Viral: ಪಾಕಿಸ್ತಾನದಲ್ಲಿ ಮಾತ್ರ ಇದೆಲ್ಲಾ ಸಾಧ್ಯ ನೋಡಿ… ಪುಸ್ತಕ ಮೇಳದಲ್ಲಿ ಬುಕ್ಸ್‌ಗಳ ಬದಲು ಬಿರಿಯಾನಿ, ಶವರ್ಮಾ ಕೊಳ್ಳಲು ಮುಗಿಬಿದ್ದ ಜನ

ಪಾಕಿಸ್ತಾನದಲ್ಲಿ ನಡೆಯುವ ಕೆಲವೊಂದು ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇಲ್ಲಿನ ನಡೆಯುವ ಕೆಲವು ಘಟನೆಗಳು ಅಚ್ಚರಿ ಮೂಡಿಸುತ್ತದೆ. ಇದೀಗ ಮತ್ತೊಂದು ಬಾರಿ ಅಂತಹದ್ದೇ ಘಟನೆ ನಡೆದಿದ್ದು, ಇಲ್ಲಿನ ಲಾಹೋರ್‌ನಲ್ಲಿ ನಡೆದ ಪ್ರಸಿದ್ಧ ಪುಸ್ತಕ ಮೇಳದಲ್ಲಿ ಬುಕ್ಸ್‌ಗಳ ಬದಲು ಅಲ್ಲಿನ ಸ್ಟಾಲ್‌ಗಳಲ್ಲಿ ಬಿರಿಯಾನಿ ಮತ್ತು ಶವರ್ಮಾ ಇತ್ಯಾದಿ ತಿನಿಸುಗಳೇ ಅಧಿಕ ಸಂಖ್ಯೆಯಲ್ಲಿ ಸೇಲ್‌ ಆಗಿದೆಯಂತೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2024 | 2:31 PM

ಪುಸ್ತಕ ಪ್ರೇಮಿಗಳಿಗಾಗಿ ದೇಶ ವಿದೇಶಗಳಲ್ಲಿ ಆಗಾಗ್ಗೆ ಪುಸ್ತಕ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿರುತ್ತದೆ. ಸಾಮಾನ್ಯವಾಗಿ ಇಂತಹ ಮೇಳಗಳಿಗೆ ಭೇಟಿ ನೀಡುವವರು ತಮ್ಮಿಷ್ಟದ ಪುಸ್ತಕಗಳನ್ನೇ ಅಧಿಕ ಸಂಖ್ಯೆಯಲ್ಲಿ ಖರೀದಿ ಮಾಡುತ್ತಾರೆ. ಆದ್ರೆ ಪಾಕಿಸ್ತಾನದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಇಲ್ಲಿನ ಲಾಹೋರ್‌ನಲ್ಲಿ ನಡೆದ ಪ್ರಸಿದ್ಧ ಪುಸ್ತಕ ಮೇಳದಲ್ಲಿ ಭಾಗವಹಿಸಿದ ಜನರು ಬುಕ್ಸ್‌ಗಳನ್ನು ಕೊಳ್ಳುವ ಬದಲು ಅಲ್ಲಿನ ಸ್ಟಾಲ್‌ಗಳಲ್ಲಿ ಬಿರಿಯಾನಿ ಮತ್ತು ಶವರ್ಮಾ ಇತ್ಯಾದಿ ತಿನಿಸುಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಖರೀಸಿದ್ದಾರಂತೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಪಾಕಿಸ್ತಾನದಲ್ಲಿ ಮಾತ್ರ ಇದೆಲ್ಲಾ ಸಾಧ್ಯ ನೋಡಿ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಇತ್ತೀಚಿಗಷ್ಟೇ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಇಟ್ಟುಕೊಂಡು ಪಾಕಿಸ್ತಾನದ ಲಾಹೋರ್‌ನಲ್ಲಿ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಆದ್ರೆ ವಿಪರ್ಯಾಸ ಏನಂದ್ರೆ ಇಲ್ಲಿನ ಜನರು ಪುಸ್ತಕ ಮೇಳದಲ್ಲಿ ಬುಕ್ಸ್‌ಗಳನ್ನು ಕೊಳ್ಳುವ ಬದಲು ಹೆಚ್ಚಿನ ಸಂಖ್ಯೆಯಲ್ಲಿ ಬಿರಿಯಾನಿ ಮತ್ತು ಶವರ್ಮಾವನ್ನೇ ಖರೀದಿಸಿ ತಿಂದಿದ್ದಾರೆ. ಈ ಪುಸ್ತಕ ಮೇಳದಲ್ಲಿ ಕೇವಲ 35 ಪುಸ್ತಕಗಳು ಮಾತ್ರ ಮಾರಾಟವಾಗಿವೆ. ಆದ್ರೆ ಇಲ್ಲಿನ ಆಹಾರ ಮಳಿಗೆಗಳಲ್ಲಿ 1,200 ಕ್ಕೂ ಹೆಚ್ಚು ಶಮರ್ಮಾ ಮತ್ತು 800 ಪ್ಲೇಟ್‌ಗಳಿಗಿಂತಲೂ ಅಧಿಕ ಬಿರಿಯಾನಿ ಮತ್ತು 1600 ಚಿಕನ್‌ ಸ್ಯಾಂಡ್‌ವಿಚ್‌ ಮಾರಾಟವಾಗಿದೆ.

ಈ ಕುರಿತ ವಿಡಿಯೋವೊಂದನ್ನು ಅಮಿತಭ್‌ ಚೌಧರಿ (MithilaWaala) ಎಂಬವರು ತಮ್ಮ ಎಕ್ಸ್‌ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಲಾಹೋರ್‌ನಲ್ಲಿ ನಡೆದ ಪುಸ್ತಕ ಮೇಳದಲ್ಲಿ ಕೇವಲ 35 ಪುಸ್ತಗಳು ಮಾತ್ರ ಮಾರಾಟವಾಗಿದೆ. ಆದ್ರೆ ಈ ಪುಸ್ತಕ ಮೇಳದಲ್ಲಿನ ಫುಡ್‌ ಸ್ಟಾಲ್‌ಗಳಲ್ಲಿ 1,200 ಕ್ಕೂ ಹೆಚ್ಚು ಶಮರ್ಮಾ ಮತ್ತು 800 ಪ್ಲೇಟ್‌ಗಳಿಗಿಂತಲೂ ಅಧಿಕ ಬಿರಿಯಾನಿ ಮತ್ತು 1600 ಚಿಕನ್‌ ಸ್ಯಾಂಡ್‌ವಿಚ್‌ ಮಾರಾಟವಾಗಿವೆ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನು ಓದಿ: ನಿಮ್ಮ ಪಾದಗಳ ಆಕಾರವು ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಅಕ್ಟೋಬರ್‌ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದರಲ್ಲಿ ಆಶ್ಚರ್ಯ ಏನಿದೆ? ಪಾಕಿಸ್ತಾನದಲ್ಲಿ ಇದೆಲ್ಲಾ ಸಾಮಾನ್ಯ ಬಿಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರಿಗೆ ಪುಸ್ತಕ ಮೇಳದ ಅವಶ್ಯಕತೆಯೇ ಇಲ್ಲ ಬಿಡಿʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ