ವೃದ್ಧಾಪ್ಯದಲ್ಲಿ ಮುಖದ ಮೇಲೆ ನೆರಿಗೆ ಮೂಡುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ನಟ- ನಟಿಯರಿಂದ ಹಿಡಿದು ಸಾಕಷ್ಟು ಜನರು ತಮ್ಮ ಯೌವನವನ್ನು ಹಾಗೆಯೇ ಉಳಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಈ ಮೂಲಕ ವಯಸ್ಸು ಹೆಚ್ಚಾದರೂ ಕೂಡ ಅವರ ಸೌಂದರ್ಯ ಹಾಗೆಯೇ ಇರುತ್ತದೆ. ಇದೀಗ ಟರ್ಕಿ ಮೂಲದ ಮೈಕೆಲ್ ಎಂಬ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದು, ಸರ್ಜರಿಯ ಬಳಿಕ ತನ್ನ ವಯಸ್ಸಿಗಿಂತ 30 ವರ್ಷ ಚಿಕ್ಕವನಂತೆ ಕಾಣುತ್ತಿದ್ದಾನೆ. ವ್ಯಕ್ತಿಯ ಮುಖದಲ್ಲಿನ ಈ ಅಸಾಧಾರಣ ಬದಲಾವಣೆಯು ಈಗ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ. ಒಟ್ಟು 8 ಶಸ್ತ್ರಚಿಕಿತ್ಸೆಗಳ ಫಲವಾಗಿ ಈ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಆತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಪ್ಲಾಸ್ಟಿಕ್ ಸರ್ಜನ್ ಹೆಸರು ಎಸ್ಟೆ ಮೆಡ್ ಎಂದು ಹೇಳಲಾಗುತ್ತದೆ. ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಕೆಲಸದ ಬಗ್ಗೆ ಹೇಳಿದ್ದಾರೆ ಮತ್ತು ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿದ ವ್ಯಕ್ತಿಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.
no Turkey surgeons are fucking wild with their 8 surgeries at once…..this man came back looking 30 years younger pic.twitter.com/2RsfATeC4r
— Dan (@D_Radiance) May 27, 2024
ಇದನ್ನೂ ಓದಿ: ನಾಯಿಗೆ ಹೃದಯ ಶಸ್ತ್ರಚಿಕಿತ್ಸೆ; ಇದು ಏಷ್ಯಾದಲ್ಲೇ ಮೊದಲು!
ಇದೀಗ @D_Radiance ಎಂಬ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು, ಸರ್ಜರಿ ಮೊದಲು ಮತ್ತು ನಂತರದ ಬದಲಾವಣೆಯನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಮೇ 27ರಂದು ಈ ಫೋಟೋ ಹಂಚಿಕೊಳ್ಳಲಾಗಿದ್ದು, ಕೇವಲ ಏಳು ದಿನಗಳಲ್ಲಿ 38 ಮಿಲಿಯನ್ ಅಂದರೆ 3ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ