ಬಾಲಿವುಡ್ನ ಹಾಡಿಗೆ ವ್ಯಕ್ತಿಯೊಬ್ಬ ನೃತ್ಯ ಮಾಡುತ್ತಿರುವ ವೀಡಿಯೋ ಸಾಮಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಾಲಿವುಡ್ನ ಮೊಹ್ರಾ ಚಿತ್ರದ ಹಿಟ್ ಸಾಂಗ್ ಟಿಪ್ ಟಿಪ್ ಬರ್ಸಾ ಪಾನಿ ಹಾಡಿಗೆ ವ್ಯಕ್ತಿಯೊಬ್ಬ ಮೈಮರೆತು ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪಾಕಿಸ್ತಾನ ಅಸೆಂಬ್ಲಿಯ ಸದಸ್ಯ ಅಮೀರ್ ಲಿಯಾಕತ್ ಹುಸೇನ್ ಎನ್ನಲಾಗಿದೆ. ಅಮೀರ್ ಲಿಯಾಕತ್ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಸದಸ್ಯರಾಗಿದ್ದಾರೆ. ಹಿಂದಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಯನ್ನು ಅಮೀರ್ ಎಂದುಕೊಂಡು ಪತ್ರಕರ್ತರೊಬ್ಬರು ವಿಡಿಯೋ ಶೇರ್ ಮಾಡಿದ್ದರು. ಅವರ ಬಳಿಕ ವಿಡಿಯೋವನ್ನು ಸಾವಿರಾರು ಮಂದಿ ರೀ ಶೇರ್ ಮಾಡಿದ್ದರು. ಹೀಗಾಗಿ ವಿಡಿಯೋ ಸಖತ್ ವೈರಲ್ ಆಗಿತ್ತು.
ಆದರೆ ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿರುವ ವ್ಯಕ್ತಿ ಡ್ಯಾನ್ಸ್ ಕೊರಿಯೋಗ್ರಾಫರ್ ಶೊಯೆಬ್ ಶಕೂರ್ ಎಂದು ಗುರುತಿಸಲಾಗಿದೆ. ವಿಡಿಯೋವನ್ನು ಪಾಕಿಸ್ತಾನದ ಫೋಟೋಗ್ರಫಿ ಸ್ಟುಡಿಯೋವೊಂದು ಫೇಸ್ಬುಕ್ನಲ್ಲಿ ಹಂಚಿಕೊಂಡಿತ್ತು. ಬಳಿಕ ಸ್ವತಃ ಶೊಯೆಬ್ ಶಕೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಆದರೆ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಶೊಯೆಬ್ ಶಕೂರ್ ಎಂದು ಪತ್ರಕರ್ತರೊಬ್ಬರು ಬರೆದು ಟ್ವೀಟ್ ಮಾಡಿದ್ದರು. ವಿಡಿಯೋವನ್ನು ಮೊದಲು ಅಮೀರ್ ಲಿಯಾಕತ್ ಹೆಸರಿನಲ್ಲಿ ಹಂಚಿಕೊಂಡ ಪತ್ರಕರ್ತ ಅಮನ್ ಮಲ್ಲಿಕ್ ತಪ್ಪಾದ ಮಾಹಿತಿಯನ್ನು ಶೇರ್ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.
Tip Tip Barsa Paani ??? pic.twitter.com/0IBo4J4oqq
— Taimoor Zaman (@taimoorze) January 5, 2022
ಪಾಕಿಸ್ತಾನಿ ಸಚಿವರೆನ್ನುವ ನಕಲಿ ವಿಡಿಯೋ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌದರಿ ಅವರು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಇಳಿಕೆಯಾಗಿದೆ ಎನ್ನುವಾಗ ಗೊಂದಲವಾಗಿ ಊಪ್ಸ್ ಎಂದಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿತ್ತು. ಇದೀಗ ಅಮೀರ್ ಲಿಯಾಕತ್ ಹಿಂದಿ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎನ್ನುವ ನಕಲಿ ವೀಡಿಯೋ ವೈರಲ್ ಆಗಿದೆ. ಟ್ವಿಟರ್ನಲ್ಲಿ ವಿಡಿಯೋ 8 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಇದನ್ನೂ ಓದಿ:
ವ್ಯಾಕ್ಸಿನೇಷನ್ ಉತ್ತೇಜಿಸಲು 700 ಕುರಿಗಳನ್ನು ಸಿರಿಂಜ್ ಆಕಾರದಲ್ಲಿ ನಿಲ್ಲಿಸಿ ಸಂದೇಶ ಸಾರಿದ ವ್ಯಕ್ತಿ