Follow us on

Viral : ಏನೋ ಆರ್ಡರ್ ಮಾಡಿದರೆ ಇನ್ನೇನೋ ಸಾಮಾನು ಬಂದು ತಲುಪಿರುತ್ತದೆ. ಈಗಾಗಲೇ ಇಂಟರ್​ನೆಟ್​ನಲ್ಲಿ ಆನ್​ಲೈನ್​ ಶಾಪಿಂಗ್​ನಲ್ಲಿ ಆಗುವ ಇಂಥ ಅಚಾತುರ್ಯಗಳ ಬಗ್ಗೆ ಸಾಕಷ್ಟು ಓದಿರುತ್ತೀರಿ. ಇತ್ತೀಚೆಗೆ ಫ್ಲಿಪ್​ಕಾರ್ಟ್​ನ​ ಬಿಗ್ ಬಿಲಿಯನ್ ಡೇಸ್ ಸೇಲ್​ ನಡೆಯುತ್ತಿರುವ ಸಂದರ್ಭದಲ್ಲಿ ಗ್ರಾಹಕರೊಬ್ಬರು ತಮ್ಮ ತಂದೆಗೆ ಲ್ಯಾಪ್‌ಟಾಪ್  ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ಡೆಲಿವರಿ ಬಾಕ್ಸ್​ ಸರಿಯಾದ ಸಮಯಕ್ಕೇನೋ ತಲುಪಿತು. ಆದರೆ ಒಳಗಿದ್ದದ್ದು ಲ್ಯಾಪ್​ಟಾಪ್​ನ ಬದಲಾಗಿ ಘಡಿ ಸಾಬೂನುಗಳು!

ಯಶಸ್ವಿ ಶರ್ಮಾ ಎನ್ನುವವರು ತಮ್ಮ ತಂದೆಗೆ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ತಲುಪಿದ್ದು ಸಾಬೂನುಗಳು. ಯಶಸ್ವಿ ಅವರ ತಂದೆಗೆ ಫ್ಲಿಪ್​ಕಾರ್ಟ್​ನ ಓಪನ್-ಬಾಕ್ಸ್ ಪರಿಕಲ್ಪನೆ ಬಗ್ಗೆ ತಿಳಿದಿರಲಿಲ್ಲ. (ಭಾರತೀಯರಿಗೆ ಈ ಪರಿಕಲ್ಪನೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ). ಓಪನ್ ಬಾಕ್ಸ್ ಕಾನ್ಸೆಪ್ಟ್​ ಎಂದರೆ ಆರ್ಡರ್ ಮಾಡಿದ ವಸ್ತುವನ್ನು ಡೆಲಿವರಿ ಏಜೆಂಟ್​ ಎದುರೇ ಪರಿಶೀಲಿಸಿ ನಂತರ ಒಟಿಪಿ ನೀಡಬೇಕು.

ಆದರೆ, ಪ್ರಿಪೇಯ್ಡ್ ಡೆಲಿವರಿಗಳಿಗೆ ಆರ್ಡರ್​ ಪ್ಯಾಕ್​ ಸ್ವೀಕರಿಸಿದ ನಂತರ ಒಟಿಪಿ ಕೊಡಬೇಕೆಂದು ಯಶಸ್ವಿ ಅವರ ತಂದೆ ಭಾವಿಸಿದರು. ಆದ್ದರಿಂದ ಡೆಲಿವರಿ ಏಜೆಂಟ್​ ಆರ್ಡರ್ ಬಾಕ್ಸ್​ ಕೊಡುತ್ತಿದ್ದಂತೆ ಅವರು ಒಟಿಪಿ ಕೊಟ್ಟುಬಿಟ್ಟರು.  ಈ ವಿಷಯವಾಗಿ ಕಸ್ಟಮರ್ ಸಪೋರ್ಟ್​ ವಿಭಾಗಕ್ಕೆ ಯಶಸ್ವಿ ದೂರು ಸಲ್ಲಿಸಿದಾಗ, ಆರ್ಡರ್​ ಬಾಕ್ಸ್​ ತೆರೆಯದೆ ಒಟಿಪಿ ಹಂಚಿಕೊಂಡಿದ್ದು ನಿಮ್ಮ ತಂದೆಯದೇ ತಪ್ಪು ಎಂದು ಆರೋಪಿಸಿದರು. ಆದರೆ ಡೆಲಿವರಿ ಏಜೆಂಟ್​ ಈ ಬಾಕ್ಸ್​ ತಲುಪಿಸುವ ವೇಳೆ ಸೆರೆಯಾದ ಸಿಸಿಟಿವಿ ದೃಶ್ಯಗಳ ಸಾಕ್ಷಿ ನನ್ನ ಬಳಿ ಇದೆ ಎಂದಿದ್ದಾರೆ ಯಶಸ್ವಿ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಎಲ್ಲ ವಿಷಯವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಈಗ ನೀವು ಆರ್ಡರ್​ ಮಾಡಿದ ವಸ್ತು ನಿಮ್ಮನ್ನು ತಲುಪಲಾರದು. ಏಕೆಂದರೆ ಬಾಕ್ಸ್​ನೊಳಗೆ ಲ್ಯಾಪ್​ಟಾಪ್​ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನೀವು ಡೆಲಿವರಿ ಏಜೆಂಟ್​ಗೆ ಒಟಿಪಿ ನೀಡಬೇಕಿತ್ತು. ಈ ವಿಷಯವನ್ನು ಮತ್ತೆ ಎಳೆದಾಡುವಲ್ಲಿ ಅರ್ಥವಿಲ್ಲ, ಇದನ್ನು ಇಲ್ಲಿಗೆ ಮುಗಿಸಲಾಗುವುದು’ ಎಂದು ಕಸ್ಟಮರ್​ ಸಪೋರ್ಟ್​ ವಿಭಾಗವು ಉತ್ತರಿಸಿದೆ.

‘ನನ್ನ ತಂದೆಯದೇ ತಪ್ಪು ಎಂದು ಫ್ಲಿಪ್​ಕಾರ್ಟ್​ ವಾದಿಸುತ್ತಿದೆ. ಆದರೆ ಡೆಲಿವರಿ ಏಜೆಂಟ್​ ಓಪನ್ ಬಾಕ್ಸ್ ಪರಿಕಲ್ಪನೆಯ​ ಬಗ್ಗೆ ಮೊದಲೇ ಯಾಕೆ ನನ್ನ ತಂದೆಗೆ ತಿಳಿಸಲಿಲ್ಲ? ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಮೊದಲು ಕೊನೆಯ ಪ್ರಯತ್ನವೆಂಬಂತೆ ಇಲ್ಲಿ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ಮಧ್ಯಮ ವರ್ಗದ ಭಾರತೀಯರಿಗೆ ಇಷ್ಟು ಮೌಲ್ಯದ ಲ್ಯಾಪ್​ಟಾಪ್ ಖರೀದಿಯಿಂದ ಉಂಟಾದ ನಷ್ಟವನ್ನು ಸುಲಭವಾಗಿ ಭರಿಸಿಕೊಳ್ಳಲಾಗದು.’ ಎಂದು ಯಶಸ್ವಿ ಈ ನೋಟ್​ನಲ್ಲಿ ಬರೆದಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 1:05 pm, Tue, 27 September 22