ಗೋಲ್ಡನ್ ಹಾರ್ಸ್: ವಿಶ್ವದ ಅತ್ಯಂತ ಸುಂದರವಾದ ಕುದುರೆ, ಇಲ್ಲಿದೆ ನೋಡಿ 

ಸಾಮಾನ್ಯವಾಗಿ ನಾವೆಲ್ಲರೂ ಕೆಲವೊಂದು ತಳಿಯ, ವಿವಿಧ ಬಣ್ಣದ ಕುದುರೆಗಳನ್ನು ನೋಡಿರುತ್ತೇವೆ. ಆದರೆ ನೀವು ಎಂದಾದರೂ  ವಿಶ್ವದ ಅತ್ಯಂತ ಸುಂದರವಾದ ಕುದುರೆಯನ್ನು ನೋಡಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ  ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಥೇಟ್ ಯುನಿಕಾರ್ನ್ ಅಂತೆಯೇ ಕಾಣುವ ಜಗತ್ತಿನ ಅತ್ಯಂತ ಸುಂದರವಾದ ಕುದುರೆಯನ್ನು ನೀವು ನೋಡಬಹುದು. 

ಗೋಲ್ಡನ್ ಹಾರ್ಸ್: ವಿಶ್ವದ ಅತ್ಯಂತ ಸುಂದರವಾದ ಕುದುರೆ, ಇಲ್ಲಿದೆ ನೋಡಿ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 28, 2023 | 2:06 PM

ನೀವು ಅನೇಕ ತಳಿಯ, ವಿವಿಧ ಬಣ್ಣಗಳ  ಕುದುರೆಗಳನ್ನು ನೋಡಿರಬಹುದು, ಆದರೆ  ಎಂದಾದರೂ ವಿಶ್ವದ ಅತ್ಯಂತ ಸುಂದರವಾದ ಕುದುರೆಯನ್ನು ನೋಡಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಈ ಜಗತ್ತಿನ ಅತ್ಯಂತ ಸುಂದರವಾದ ಕುದುರೆಯನ್ನು ಕಾಣಬಹುದು. ಕಾಲ್ಪನಿಕ ಕಥೆಗಳಲ್ಲಿ ರಾಜಕುಮಾರಿಯನ್ನು ಹೊತ್ತು ತಿರುಗುವ ಕುದುರೆಯಂತೆಯೇ ಕಾಣುವ ಈ ಅತೀ ಸುಂದರವಾದ  ಕುದುರೆಯನ್ನು ಕಂಡು  ಹಲವರು ಆಶ್ಚರ್ಯಚಕಿತರಾಗಿದ್ದು,  ಇಂತಹ  ಕುದುರೆ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ ಎಂದು ಕೇಳುತ್ತಿದ್ದಾರೆ.

ಅಖಲ್-ಟೆಕೆ ತಳಿಯ  ಈ ಕುದುರೆ ಮೂಲತಃ    ತುರ್ಕಮೆನಿಸ್ತಾನ್ ರಾಷ್ಟ್ರದ್ದು,  ಚಿನ್ನದಂತೆ ಹೊಳೆಯುವ ಮೈ ಬಣ್ಣವನ್ನು ಹೊಂದಿರುವ ಈ ಸುಂದರ ಕುದುರೆಯನ್ನು ಸ್ವರ್ಗದಿಂದ ಇಳಿದು ಬಂದ ಪ್ರಾಣಿ ಎಂದು ನಂಬಲಾಗುತ್ತದೆ. ವಿಶೇಷವಾಗಿ ಈ ಕುದುರೆಗಳು ತುಂಬಾ ನಿಷ್ಠಾವಂತ ಪ್ರಾಣಿಗಳಾದ್ದು, ಅವುಗಳ ಮಾಲೀಕರು ಮಾತ್ರ ಅವುಗಳ ಮೇಲೆ ಕುಳಿತು ಸವಾರಿ ಮಾಡಲು ಅದು ಅವಕಾಶ ನೀಡುತ್ತದೆ. ಇಡೀ ಪ್ರಪಂಚದಲ್ಲಿ  7000 ಕ್ಕಿಂತಲೂ ಕಡಿಮೆ ಈ ತಳಿಯ ಕುದುರೆಗಳಿವೆ.   ಅಲ್ಲದೆ ಇದು ತುರ್ಕುಮೆನಿಸ್ತಾನದ ರಾಷ್ಟ್ರೀಯ ಪ್ರಾಣಿ ಕೂಡಾ ಹೌದು. ನೋಡಲು ಯುನಿಕಾರ್ನ್ ಅಂತೆಯೇ ಕಾಣುವ ಈ ಕುದುರೆಗೆ ಹೆಚ್ಚಿನ ಬೇಡಿಕೆಯಿದ್ದು, ಭಾರತದಲ್ಲಿ ಈ ಕುದುರೆಯ ಬೆಲೆ ಸುಮಾರು 30 ಲಕ್ಷ ರೂಪಾಯಿಗಳು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

Gabriele Corno  ಎಂಬವರು ತಮ್ಮ  X  ಖಾತೆಯಲ್ಲಿ  ಈ ಕುದುರೆಯ ಕುರಿತ ವಿಡಿಯೋವನ್ನು ಹಂಚಿಕೊಂಡಿದ್ದು,  ಇದು ಅಖಲ್-ಟೆಕೆ ಎಂದು ಕರೆಯಲ್ಪಡುವ ಅಪರೂಪದ ತಳಿಯ ಕುದುರೆಯಾಗಿದೆ. ಇದರ ಮೈಬಣ್ಣ ಕಾಣಲು ಚಿನ್ನದ ಹೊಳಪಿನಂತಿದ್ದು,  ಈ ಕಾರಣದಿಂದಾಗಿ ಈ ಕುದುರೆಯನ್ನು ಗೋಲ್ಡನ್ ಹಾರ್ಸ್ ಎಂದೂ ಕರೆಯುತ್ತಾರೆ ಎಂಬ ಶೀರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾರೆ.  13 ಸೆಕೆಂಡಿನ ಈ ವಿಡಿಯೋದಲ್ಲಿ ಬಹಳ ಸುಂದರವಾಗಿರುವ ಶ್ವೇತವರ್ಣದ ಅಖಲ್-ಟೆಕೆ ತಳಿಯ ಕುದುರೆ ಓಡಾಡುವುದನ್ನು ಕಾಣಬಹುದು.

ಇದನ್ನೂ ಓದಿ: ನೀವು ಎಂದಾದರೂ ಮೆಹಂದಿ ಕುಕೀಸ್ ತಿಂದಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ 

ನವೆಂಬರ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 129.5 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಕಮೆಂಟ್ಸ್​​​ಬಂದಿವೆ.  ಒಬ್ಬ ಬಳಕೆದಾರರು ʼಇದು ನೋಡಲು ಯುನಿಕಾರ್ನ್ ನಂತೆಯೇ ಬಹಳ ಸುಂದರವಾಗಿದೆ ಎಂದು ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ಎಂತಹ ಚೆಲುವಿದು ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ಪ್ರಕೃತಿಯ ಅದ್ಭುತ, ಇದು ಕಾಣಲು ಕಾಲ್ಪನಿಕ ಕಥೆಯಲ್ಲಿರುವ ಕುದುರೆಯಂತಿದೆ” ಎಂದು ಹೇಳಿದ್ದಾರೆ.  ಇನ್ನು ಅನೇಕರು ಅಬ್ಬಬ್ಬಾ ಎಷ್ಟೊಂದು ಸುಂದರವಾದ ಕುದುರೆಯಿದು ಎಂದು ಆಶ್ಚರ್ಯಚಕಿತರಾಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ