Viral Video: ಹುಡುಗಿ ಸಿಗಲಿಲ್ಲವೆಂದು ಎಮ್ಮೆಯನ್ನು ಮದುವೆಯಾದ ಯುವಕ; ಕೊನೆಯಲ್ಲಿ ಏನಾಯ್ತು ನೋಡಿ
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ತಮಾಷೆಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಂತಹ ದೃಶ್ಯಾವಳಿಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಂತೂ ನಿಜ. ಸದ್ಯ ಅಂತಹದೇ ವಿಡಿಯೋವೊಂದು ವೈರಲ್ ಆಗಿದ್ದು, ಯುವಕನೊಬ್ಬ ಹುಡುಗಿ ಸಿಗಲಿಲ್ಲವೆಂದು ಎಮ್ಮೆಯನ್ನು ಮದುವೆಯಾಗಿದ್ದಾನೆ. ಕೊನೆಯಲ್ಲಿ ಎಮ್ಮೆಯ ಮೇಲೇರಿದ ಆ ಯುವಕನನ್ನೇ ಕೆಳಗೆ ಬೀಳಿಸಿ ಓಡಿ ಹೋಗಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂಬ ಯುವಕರ ಗೋಳಾಟ ಹೆಚ್ಚಾಗಿದೆ. ಈ ಹುಡುಗಿ ಸಿಗುತ್ತಿಲ್ಲ ಎಂಬ ವಿಷಯವನ್ನೇ ಇಟ್ಟುಕೊಂಡು ಅದೆಷ್ಟೋ ಜನರು ತಮಾಷೆಯ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೆಂದು ಎಮ್ಮೆಯನ್ನು ಮದುವೆಯಾಗಿದ್ದಾನೆ. ಈ ಹಾಸ್ಯಮಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಫನ್ನಿ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಈ ಕುರಿತ ವಿಡಿಯೋವನ್ನು ಮೋನಿ ಸಿಂಗ್ (Monisingh9090) ಎಂಬವರು ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಎಮ್ಮೆಯನ್ನು ಸಂಪ್ರದಾಯಬದ್ಧವಾಗಿ ಮದುವೆಯಾಗುತ್ತಿರುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು. ಮೊದಲಿಗೆ ಎಮ್ಮೆಗೆ ಹೂವಿನ ಹಾರವನ್ನು ಹಾಕಿ ನಂತರ ತಾನು ಕೂಡಾ ಹಾರವನ್ನು ಕೊರಳಿಗೆ ಹಾಕಿಕೊಳ್ಳುತ್ತಾನೆ. ಬಳಿಕ ಎಮ್ಮೆಯ ಹಣೆಗೆ ಸಿಂಧೂರವನ್ನು ಹಚ್ಚಿ, ಎಮ್ಮೆಯ ಮೇಲೇರಿ ಸವಾರಿ ಹೋಗಲು ನಿರ್ಧರಿಸುತ್ತಾನೆ. ಆತ ಮೇಲೇರುತ್ತಿದ್ದಂತೆ ಎಮ್ಮೆ ಆತನನ್ನು ಕೆಳಗೆ ಬೀಳಿಸಿ ಓಡಿ ಹೋಗಿದೆ. ಕೆಳಗೆ ಬಿದ್ದ ಪರಿಣಾಮ ಆ ಯುವಕ ಕಾಲಿಗೆ ಗಾಯಗಳಾಗಿವೆ.
यह तो बीच सफर में ही साथ छोड़ कर भाग गई।😂🤣🤣 pic.twitter.com/rFlmy3OOUN
— Moni Singh (@Monisingh9090) June 1, 2024
ಇದನ್ನೂ ಓದಿ: ಮೊಬೈಲ್ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ ಕರೆಂಟ್ ಶಾಕ್ ಕೊಟ್ಟ ಪತ್ನಿ
ಜೂನ್ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಹಾಸ್ಯಮಯ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




