AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದೇವತೆ ಕಣಮ್ಮಾ ನೀನು; ಬಿಸಿಲ ತಾಪಕ್ಕೆ  ದಣಿದ ಜೀವಗಳಿಗೆ  ಮಜ್ಜಿಗೆ ಹಂಚಿದ ಯುವತಿ  

ದೆಹಲಿಯಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಬಿಸಿಲ ಝಳಕ್ಕೆ ಜನರು ಬಸವಳಿಯುತ್ತಿದ್ದಾರೆ. ಅದರಲ್ಲೂ ಬಿಸಿಲಿನಲ್ಲಿ ನಿಂತು ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದ್ದಾಗಿದೆ. ಹೀಗೆ ಉರಿ ಬಿಸಿಲನ್ನೂ ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ಕೆಲಸ ಮಾಡುವಂತಹ ಜೀವಗಳಿಗೆ ಇಲ್ಲೊಂದು ಯುವತಿ ಮಜ್ಜಿಗೆ ಹಂಚುವ ಮೂಲಕ ತನ್ನ ಕೈಲಾದ ಅಳಿಲು ಸೇವೆಯನ್ನು ಮಾಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

Viral Video: ದೇವತೆ ಕಣಮ್ಮಾ ನೀನು; ಬಿಸಿಲ ತಾಪಕ್ಕೆ  ದಣಿದ ಜೀವಗಳಿಗೆ  ಮಜ್ಜಿಗೆ ಹಂಚಿದ ಯುವತಿ  
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 04, 2024 | 11:00 AM

Share

ಮಾನವೀಯತೆ, ದಯಾ ಗುಣಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವೀಯತೆ, ಮನುಷ್ಯತ್ವ ಎನ್ನುವುದು ಮರೆಯಾಗುತ್ತಿದೆ. ಹೀಗೆ ತಮ್ಮವರ ಕಷ್ಟಕ್ಕೆ ಸ್ಪಂದಿಸಲು ಹಿಂದೆ ಮುಂದೆ ನೋಡುವ ಜನರ ಮಧ್ಯೆ ಇಂದಿಗೂ ಕೆಲವರು ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಇತರರ ಕಷ್ಟಕ್ಕೆ ಸ್ಪಂದಿಸುವ ಜನರಿದ್ದಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಯುವತಿಯೊಬ್ಬಳು ಬಿಸಿಲ ತಾಪಕ್ಕೆ ಬಸವಳಿದ ಜೀವಗಳಿಗೆ ಮಜ್ಜಿಗೆ ಹಂಚುವ ಮೂಲಕ ತನ್ನ ಕೈಲಾದ ಅಳಿಲು ಸೇವೆಯನ್ನು ಮಾಡಿದ್ದಾಳೆ. ಈ ಯುವತಿಯ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಸುಚಿ ಶರ್ಮಾ ಎಂಬ ಯುವತಿ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇತ್ತೀಚಿಗೆ ದಿನದಿಂದ ದಿನಕ್ಕೆ ದೆಹಲಿಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನಲ್ಲಿ ನಿಂತು ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದಾಗಿದೆ. ಹೀಗಿರುವಾಗ ಇಂತಹ ದಣಿದ ಜೀವಗಳ ದಾಹ ತೀರಿಸಲು ಸುಚಿ ಶರ್ಮಾ ಮಜ್ಜಿಗೆ ಹಂಚುವ ಮೂಲಕ ತನ್ನ ಕೈಲಾದಷ್ಟು ಅಳಿಲು ಸೇವೆಯನ್ನು ಮಾಡಿದ್ದಾಳೆ.

ವೈರಲ್‌ ವಿಡಿಯೋದಲ್ಲಿ ಸುಚಿ ಶರ್ಮಾ ಉರಿ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ಕೆಲಸ ಮಾಡುವ ಜೀವಗಳಿಗೆ ಮಜ್ಜಿಗೆ ಹಂಚುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅಸ್ಸಾಂನಲ್ಲಿ  ಪತ್ತೆಯಾಯಿತು 4 ಕಣ್ಣುಗಳಿರುವ  ಅಪರೂಪದ ಮೀನು; ವೈರಲ್‌ ವಿಡಿಯೋ

ವೈರಲ್​​ ವಿಡಿಯೋ ಇಲ್ಲಿದೆ:

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಈ ಯುವತಿಯ ಈ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ