Viral Video: ದೈತ್ಯಾಕಾರದ ಹುಲಿಗಳಿಗೆ ಬಾಟಲಿಯಿಂದ ಹಾಲು ಕುಡಿಸಿದ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್​

ವಿಡಿಯೋವನ್ನು ಮೊದಲಿಗೆ ಟ್ವಿಟರ್​ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಸಾವಿನೊಂದಿಗೆ ವ್ಯಕ್ತಿ ಆಟವಾಡುತ್ತಾನೆ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.

Viral Video: ದೈತ್ಯಾಕಾರದ ಹುಲಿಗಳಿಗೆ ಬಾಟಲಿಯಿಂದ ಹಾಲು ಕುಡಿಸಿದ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್​
ದೈತ್ಯಾಕಾರದ ಹುಲಿಗಳಿಗೆ ಬಾಟಲಿಯಿಂದ ಹಾಲು ಕುಡಿಸಿದ ವ್ಯಕ್ತಿ
Edited By:

Updated on: Aug 16, 2021 | 1:19 PM

ಸಾಮಾಜಿಕ ಮಾಧ್ಯಮದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದು ನಂಬುವಂಥದ್ದಾಗಿದ್ದರೆ, ಇನ್ನು ಕೆಲವೊಂದಿಷ್ಟನ್ನು ನಂಬಲು ಕಷ್ಟ. ಕೆಲವು ಸ್ಪೂರ್ತಿ ತುಂಬುವು ವಿಡಿಯೋಗಳು ಮನ ಗೆಲ್ಲುತ್ತವೆ. ಇನ್ನು ಕೆಲವು ಅಚ್ಚರಿಯ ವಿಡಿಯೋಗಳು ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಹರಿದಾಡುತ್ತಿದೆ. ದೃಶ್ಯ ಹಳೆಯದ್ದಾಗಿದ್ದರೂ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಓರ್ವ ವ್ಯಕ್ತಿ ಹಾಲು ತುಂಬಿದ ಎರಡು ಬಾಟಲಿಯನ್ನು ಹಿಡಿದು ನಿಂತಿರುವುದನ್ನು ನೋಡಬಹುದು. ತಕ್ಷಣವೇ ಎರಡು ಹುಲಿಗಳು ಆತನ ಬಳಿ ಬಂದು ಆತನ ಭುಜದ ಮೇಲೆ ಕಾಲು ಹಾಕಿ ನಿಲ್ಲುತ್ತವೆ. ಬಳಿಕ ಬಾಟಲಿಯಿಂದ ಹಾಲನ್ನು ಕುಡಿಯುತ್ತವೆ. ಹುಲಿಗಳ ಹೆಸರು ಕೇಳಿದಾಕ್ಷಣವೇ ಭಯವಾಗುತ್ತದೆ. ಆದರೆ ಈತನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವಕ್ಕೆ ಅಪಾಯ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ವಿಡಿಯೋವನ್ನು ಮೊದಲಿಗೆ ಟ್ವಿಟರ್​ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡಿ ನೆಟ್ಟಿಗರು ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಸಾವಿನೊಂದಿಗೆ ವ್ಯಕ್ತಿ ಆಟವಾಡುತ್ತಾನೆ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ. ಇವರು ಮಾಡುತ್ತಿರುವ ಸ್ಟಂಟ್ ಅಪಾಯವೊಡುತ್ತದೆ ಎಂದು ಮತ್ತೋರ್ವರು ಹೇಳಿದ್ದಾರೆ. ಅನೇಕ ಬಳಕೆದಾರರು ಇದು ಆಟವೆಂದು ಭಾವಿಸಬೇಡಿ, ಜೀವಕ್ಕೇ ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ವಿಡಿಯೋ ವೈರಲ್ ಆಗಿದೆ. ಆಗಸ್ಟ್ 12ರಂದು ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡಲಾಗಿದ್ದು, 1 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 33 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು, 4 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ:

Viral Video: ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್​​; ವಧು – ವರ ಕಂಗಾಲು! ವಿಡಿಯೋ ವೈರಲ್​

Viral Video: ಲಯನ್​ Vs ಟೈಗರ್​.. ಯಾರು ಗೆಲ್ಲುತ್ತಾರೆ ನೀವೇ ನೋಡಿ!