ಫೆ. 14, ಪ್ರೇಮಿಗಳ ದಿನವಲ್ಲ, ಪುಲ್ವಾಮ ಹುತಾತ್ಮರ ದಿನ; ಜಾಗೃತಿಗೆ ಸೈಕಲ್‌ ಯಾತ್ರೆ

ಫೆಬ್ರವರಿ 14, 2019 ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮಡಿದ ಭಾರತೀಯ ಸೈನಿಕರ ಗೌರವಾರ್ಥ ಈ ಯಾತ್ರೆ ಮಾಡುತ್ತಿದ್ದೇನೆ. ಈ ದಿನ ಪ್ರೇಮಿಗಳ ದಿನಾಚರಣೆಯ ಬದಲಾಗಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪ್ರತಿಯೊಬ್ಬ ಭಾರತೀಯನೂ ಒಂದು ಕ್ಷಣ ಮೌನಾಚರಣೆ ಮಾಡಬೇಕಾಗಿ ವಿನಂತಿಸುತ್ತೇನೆ ಎಂದು ಕೀರ್ತಿ ನಾಯ್ಡು ಹೇಳಿಕೊಂಡಿದ್ದಾರೆ.

ಫೆ. 14, ಪ್ರೇಮಿಗಳ ದಿನವಲ್ಲ, ಪುಲ್ವಾಮ ಹುತಾತ್ಮರ ದಿನ; ಜಾಗೃತಿಗೆ ಸೈಕಲ್‌ ಯಾತ್ರೆ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Feb 06, 2024 | 5:14 PM

ಫೆಬ್ರವರಿ 14ರಂದು ವಿಶ್ವದಾದ್ಯಂದ ಪ್ರೇಮಿಗಳ ದಿನ(Valentine’s Day) ವನ್ನಾಗಿ ಆಚರಿಸಲಾಗುತ್ತದೆ. ಆದರೆ ಪ್ರೇಮಿಗಳ ದಿನದ ಬದಲು ಹುತಾತ್ಮ ಯೋಧರ ಸ್ಮರಣ ದಿನ (Pulwama attack) ವನ್ನಾಗಿ ಆಚರಿಸಬೇಕೆಂದು ಆಗ್ರಹಿಸಿ ಪ್ರತಿ ವರ್ಷ ಸೈಕಲ್ ಯಾತ್ರೆಯನ್ನು ಆಂಧ್ರಪ್ರದೇಶದ ಒಂಗೋಲೆಯ ಯುವಕ ಕೀರ್ತಿನಾಯ್ಡು ಮುಂದುವರಿಸುತ್ತಾ ಬಂದಿದ್ದಾರ. ಈ ವರ್ಷ ಒಂಗೋಲ್ ನಿಂದ ಕನ್ಯಾಕುಮಾರಿಗೆ ಇಂದಿನಿಂದ(ಫೆ.06) ಸೈಕಲ್ ಯಾತ್ರೆ ಆರಂಭಿಸಿದ್ದು, ಫೆಬ್ರವರಿ 14 ರೊಳಗೆ ಕನ್ಯಾಕುಮಾರಿ ತಲುಪಿ ಭಾರತದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸೈಕಲ್​​ ಸವಾರಿ ಮಾಡುತ್ತಾನೆ. 14 ಫೆಬ್ರವರಿ 2019 ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮಡಿದ ಭಾರತೀಯ ಸೈನಿಕರ ಗೌರವಾರ್ಥ ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಕೀರ್ತಿ ನಾಯ್ಡು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್​​​ನ ಬೆಲೆ ಕೇಳಿದ್ರೆ ನೀವು​​​ ಶಾಕ್ ಆಗುವುದಂತೂ ಖಂಡಿತಾ!

 

ಕಳೆದ ವರ್ಷ ಒಂಗೋಲ್ ನಿಂದ ದೆಹಲಿಗೆ ಸೈಕಲ್ ಯಾತ್ರೆ ಕೈಗೊಂಡು ಫೆ.14ರಂದು ಇಂಡಿಯಾ ಗೇಟ್ ಬಳಿ ಮಡಿದ ಭಾರತದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೆ. ಈ ವರ್ಷವೂ ಒಂಗೋಲ್ ನಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಇಂದು ಆರಂಭವಾದ ಈ ಸೈಕಲ್ ಯಾತ್ರೆ ಫೆಬ್ರವರಿ 14 ರೊಳಗೆ ಕನ್ಯಾಕುಮಾರಿ ತಲುಪಲಿದೆ, ಹುತಾತ್ಮ ಭಾರತೀಯ ಯೋಧರಿಗೆ ಸ್ಥಳೀಯರೊಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಆ ದಿನಗಳಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪ್ರತಿಯೊಬ್ಬ ಭಾರತೀಯನೂ ಒಂದು ಕ್ಷಣ ಮೌನಾಚರಣೆ ಮಾಡಬೇಕಾಗಿ ವಿನಂತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:06 pm, Tue, 6 February 24