ಅಂಗಾಂಗ ದಾನಕ್ಕಾಗಿ ಹೃದಯ ತೆಗೆಯಬೇಕೆನ್ನುವಷ್ಟರಲ್ಲಿ ಎದ್ದು ಕುಳಿತ ಬ್ರೈನ್‌ಡೆಡ್‌ ವ್ಯಕ್ತಿ

|

Updated on: Oct 24, 2024 | 10:21 AM

ಮಾದಕವಸ್ತುವಿನ ಮಿತಿಮೀರಿದ ಸೇವನೆಯಿಂದಾಗಿ ಥಾಮಸ್​ಗೆ ಬ್ರೈನ್‌ಡೆಡ್‌ ಆಗಿದೆ ಎಂದು ವೈದ್ಯರು ಘೋಷಿಸಿದ್ದರು. 36 ವರ್ಷಕ್ಕೆ ಸಾವನ್ನಪ್ಪಿರುವುದರಿಂದ ಆತನ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದೆ. ವೈದ್ಯರ ತಂಡ ಇನ್ನೇನು ದೇಹದಿಂದ ಹೃದಯವನ್ನು ತೆಗೆಯಲು ಪ್ರಯತ್ನಿಸುತ್ತಿರುವ ವೇಳೆ ಇದ್ದಕ್ಕಿದ್ದಂತೆ ಥಾಮಸ್​ ಎದ್ದು ಕುಳಿತಿದ್ದಾನೆ.

ಅಂಗಾಂಗ ದಾನಕ್ಕಾಗಿ ಹೃದಯ ತೆಗೆಯಬೇಕೆನ್ನುವಷ್ಟರಲ್ಲಿ ಎದ್ದು ಕುಳಿತ ಬ್ರೈನ್‌ಡೆಡ್‌ ವ್ಯಕ್ತಿ
Follow us on

ಅಮೆರಿಕ: ಆಗೊಮ್ಮೆ ಈಗೊಮ್ಮೆ ವೈದ್ಯರನ್ನೇ ಬೆಚ್ಚಿ ಬೀಳಿಸುವ ಘಟನೆಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ಘಟನೆ ಅಮೇರಿಕಾದಲ್ಲಿ ನಡೆದಿದೆ. ಬ್ರೈನ್‌ಡೆಡ್‌ ಎಂದು ಘೋಷಿಸಲಾದ ವ್ಯಕ್ತಿಯ ಅಂಗಾಂಗ ದಾನಕ್ಕಾಗಿ ಕುಟುಂಬಸ್ಥರ ಅನುಮತಿಯ ಮೇರೆಗೆ ವೈದ್ಯರು ಮುಂದಾಗಿದ್ದರು. ಇನ್ನೇನು ಹೃದಯ ತೆಗೆಯಬೇಕು ಅನುವಷ್ಟರಲ್ಲಿ ಬ್ರೈನ್‌ಡೆಡ್‌ ಆಗಿರುವ ವ್ಯಕ್ತಿ ಎದ್ದು ಕುಳಿತಿದ್ದಾರೆ. ಈ ಘಟನೆ ಒಂದು ಕ್ಷಣ ವೈದ್ಯರನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ 2021 ರಲ್ಲಿ ನಡೆದಿದ್ದರೂ, ಇದೀಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಅಮೇರಿಕಾದ ಕೆಂಟುಕಿಯ ಥಾಮಸ್ ಎಂಬ 36 ವರ್ಷದ ವ್ಯಕ್ತಿ, ಮಾದಕವಸ್ತುವಿನ ಮಿತಿಮೀರಿದ ಸೇವನೆಯಿಂದಾಗಿ ಆತನ ಬ್ರೈನ್‌ಡೆಡ್‌ ಆಗಿದೆ ಎಂದು ವೈದ್ಯೆರು ಘೋಷಿಸಿದ್ದರು. ಇನ್ನೇನು 36 ವರ್ಷ ಆಗಿದ್ದರಿಂದ ಆತನ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಅಂದರಂತೆ ವೈದ್ಯಕೀಯ ತಂಡ ಅಂಗಾಂಗ ದಾನದ ಕಾರ್ಯದಲ್ಲಿ ಮುಂದಾಗಿದೆ.

ಇದನ್ನೂ ಓದಿ: ಭಾರತದ ಈ ಗ್ರಾಮದಲ್ಲಿ ಶೂ, ಚಪ್ಪಲಿ ಧರಿಸುವಂತಿಲ್ಲ, ಯಾಕೆ ಗೊತ್ತಾ?

ವೈದ್ಯರ ತಂಡ ಇನ್ನೇನು ದೇಹದಿಂದ ಹೃದಯವನ್ನು ತೆಗೆಯಲು ಪ್ರಯತ್ನಿಸುತ್ತಿರುವ ವೇಳೆ ಇದ್ದಕ್ಕಿದ್ದಂತೆ ಆತ ಎದ್ದು ಕುಳಿತಿದ್ದಾನೆ. ಈ ಪ್ರಕರಣ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಘಟನೆ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ