ಹಾವು(Snake) ಎಂಥಾ ಜೀವಿ ಎಂದರೆ ಅದು ವಿಷಕಾರಿ ಆಗಿರಲಿ, ಆಗಿರದೇ ಇರಲಿ ಅದನ್ನು ನೋಡಿದಾಕ್ಷಣ ಭಯವಾಗುವುದಂತೂ ನಿಜ. ಪ್ರಪಂಚದಲ್ಲಿ ಹಲವು ಜಾತಿಯ ಹಾವುಗಳಿವೆ. ಕೆಲವು ಚಿಕ್ಕ ಗಾತ್ರದ್ದಾಗಿದ್ದರೆ ಇನ್ನೂ ಹಲವು ಉದ್ದವಾಗಿರುತ್ತವೆ, ಹಾವುಗಳ ರಕ್ತ ತಣ್ಣಗಿರುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಹಾಗಾಗಿ ಅವು ಬೆಚ್ಚಗಿರುವ ಸ್ಥಳಗಳನ್ನು ಆಯ್ಕೆಮಾಡಿಕೊಳ್ಳುತ್ತವೆ.
ಅನೇಕ ಬಾರಿ, ಶೂ ಒಳಗೆ, ಅಥವಾ ಬೆಚ್ಚಗಿರುವ ಮನೆಯ ಯಾವುದೋ ಮೂಲೆಯಲ್ಲಿ ಅಡಗಿರುತ್ತವೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಹೆಲ್ಮೆಟ್ ಒಳಗೆ ಹಾವು ಕಾಣಿಸಿಕೊಂಡಿದೆ.
ವ್ಯಕ್ತಿಯೊಬ್ಬರು ತಲೆಗೆ ಹೆಲ್ಮೆಟ್ ಹಾಕದೆ ಗಾಡಿಯಲ್ಲಿ ಹೆಲ್ಮೆಟ್ ಇಟ್ಟುಕೊಂಡು ಬೈಕ್ ಅನ್ನು ಚಲಾಯಿಸುತ್ತಿರುತ್ತಾರೆ ತುಂಬಾ ಹೊತ್ತಿನಿಂದ ಏನೋ ಸಪ್ಪಳಬರುತ್ತಿದೆಯಲ್ಲಾ ಎಲ್ಲಿಂದ ಎಂದು ಆಲೋಚನೆ ಮಾಡುತ್ತಾರೆ. ಆಗ ಎದುರು ಇಟ್ಟಿದ್ದ ಹೆಲ್ಮೆಟ್ ನೋಡಿದಾಗ ಹಾವು ಹೆಲ್ಮೆಟ್ನಿಂದ ಇಣುಕಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ.
ಮತ್ತಷ್ಟು ಓದಿ: ಹಾವನ್ನು ಕೋಣೆಗೆ ಬಿಟ್ಟು ಪತ್ನಿ, ಮಗಳನ್ನು ಹತ್ಯೆ ಮಾಡಿದ್ದ ವ್ಯಕ್ತಿಯ ಬಂಧನ
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ Instagram ನಲ್ಲಿ ಹಂಚಿಕೊಂಡಿದ್ದಾರೆ . ಇದನ್ನು d_shrestha10 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೇಳೆ ರಸ್ತೆಯಲ್ಲಿ ಹೆಲ್ಮೆಟ್ ಎಸೆದಿರುವುದು ಕಂಡು ಬಂದಿದೆ. ಅದರೊಳಗಿಂದ ಹಾವೊಂದು ಇಣುಕಿ ನೋಡುತ್ತಿತ್ತು. ಅವನ ಹೆಲ್ಮೆಟ್‌ನಲ್ಲಿ ಹಾವು ಇದೆ ಎಂದು ಯಾರೋ ಇದ್ದಕ್ಕಿದ್ದಂತೆ ಅರಿತು ಅದನ್ನು ರಸ್ತೆಗೆ ಎಸೆದರಂತೆ. ಎಚ್ಚರಿಕೆಯಿಂದ ನೋಡಿದಾಗ ಮಾತ್ರ ಹಾವನ್ನು ಗಮನಿಸಬಹುದು.
ಹಲವು ಮಂದಿ ಭಯಗೊಂಡಿದ್ದಾರೆ, ಬೈಕ್ ಸವಾರನ ಪರಿಸ್ಥಿತಿ ಏನಾಗಿರಬೇಡ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಬೈಕ್ ಚಾಲಕ ಪ್ರಾಣವನ್ನೂ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದೇನೇ ಇರಲಿ ನೀವು ಮನೆಯಲ್ಲಿ ಶೂ ಧರಿಸುವಾಗ, ಹೆಲ್ಮೆಟ್ ಹಾಕಿಕೊಳ್ಳುವಾಗ, ಶೂ ರ್ಯಾಕ್ನಲ್ಲಿ, ಮನೆಯ ಮೂಲೆಗಳನ್ನು ಪದೇ ಪದೇ ಚೆಕ್ ಮಾಡುತ್ತಿರುವುದು ಒಳಿತು. ಕೇವಲ ಹಾವಲ್ಲ ಚೇಳು ಸೇರಿದಂತೆ ಯಾವುದೇ ವಿಷಜಂತುಗಳ ಕಡಿತದಿಂದ ನೀವು ತಪ್ಪಿಸಿಕೊಳ್ಳಬಹುದು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:44 am, Wed, 29 November 23