Viral Video: ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ ಪರಿಸ್ಥಿತಿ ಏನಾಯ್ತು ನೋಡಿ!

ತೂಗುತ್ತಿರುವ ಮರದ ಸೇತುವೆ ಮೇಲೆ ವ್ಯಕ್ತಿ ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಬೇಕು ಅನ್ನುವಷ್ಟರಲ್ಲಿ ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

Viral Video: ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ ಪರಿಸ್ಥಿತಿ ಏನಾಯ್ತು ನೋಡಿ!
ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ
Edited By:

Updated on: Sep 12, 2021 | 11:27 AM

ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಸ್ಟಂಟ್ ಮೇಲೆ ಹೆಚ್ಚು ಒಲವು. ಬೈಕ್, ಸೈಕಲ್ ಜತೆಗೆ ಸ್ಟಂಟ್ ಮಾಡುತ್ತಾರೆ. ಆದರೆ ಕೆಲವು ಬಾರಿ ಇಂಥಹ ಸಾಹಸಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋಗಳು. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ತೂಗು ಸೇತುವೆ ಮೇಲೆ ವ್ಯಕ್ತಿ ಬೈಕ್ ಹತ್ತಿ ರೈಡ್ ಹೊರಟೆದ್ದಾನೆ. ಈತನ ಸಾಹಸ ಕೊನೆಗೆ ಅಚಾತುರ್ಯಕ್ಕೆ ಕಾರಣವಾಗಿದೆ. ವಿಡಿಯೋ ಇದೆ ನೀವೂ ನೋಡಿ.

ತೂಗುತ್ತಿರುವ ಮರದ ಸೇತುವೆ ಮೇಲೆ ವ್ಯಕ್ತಿ ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಬೇಕು ಅನ್ನುವಷ್ಟರಲ್ಲಿ ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಕೆಲವು ತಮಾಷೆಯ ವಿಡಿಯೋವೂ ಸಹ ಎಚ್ಚರಿಕೆಯ ಸಂದೇಶವನ್ನು ಸಾರುತ್ತದೆ. ಸ್ಟಂಟ್ ಮಾಡಲು ಮುಂದಾದ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ನೋಡಿ ಆದರೆ ನೀವು ಹೀಗೆಲ್ಲಾ ಮಾಡದಿರಿ ಎಂಬ ಸಂದೇಶವನ್ನು ಸಾರುವ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಅನೇಕ ಜನರು ಈ ದೃಶ್ಯಕ್ಕೆ ತಮಾಷೆಯ ಕಾಮೆಂಟ್ಸ್​ಗಳನ್ನು ಮಾಡಿದ್ದಾರೆ. ಮುಂದಿನ ಬಾರಿ ಸ್ಟಂಟ್ ಮಾಡುವಾಗ ವ್ಯಕ್ತಿ ಎಚ್ಚರಿಕೆಯಿಂದಿರುತ್ತಾರೆ ಎಂದು ಹೇಳಿದ್ದಾರೆ. ಇನ್ನುಕೆಲವರು ಪ್ರತಿಕ್ರಿಯಿಸಿದ್ದು, ಮುಂದಿನ ಬಾರಿ ಸ್ಟಂಟ್ ಮಾಡಲು ಹೋಗುವುದೇ ಡೌಟು! ಎಂದಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಇದೀಗ 12 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Viral Video: ಈ ವೃದ್ಧ ಮಹಿಳೆಗೆ ದೈತ್ಯ ಆನೆಯೇ ಮೊಮ್ಮಗ; ಕೈ ತುತ್ತು ತಿನ್ನಿಸುವ ಹೃದಯಸ್ಪರ್ಶಿ ವಿಡಿಯೋ ಸಿಕ್ಕಾಪಟ್ಟೆ ವೈರಲ್

Viral Video: ಮದುವೆ ದಿನದಂದೇ ಮೊಬೈಲ್​ನಲ್ಲಿ ಗೇಮ್ ಆಡುತ್ತಾ ಕುಳಿತ ವಧು ವರರು; ವಿಡಿಯೋ ವೈರಲ್

(Man doing stunt while riding bike video goes viral)