Personality Test: ನಿಮ್ಮ ಪಾದಗಳ ಆಕಾರವು ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಈ ಕೆಳಗಿನ ಚಿತ್ರದಲ್ಲಿಈ ಎರಡು ಆಕಾರಗಳ ಪಾದಗಳನ್ನು ಕಾಣಬಹುದು. ನಿಮ್ಮ ಪಾದ ಯಾವ ರೀತಿಯಿದೆ ಎಂದು ತಿಳಿದುಕೊಂಡು ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ. ನಿಮ್ಮ ಪಾದಗಳ ಆಕಾರವು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹಸ್ತ ಸಾಮುದ್ರಿಕ, ಸಂಖ್ಯಾಶಾಸ್ತ್ರ ಮಾತ್ರವಲ್ಲ,ವ್ಯಕ್ತಿಯ ದೇಹದ ಪ್ರತಿಯೊಂದು ಅಂಗದ ಆಕಾರವೂ ಆತನ ವ್ಯಕ್ತಿತ್ವ ಮಾತ್ರವಲ್ಲದೆ ಆತನ ಸಾಮರ್ಥ್ಯ, ದೌರ್ಬಲ್ಯ, ಮನಸ್ಥಿತಿ, ನಡವಳಿಕೆಯ ಬಗ್ಗೆಯೂ ಹೇಳಬಲ್ಲದು ಎನ್ನುತ್ತಾರೆ ತಜ್ಞರು. ಈಗ ನಿಮ್ಮ ಪಾದಗಳ ಆಕಾರವು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಈ ಮೇಲಿನ ಚಿತ್ರದಲ್ಲಿಈ ಎರಡು ಆಕಾರಗಳ ಪಾದಗಳನ್ನು ಕಾಣಬಹುದು. ನಿಮ್ಮ ಪಾದ ಯಾವ ರೀತಿಯಿದೆ ಎಂದು ತಿಳಿದುಕೊಂಡು ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ.
ಸಮತಟ್ಟಾದ ಪಾದ:
ಚಪ್ಪಟೆ ಪಾದಗಳನ್ನು ಹೊಂದಿರುವ ಜನರು ತುಂಬಾ ಮುಕ್ತ ಮನಸ್ಸಿನವರು. ಅವರು ವಾಸ್ತವವನ್ನು ಹೆಚ್ಚು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ಯಾವಾಗಲೂ ನಾಲ್ಕು ಜನರೊಂದಿಗೆ ಮಾತನಾಡಲು ಇಷ್ಟ ಪಡುತ್ತಾರೆ. ಜೊತೆಗೆ ಸ್ನೇಹಿತರ ದೊಡ್ಡ ವಲಯವನ್ನು ಹೊಂದಿರುತ್ತಾರೆ. ಅಲ್ಲದೆ ಈ ಜನರು ರಕ್ತಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಪ್ರತಿ ಸವಾಲನ್ನು ಆನಂದಿಸುತ್ತಾ ಮುನ್ನುಗುತ್ತಾರೆ.
ಇದನ್ನೂ ಓದಿ: ನಿಮ್ಮ ತುಟಿಗಳ ಆಕಾರವು ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ, ತುಟಿ ನೋಡಿಯೇ ಸ್ವಭಾವ ತಿಳಿಯಿರಿ
ಪಾದದ ಆಕಾರವು ವಕ್ರವಾಗಿದ್ದರೆ:
ಈ ಆಕಾರವನ್ನು ಹೊಂದಿರುವ ಜನರು ಹೆಚ್ಚು ದೂರದೃಷ್ಟಿಯನ್ನು ಹೊಂದಿರುತ್ತಾರೆ. ಅವರು ಸ್ವತಂತ್ರರು ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವವರು. ಎಲ್ಲವನ್ನೂ ಆಳವಾಗಿ ಯೋಚಿಸುವ ಬುದ್ಧಿವಂತ ಜನರು. ಹೆಚ್ಚು ಒಂಟಿಯಾಗಿರುವುದನ್ನು ಇಷ್ಟಪಡುತ್ತಾರೆ. ಅವರು ಪುಸ್ತಕ ಓದುವುದರಲ್ಲಿ ಮತ್ತು ಪ್ರತಿಯೊಂದು ವಿಷಯವನ್ನು ಕಲಿಯುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಜೀವನದಲ್ಲಿ ಸವಾಲುಗಳನ್ನು ಪ್ರೀತಿಸುತ್ತಾರೆ ಮತ್ತು ಬುದ್ಧಿವಂತಿಕೆಯಿಂದ ಎದುರಿಸುತ್ತಾರೆ. ಯಾವಾಗಲೂ ಸ್ಟ್ರಾಂಗ್ ಆಗಿದ್ದು, ಪ್ರತಿಯೊಂದು ಗುರಿಯನ್ನು ಉತ್ಸಾಹದಿಂದ ಪೂರ್ಣಗೊಳಿಸುತ್ತಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ