ಚೆನ್ನೈ: ಕಿರು ಚಿತ್ರ ನಿರ್ಮಿಸಲು ಹಣ ಬೇಕೆಂದು ಯುವಕನೊಬ್ಬ ತಾನು ಕಿಡ್ನಾಪ್ (Kidnap) ಆಗಿದ್ದೇನೆ ಎಂದು ತಂದೆಗೆ ಮೆಸೇಜ್ ಮಾಡಿ 30 ಲಕ್ಷ ರೂ ಗೆ ಬೇಡಿಕೆ ಇಟ್ಟ ಘಟನೆ ನಡೆದಿದೆ. 24 ವರ್ಷದ ಪಿ. ಕೃಷ್ಣಪ್ರಸಾದ್ ಎನ್ನುವ ಯುವಕ ಈ ನಕಲಿ ಕಿಡ್ನಾಪ್ (Fake Kidnap) ನಾಟಕವಾಡಿದ್ದಾನೆ. ಕೃಷ್ಣಪ್ರಸಾದ್ ತನ್ನ ಅಪಹರಣವಾಗಿದೆ ಎಂದು ತಂದೆಗೆ ಮೆಸೇಜ್ ಮಾಡಿ 30 ಲಕ್ಷ ರೂ ಗೆ ಬೇಡಿಕೆ ಇಟ್ಟಿದ್ದನು. ಕೃಷ್ಣಪ್ರಸಾದ್ ತಂದೆ ಪೆನ್ಸಿಲಾಯಾ ಚೆನ್ನೈನ ವಡಪಲನಿಯ ಉದ್ಯಮಿಯಾಗಿದ್ದು, ಮಗ ಕಾಣೆಯಾಗಿದ್ದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಚೆನ್ನೈ ನಗರ ಪೊಲೀಸರು (Chennai City Police) ಕೃಷ್ಣಪ್ರಸಾದ್ನನ್ನು ಸಿಂಕದರಾಬಾದ್ನಲ್ಲಿ ಪತ್ತೆ ಮಾಡಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.
ನ್ಯೂಸ್ 18 ವರದಿಯ ಪ್ರಕಾರ, ಕೃಷ್ಣಪ್ರಸಾದ್ ತಂದೆ ಜ.14ರಂದು ಪೊಲೀಸರಿಗೆ ದೂರು ನೀಡುವ ವೇಳೆ, ಆತ ಹಿಂದಿನ ದಿನ ಮಾಲ್ಗೆ ತೆರಳಿದ್ದನು ಮತ್ತೆ ಮನೆಗೆ ಮರಳಲಿಲ್ಲ. ಮರುದಿನ ಫೋನ್ಗೆ ನಿಮ್ಮ ಮಗನನ್ನು ಕಿಡ್ನಾಪ್ ಮಾಡಲಾಗಿದೆ ಆತನನ್ನು ಬಿಡುಗಡೆ ಮಾಡಲು 30 ಲಕ್ಷ ರೂ . ಹಣ ನೀಡಿ ಎಂಬ ಸಂದೇಶ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲು ಸೈಬರ್ ಕ್ರೈಮ್ ಪೊಲೀಸರ ತಂಡವನ್ನು ರಚಿಸಿದ್ದರು. ನಂತರ ಮೆಸೆಜ್ ಕಳುಹಿಸಿದ ಮೊಬೈಲ್ ಲೊಕೇಷನ್ ಹುಡುಕುವ ಮೂಲಕ ಸಿಕಂದರಾಬಾದ್ನಲ್ಲಿ ಕೃಷ್ಣ ಪ್ರಸಾದ್ನನ್ನು ಪತ್ತೆ ಮಾಡಿದ್ದಾರೆ. ಆ ಬಳಿಕ ತಂದೆಯ ಒತ್ತಾಯದ ಮೇರೆಗೆ ಆತನಿಗೆ ಎಚ್ಚರಿಗೆ ನೀಡಿ ಪೊಲೀಸರು ಮನೆಗೆ ಕಳಿಹಿಸಿದ್ದಾರೆ.
ಮನೆಯಿಂದ ಹಣ ಪಡೆಯಲು ಅಥವಾ ತಮ್ಮ ಹೇಳಿಕೆಗಳನ್ನು ಈಡೇರಿಸಿಕೊಳ್ಳಲು ಈ ಹಿಂದೆಯೂ ಈ ರೀತಿಯ ನಕಲಿ ಅಪಹರಣ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಹಿಂದೆ ಲುಧಿಯಾನದ ಅವಳಿ ಮಕ್ಕಳು ಸ್ನೇಹಿತರನ್ನು ಭೇಟಿಯಾಗಲು ಹೋದ ವೇಳೆ ತಮಾಷೆಗೆಂದು ತಾವು ಅಪಹರಣವಾಗಿದ್ದೇವೆ ಎಂದು ಕುಟುಂಬಕ್ಕೆ ತಿಳಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದ ಘಟನೆ ನಡೆದಿತ್ತು.
ಇದನ್ನೂ ಓದಿ:
Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ
Published On - 12:20 pm, Wed, 19 January 22