AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋದಲ್ಲಿ ಪಟ್ಟಾಂಗ ಹೊಡೆಯುತ್ತಾ ಯುವತಿಯರ ಮೇಕಪ್; ಉಸ್ಸಪ್ಪಾ ಎಂದ ಯುವಕರು

ದೆಹಲಿ ಮೆಟ್ರೋದಲ್ಲಿ ಯುವತಿಯರಿಬ್ಬರು ಹರಟುತ್ತಾ ಕುಳಿತು ಮುಖಕ್ಕೆ ಮೇಕ್ಅಪ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೇನು ಮನೆಯಾ? ರೈಲಾ? ಎಂದು ನೆಟ್ಟಿಗರು ತಮಾಷೆ ಮಾಡಿದರೆ ಯುವಕರು ಆ ಮೇಕಪ್ ವಿಡಿಯೋ ನೋಡಿ ಉಸ್ಸಪ್ಪಾ ಎಂದಿದ್ದಾರೆ.

ಮೆಟ್ರೋದಲ್ಲಿ ಪಟ್ಟಾಂಗ ಹೊಡೆಯುತ್ತಾ ಯುವತಿಯರ ಮೇಕಪ್; ಉಸ್ಸಪ್ಪಾ ಎಂದ ಯುವಕರು
ಮೆಟ್ರೋ ರೈಲಿನೊಳಗೆ ಯುವತಿಯರ ಮೇಕಪ್Image Credit source: hindustan times
ಸುಷ್ಮಾ ಚಕ್ರೆ
|

Updated on: Jul 16, 2024 | 6:23 PM

Share

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಮಹಿಳೆಯರು ಮೇಕ್ಅಪ್ ಮಾಡುವ ವೈರಲ್ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಇದು ಮನೆಯಿಂದ ಬೇಗ ಕೆಲಸಕ್ಕೆ ಹೊರಡುವ ಯುವತಿಯರ ಈ ಸಮಯ ನಿರ್ವಹಣೆ ಮತ್ತು ಪ್ರಯಾಣದ ಎಂಜಾಯ್​ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ದೆಹಲಿ ಮೆಟ್ರೋ ಜನರು ಮತ್ತು ಅನುಭವಗಳ ವೈವಿಧ್ಯಮಯ ಕೇಂದ್ರವಾಗಿದೆ. ಇದರಲ್ಲಿ ಆಗಾಗ ಅಸಾಮಾನ್ಯ ಘಟನೆಗಳು ಕೂಡ ನಡೆಯುತ್ತಿರುತ್ತದೆ.

ಕೆಲವೊಮ್ಮೆ ಮೆಟ್ರೋ ರೈಲಿನಲ್ಲಿ ಹಾಡು, ರೀಲ್ಸ್, ಡ್ಯಾನ್ಸ್ ಮುಂತಾಧ ಮನರಂಜನೆ ಕೂಡ ಸಿಗುತ್ತದೆ. ಇದೀಗ ಇಬ್ಬರು ಮಹಿಳೆಯರು ಮೆಟ್ರೋದಲ್ಲಿ ಮೇಕಪ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಯುವತಿಯರಿಬ್ಬರು ಭಾಗಶಃ ಖಾಲಿ ಇರುವ ಮೆಟ್ರೋದಲ್ಲಿ ಕುಳಿತಿರುವುದು ಕಂಡುಬರುತ್ತದೆ. ಅದೇ ಅವಕಾಶವನ್ನು ಬಳಸಿಕೊಂಡು ಅವರು ಮೇಕ್ಅಪ್ ಕಿಟ್ ತೆಗೆದು ಮುಖಕ್ಕೆ ಮೇಕಪ್ ಹಚ್ಚಿಕೊಳ್ಳಲು ಶುರು ಮಾಡುತ್ತಾರೆ.

ಇದನ್ನೂ ಓದಿ: Viral Video: ಕೇರಳದ ದೇವಾಲಯಕ್ಕೆ ಸೀರೆಯುಟ್ಟ ವಿದೇಶಿ ಮಹಿಳೆಗೆ ನಿರ್ಬಂಧ; ವಿಡಿಯೋ ವೈರಲ್

ಪಟ್ಟಾಂಗ ಹೊಡೆಯುತ್ತಾ ತಮ್ಮದೇ ಲೋಕದಲ್ಲಿರುವ ಈ ಯುವತಿಯರು ರೈಲಿನ ಬೋಗಿಯೊಳಗೆ ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅನೇಕ ವೀಕ್ಷಕರು ಈ ವೀಡಿಯೊವನ್ನು ವಿನೋದಮಯವಾಗಿ ಕಂಡುಕೊಂಡಿದ್ದಾರೆ, ಇನ್ನು ಕೆಲವರು ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಸಿಗುವ ಸಮಯದಲ್ಲೇ ಒಳ್ಳೆ ನಿದ್ರೆ ಮಾಡುವುದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

“ಅವರಿಗೆ ಮೆಟ್ರೋ ಪಾಸ್‌ನೊಂದಿಗೆ ಮೇಕಪ್ ಕಿಟ್ ಅನ್ನು ಉಚಿತವಾಗಿ ನೀಡಬೇಕು” ಎಂದು ಕೆಲವರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಇದು ಬಹಳ ಒಳ್ಳೆಯ ಐಡಿಯಾ ಎಂದು ಕೆಲವರು ಹೇಳಿದ್ದರೆ ಇನ್ನು ಕೆಲವರು ನನಗೆ ಇಷ್ಟು ಸಮಯ ಸಿಕ್ಕಿದ್ದರೆ ನಿದ್ರೆ ಮಾಡಿಕೊಂಡು ಬಿಡುತ್ತಿದ್ದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ