ಅಂಗಡಿಯಲ್ಲಿ ಖರೀದಿಸಿದ ಖಾರದ ತಿಂಡಿ ಪ್ಯಾಕೆಟ್​ನಲ್ಲಿ ಸತ್ತ ಹಲ್ಲಿ ಪತ್ತೆ!

| Updated By: shruti hegde

Updated on: Oct 28, 2021 | 2:06 PM

ತಮಿಳುನಾಡಿನ ಅಂಗಡಿಯೊಂದರಲ್ಲಿ ಖರೀದಿಸಿದ ತಿಂಡಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಕೆಲಸಗಾರರ ನಿರ್ಲಕ್ಷ್ಯದಿಂದ ಹಲ್ಲಿ ಪ್ಯಾಕೇಟ್​ನೊಳಗೆ ಸೇರಿದೆಯೇ ಅಥವಾ ನಿಜವಾಗಯೇ ಸತ್ತ ಹಲ್ಲಿ ಪತ್ತೆಯಾಗಿದೇ ಎಂಬುದರ ಕುರಿತಾಗಿ ಸ್ಪಷ್ಟವಾದ ವರದಿ ಕೇಳಿದ್ದೇವೆ ಬಳಿಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಯೋರ್ವರು ಮಾಹಿತಿ

ಅಂಗಡಿಯಲ್ಲಿ ಖರೀದಿಸಿದ ಖಾರದ ತಿಂಡಿ ಪ್ಯಾಕೆಟ್​ನಲ್ಲಿ ಸತ್ತ ಹಲ್ಲಿ ಪತ್ತೆ!
ಖಾರದ ತಿಂಡಿ ಪ್ಯಾಕೇಟ್​ನಲ್ಲಿ ಸತ್ತ ಹಲ್ಲಿ ಪತ್ತೆ!
Follow us on

ವ್ಯಕ್ತಿಯೊಬ್ಬರಿಗೆ ಅಂಗಡಿಯಲ್ಲಿ ಖರೀದಿಸಿದ ಖಾರದ ತಿಂಡಿ ಪ್ಯಾಕೇಟ್​ನಲ್ಲಿ ಸಿಕ್ಕ ಸತ್ತ ಹಲ್ಲಿಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ತಿರುನೆಲ್ವೆಲಿಯ ಅಂಗಡಿಯೊಂದರಲ್ಲಿ ತಿಂಡಿ ಪ್ಯಾಕೇಟ್ ಖರೀದಿಸಿದ ವ್ಯಕ್ತಿಯೋರ್ವರಿಗೆ ಸತ್ತ ಹಲ್ಲಿ ಸಿಕ್ಕಿದೆ. ವರದಿಗಳ ಪ್ರಕಾರ, ಅಕ್ಟೋಬರ್ 23ನೇ ತಾರೀಕಿನಂದು ವ್ಯಕ್ತಿ ಅಂಗಡಿಯಿಂದ ತಿಂಡಿಗಳ ಪ್ಯಾಕೇಟ್​ಗಳನ್ನು ಖರೀದಿಸಿದ್ದರು. ಮನೆಗೆ ಹೋಗಿ ತಿಂಡಿ ತಿನ್ನಬೇಕು ಎಂದು ಪ್ಯಾಕೇಟ್ ಒಡೆದರೆ ಸತ್ತ ಹಲ್ಲಿ ಕಂಡಿದೆ. ತಕ್ಷಣವೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರಕ್ಕೆ ವಾಟ್ಸಾಪ್ ಮೂಲಕ ದೂರು ಸಲ್ಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಆಹಾರ ಸುಕ್ಷತಾ ಇಲಾಖೆಯ ನಿಯೋಜಿತ ಅಧಿಕಾರಿಗಳ ನೇತೃತ್ವದ ತಂಡವು ಅಂಗಡಿಗೆ ಭೇಟಿ ನೀಡಿ ಅಂಗಡಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ತೆರೆದಿಟ್ಟ ತಿಂಡಿಗಳನ್ನು ಪ್ಯಾಕೇಟ್ ಮಾಡಿದ್ದರಿಂದ ಈ ರೀತಿಯ ಘಟನೆ ನಡೆದಿದೆ. ಆಹಾರಗಳನ್ನು ಪಾತ್ರೆಗಳಲ್ಲಿಟ್ಟು ಮುಚ್ಚದೇ ಇರುವುದು, ಇದೇ ರೀತಿಯ ಹಲವು ಉಲ್ಲಂಘನೆಗಳು ಕಂಡು ಬಂದಿದೆ. ಅವಧಿ ಮುಗಿದ ಮೇಲೆ ಹೆಲವು ತಿಂಡಿಗಳ ಪ್ಯಾಕೆಟ್​ಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂಬುದನ್ನು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಕಂಡುಕೊಂಡಿದ್ದಾರೆ.

ದಿ ಇಂಡಿಯನ್ ಎಕ್ಸ್​ಪ್ರೆಸ್​ನೊಂದಿಗೆ ಮಾತನಾಡಿದ ಎಫ್​ಎಸ್​ಎಸ್​ಎಐ ಅಧಿಕಾರಿ ಶಶಿ ದೀಪಾ, ನಾವು ವಾಟ್ಸೆಪ್​ ದೂರನ್ನು ಸ್ವೀಕರಿಸಿ ಅಂಗಡಿ ಪರಿಶೀಲನೆಗೆ ಹೋಗಿದ್ದೇವೆ. ಜಿಲ್ಲಾ ಕಚೇರಿಗಳಿಂದೂ ಸೂಚನೆಗಳನ್ನು ಸ್ವೀಕರಿಸಿದ್ದೇವೆ. ಈ ಘಟನೆ ಅಕ್ಟೋಬರ್ 23ರಂದು ಸಂಭವಿಸಿದ್ದು ಅಕ್ಟೋಬರ್ 25ರಂದು ದೂರು ಸ್ವೀಕರಿಸಲಾಗಿದೆ. ದೂರುದಾರರು ಹೇಳಿದಂತೆ ತಿಂಡಿ ಪ್ಯಾಕೆಟ್ಅನ್ನು ಒಡೆದಾಗ ಅದರಲ್ಲಿ ಸತ್ತ ಹಲ್ಲಿ ಇರುವುದು ಕಂಡು ಬಂದಿದೆ. ದೂರುದಾರರು ನಮಗೆ ತಿಂಡಿಯ ಪ್ಯಾಕೇಟ್​ಗಳನ್ನು ಪರಿಶೀಲನೆಗೆ ನೀಡಿಲ್ಲ. ಆದರೆ ಅವುಗಳ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ಅವರು ಹೇಳಿರುವ ನಿರ್ದಿಷ್ಟ ತಿಂಡಿಯ ಪ್ಯಾಕೇಟ್ ಅಂಗಡಿಯಲ್ಲಿ ಕಂಡು ಬಂದಿಲ್ಲ. ಆದರೆ ಅಂಗಡಿ ಅನೇಕ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ತಯಾರಿಸಿದ ಆಹಾರವನ್ನು ಸರಿಯಾಗಿ ಮುಚ್ಚಿಟ್ಟಿರಲಿಲ್ಲ. ಎಂದು ಹೇಳಿದ್ದಾರೆ. ಅಂಗಡಿಯನ್ನು ಕ್ಲೀನ್ ಮಾಡುತ್ತಿದ್ದರಿಂದ ಉತ್ಪನ್ನಗಳನ್ನು ತೆರೆದಿದ್ದೇವೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ. ಸುಧಾರಣೆಯ ಸೂಚನೆಗಳನ್ನು ಅವರಿಗೆ ತಿಳಿಸಲಾಗಿದೆ. ಎಫ್​ಎಸ್​ಎಸ್​ಎಐ ನಿಯಮಗಳ ಪ್ರಕಾರ ಅಗತ್ಯ ಕ್ರಮಗಳನ್ನು ನಡೆಸಿದ ಬಳಿಕ ಅಂಗಡಿಯನ್ನು ತೆರೆಯುವಂತೆ ಮಾಲೀಕರಿಗೆ ತಿಳಿಸಿದ್ದೇವೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸತ್ತ ಹಲ್ಲಿಯ ಮತ್ತಷ್ಟು ಮಾಹಿತಿ ಜತೆಗೆ ತಿಂಡಿ ಪ್ಯಾಕೇಟ್ ಒಡೆಯುವ ಮುನ್ನ ದೂರು, ದಿನಾಂಕ, ಅಂಗಡಿ ಹೆಸರು ಮತ್ತು ಇತರ ಎಲ್ಲಾ ವಿವರಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಇದ್ದರೆ ಅವರು ಕಾನೂನು ಮಾರ್ಗಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ. ಏತನ್ಮಧ್ಯೆ, ಸತ್ತ ಹಲ್ಲಿಯನ್ನು ತಿಂಡಿಯ ಪ್ಯಾಕೇಟ್​ನಲ್ಲಿ ಸೇರಿಸಿ ವ್ಯಕ್ತಿ ಆರೋಪ ಮಾಡುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಘಟನೆಯ ಬಗ್ಗೆ ಆಹಾರ ಮತ್ತು ಸುರಕ್ಷತಾ ಅಧಿಕಾರಿಗಳು ಗಮನಹರಿಸಿದ್ದಾರೆ. ಕೆಲಸಗಾರರ ನಿರ್ಲಕ್ಷ್ಯದಿಂದ ಹಲ್ಲಿ ಪ್ಯಾಕೇಟ್​ನೊಳಗೆ ಸೇರಿದೆಯೇ ಅಥವಾ ನಿಜವಾಗಯೇ ಸತ್ತ ಹಲ್ಲಿ ಪತ್ತೆಯಾಗಿದೇ ಎಂಬುದರ ಕುರಿತಾಗಿ ಸ್ಪಷ್ಟವಾದ ವರದಿ ಕೇಳಿದ್ದೇವೆ ಬಳಿಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral News: ಫ್ಲಿಪ್​ ಕಾರ್ಟ್​ನಲ್ಲಿ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ; ಸಿಕ್ಕಿದ್ದು ಮಾತ್ರ ಖಾಲಿ ಬಾಕ್ಸ್!

Viral News: ಅಮೆಜಾನ್​ನಲ್ಲಿ ಆರ್ಡರ್ ಮಾಡಿದ್ದು 70,900 ರೂ. Apple iPhone 12; ಬಾಕ್ಸ್​ನಲ್ಲಿದ್ದ ವಿಮ್ ಸೋಪ್ ನೋಡಿ ಗ್ರಾಹಕ ಕಂಗಾಲು

Published On - 2:06 pm, Thu, 28 October 21