Viral Video: ಮೆಟ್ರೋದಲ್ಲಿ ಮಗುವನ್ನು ಹೊತ್ತುಕೊಂಡಿದ್ದ ಯುವತಿಗೆ ಸೀಟು ಬಿಟ್ಟುಕೊಟ್ಟ ಯುವಕನಿಗೆ ಕಾದಿತ್ತು ಆಘಾತ!

| Updated By: shivaprasad.hs

Updated on: Jul 25, 2021 | 6:47 PM

ವೈರಲ್ ವಿಡಿಯೊ: ಮೆಟ್ರೊವೊಂದರಲ್ಲಿ ಗರ್ಭಿಣಿ ಯುವತಿಗೆ ಸೀಟು ಬಿಟ್ಟುಕೊಟ್ಟ ಯುವಕನೊಬ್ಬ ಪೇಚಿಗೆ ಸಿಲುಕಿದ್ದಾನೆ. ಆ ಕುರಿತ ವೈರಲ್ ವಿಡಿಯೊ ಇಲ್ಲಿದೆ.

Viral Video: ಮೆಟ್ರೋದಲ್ಲಿ ಮಗುವನ್ನು ಹೊತ್ತುಕೊಂಡಿದ್ದ ಯುವತಿಗೆ ಸೀಟು ಬಿಟ್ಟುಕೊಟ್ಟ ಯುವಕನಿಗೆ ಕಾದಿತ್ತು ಆಘಾತ!
ವಿಡಿಯೊದಿಂದ ಸೆರೆಹಿಡಿಯಲಾದ ಸ್ಕ್ರೀನ್​ಶಾಟ್
Follow us on

ಕೆಲವೊಮ್ಮೆ ಹಾಗೆಯೇ. ವ್ಯಕ್ತಿಗಳು ಪರೋಪಕಾರಿಗಳಾಗಲು ಹೋಗಿ ಮೂರ್ಖರಾಗುತ್ತಾರೆ. ಒಳ್ಳೆಯ ಉದ್ದೇಶದಿಂದ ಮಾಡಿದ ಸಹಾಯ ಫಜೀತಿಯನ್ನೂ ತಂದೊಡ್ಡುತ್ತದೆ. ಇಲ್ಲೊಂದು ಕಡೆ ಹಾಗೆಯೇ ಆಗಿದೆ. ಸಾಮಾನ್ಯವಾಗಿ ಗರ್ಭಿಣಿಯರಿಗೆ, ಮಗುವನ್ನು ಹೊತ್ತುಕೊಂಡಿರುವ ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವಾಗ ಜಾಗವಿಲ್ಲದಿದ್ದರೆ ಯಾವುದೇ ವ್ಯಕ್ತಿಯಾಗಲಿ ತಾನು ಕುಳಿತಿರುವ ಜಾಗದಿಂದ ಮೇಲೆದ್ದು, ಅವರಿಗೆ ಸೀಟನ್ನು ಬಿಟ್ಟುಕೊಡುತ್ತಾನೆ. ಇಲ್ಲೂ ಹಾಗೆಯೇ ಆಗಿದೆ. ಆದರೆ ಅದರ ನಂತರದ ಕತೆ ಬೇರೆಯೇ ಇದೆ!

ಇನ್ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೊವೊಂದರಲ್ಲಿ ಯುವಕನೊಬ್ಬ ಮೆಟ್ರೊನಲ್ಲಿ ಪ್ರಯಾಣಿಸುತ್ತಿರುತ್ತಾನೆ. ನಿಲ್ದಾಣವೊಂದರಲ್ಲಿ ಮೆಟ್ರೊ ಪ್ರವೇಶಿಸಿದ ‘ಮಹಿಳೆ’ಯೊಬ್ಬಳು ಮಗುವನ್ನು ಕರೆದುಕೊಂಡು ನಿಂತಿರುವುದನ್ನು ನೋಡಿದ ಆತ ತಾನು ಕುಳಿತಿದ್ದ ಜಾಗದಿಂದ ಮೇಲೆದ್ದು ಆಕೆಗೆ ಜಾಗ ಬಿಟ್ಟುಕೊಡುತ್ತಾನೆ. ಆದರೆ ನಂತರದಲ್ಲಿ ಆ ಮಹಿಳೆಯ ವೇಷ ನೋಡಿ ಹುಡುಗ ಹೌಹಾರಿದ್ದಾನೆ. ಕೊನೆಯಲ್ಲಿ ಆತನಿಗೆ ತನ್ನ ತಲೆಯನ್ನು ತಾನೇ ಚಚ್ಚಿಕೊಳ್ಳುವಂತಾಗಿದೆ. ಅಷ್ಟಕ್ಕೂ ಅಲ್ಲಿ ಏನು ನಡೆಯಿತು ಎಂದು ನೋಡಲು ವಿಡಿಯೊ ನೋಡಿ.

ಈ ವಿಡಿಯೊ ಈಗ ನೆಟ್ಟಿಗರ ಗಮನ ಸೆಳೆದಿದ್ದು, ಯುವತಿಯ ನಡೆಯಿಂದ ಬಿದ್ದು ಬಿದ್ದು ನಗುತ್ತಿದ್ದಾರೆ. ಕೆಲವರು ಇದು ಉದ್ದೇಶಪೂರ್ವಕವಾಗಿ ಮಾಡಿದ ವಿಡಿಯೊ ಇರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ಪ್ರಾಂಕ್ ಇರಬಹುದು ಎಂದಿದ್ದಾರೆ. ಅದೇನೇ ಇದ್ದರೂ ನೋಡಿದವರೆಲ್ಲರೂ ಮನತುಂಬಿ ನಕ್ಕಿರುವುದಂತೂ ನಿಜ.

ಹೌದು, ನಿಮಗೆ ಈ ವಿಡಿಯೊ ನೋಡಿದರೆ ಏನನ್ನಿಸುತ್ತದೆ?

ಇದನ್ನೂ ನೋಡಿ:

ಎರಡು ತಲೆ ಹಾವು ಊಟ ಮಾಡೋದು ಹೇಗೆ ಗೊತ್ತಾ? ಎರಡೂ ಬಾಯಲ್ಲಿ ಒಂದೇ ಸಲಕ್ಕೆ ಇಲಿಗಳನ್ನು ಗುಳುಂ ಮಾಡಿದ ವಿಡಿಯೋ ಇಲ್ಲಿದೆ

ವಿಡಿಯೋ: ಯಾರು ಮುಟ್ಟಲಿಲ್ಲ, ಚೆಂಡೂ ಬಡಿಯಲಿಲ್ಲ.. ಇದ್ದಕ್ಕಿದಂತೆ ನೆಲಕ್ಕುರುಳಿದ ಸ್ಟಂಪ್ಸ್! ಭೂತ ಚೇಷ್ಟೆ ಎಂದ ನೆಟ್ಟಿಗರು

Viral Video: ವಧು-ವರರಂತೆ ಸೀರೆ, ಪಂಚೆ ತೊಟ್ಟು ಸಿಂಗಾರಗೊಂಡ ಶ್ವಾನಗಳು! ವಿಡಿಯೋ ವೈರಲ್

(Man gives his seat to a girl carrying baby in a metro and the result is hilarious)

Published On - 6:46 pm, Sun, 25 July 21