Viral Video: ಹಸು ಎಂದುಕೊಂಡು ಎಮ್ಮೆಗೆ 10 ಕೆಜಿ ಚಿನ್ನದ ಸರ ಹಾಕಿದ ಮಾಲೀಕ; ಇಂಟರ್ನೆಟ್​ನಲ್ಲಿ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿರುವ ಪ್ರಾಣಿ ಹಸು ಎಂದು ತಪ್ಪಾಗಿ ತಿಳಿದು ಎಮ್ಮೆಯನ್ನು ಸಾಕಿಕೊಂಡಿದ್ದಾರೆ. ಆ ಎಮ್ಮೆಗೆ 10 ಕೆಜಿ ಚಿನ್ನದ ಸರವನ್ನು ಮಾಡಿ ತೊಡಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಲೇವಡಿ ಮಾಡಿದ್ದಾರೆ.

Viral Video: ಹಸು ಎಂದುಕೊಂಡು ಎಮ್ಮೆಗೆ 10 ಕೆಜಿ ಚಿನ್ನದ ಸರ ಹಾಕಿದ ಮಾಲೀಕ; ಇಂಟರ್ನೆಟ್​ನಲ್ಲಿ ವಿಡಿಯೋ ವೈರಲ್
ಎಮ್ಮೆಗೆ 10 ಕೆಜಿ ಚಿನ್ನದ ಸರ ಹಾಕಿದ ಮಾಲೀಕ

Updated on: Jul 16, 2024 | 2:58 PM

ಸಾಮಾಜಿಕ ಜಾಲತಾಣದಲ್ಲಿ ಎಮ್ಮೆಯ ವಿಡಿಯೋವೊಂದು ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ತಮಾಷೆಯ ವಿಡಿಯೋಗಳು ಪ್ರತಿದಿನ ನಮ್ಮ ಗಮನವನ್ನು ಸೆಳೆಯುತ್ತವೆ. ನಮ್ಮ ಭಾವನೆಗಳ ವ್ಯಾಪ್ತಿಯನ್ನು ಮೀರಿ ಹೊರಹೊಮ್ಮಿಸುವ ಕಥೆಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ನಾವು ನೋಡುತ್ತಿರುತ್ತೇವೆ. ಅವುಗಳಲ್ಲಿ ಕೆಲವು ನಮ್ಮನ್ನು ನಗುವಂತೆ ಮಾಡುತ್ತದೆ, ಇನ್ನು ಕೆಲವು ನಮ್ಮನ್ನು ಅಳುವಂತೆ ಮಾಡುತ್ತವೆ ಮತ್ತೆ ಕೆಲವು ನಮ್ಮ ಗ್ರಹಿಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ.

ಇತ್ತೀಚೆಗೆ ವ್ಯಕ್ತಿಯೊಬ್ಬ ಎಮ್ಮೆಗೆ 10 ಕೆ.ಜಿ ಚಿನ್ನವನ್ನು ಹೊದಿಸಿ ಸುದ್ದಿಯಾಗಿದ್ದಾರೆ. ಅವರು ಎಮ್ಮೆಗೆ ಚಿನ್ನ ಹಾಕಿದ್ದು ಎಷ್ಟು ದೊಡ್ಡ ಸುದ್ದಿಯಾಗಿದೆಯೋ ಆ ಎಮ್ಮೆಯನ್ನು ಅವರು ಹಸು ಎಂದು ತಪ್ಪಾಗಿ ಭಾವಿಸಿದ್ದರು ಎಂಬ ಸಂಗತಿ ಇನ್ನೂ ದೊಡ್ಡ ಸುದ್ದಿಯಾಗಿದೆ. ತಮ್ಮ ಮನೆಯಲ್ಲಿರುವುದು ಹಸು ಎಂದು ತಪ್ಪಾಗಿ ಭಾವಿಸಿದ ವ್ಯಕ್ತಿ ಎಮ್ಮೆಗೆ 10 ಕೆಜಿ ಚಿನ್ನದಿಂದ ಅಲಂಕರಿಸಿದ್ದಾರೆ. ಅದನ್ನು ಇಂಟರ್ನೆಟ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಆಗ ನೆಟ್ಟಿಗರು ಅದು ಹಸುವಲ್ಲ ಎಮ್ಮೆ ಎಂದು ಹೇಳಿ ಲೇವಡಿ ಮಾಡಿದ್ದಾರೆ.


ಇದನ್ನೂ ಓದಿ: Shocking News: ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ; ಶಾಕಿಂಗ್ ವಿಡಿಯೋ ವೈರಲ್

ಈ ವೀಡಿಯೊ ಬಹಳ ಬೇಗ ವೈರಲ್ ಆಯಿತು ಮತ್ತು ಪ್ರಪಂಚದಾದ್ಯಂತದ ಜನರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಕೆಲವರು ಆ ವ್ಯಕ್ತಿಯ ತಪ್ಪಿನಿಂದ ಎಂಜಾಯ್ ಮಾಡಿದರು ಮತ್ತು ಅದನ್ನು ಹಾಸ್ಯಮಯವಾಗಿ ಸ್ವೀಕರಿಸಿದರು. ಇನ್ನು ಕೆಲವರು ಅವರ ಸಂಪತ್ತಿನ ಅಬ್ಬರದ ಪ್ರದರ್ಶನದಿಂದ ಕೋಪಗೊಂಡರು ಮತ್ತು ಮನುಷ್ಯನ ಮೌಲ್ಯಗಳನ್ನು ಪ್ರಶ್ನಿಸಿದರು.

ಇದನ್ನೂ ಓದಿ: Viral Video: ಕೇರಳದ ದೇವಾಲಯಕ್ಕೆ ಸೀರೆಯುಟ್ಟ ವಿದೇಶಿ ಮಹಿಳೆಗೆ ನಿರ್ಬಂಧ; ವಿಡಿಯೋ ವೈರಲ್

ಇನ್‌ಸ್ಟಾಗ್ರಾಮ್ ಬಳಕೆದಾರ ಮುಹಮ್ಮದ್ ಡ್ಯಾನಿಶ್ ಯಾಕೂಬ್ ತನ್ನ ಮನೆಯಲ್ಲಿರುವ ಎಮ್ಮೆಗೆ ಬೆಲೆಬಾಳುವ ಚಿನ್ನದ ಸರವನ್ನು ಕಟ್ಟುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಯಾಕೂಬ್, “ಹಸುವಿಗೆ 10 ಕೆಜಿ ಚಿನ್ನದ ಸರ” ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದಕ್ಕೆ ಭಾರೀ ಟೀಕೆ ಹಾಗೂ ಕಮೆಂಟ್​ಗಳು ಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ