Viral Video: ಯಾರಾದ್ರೂ ನನ್ನ ಕಾಪಾಡಿ; ಸಹಾಯಕ್ಕಾಗಿ ಅಂಗಲಾಚಿದ ಹದ್ದನ್ನು ರಕ್ಷಿಸಿದ ವ್ಯಕ್ತಿ
ನದಿ ನೀರಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಂತಹ ಹದ್ದೊಂದು ಹಾರಲು ಆಗದೆ ರೆಕ್ಕೆ ಬಡಿಯುತ್ತಾ ಯಾರಾದರೂ ನನ್ನನ್ನು ಈ ಯಮ ಕೂಪದಿಂದ ರಕ್ಷಿಸಿ ಎಂದು ರೆಕ್ಕೆ ಬಡಿಯುತ್ತಾ ಸಹಾಯಕ್ಕಾಗಿ ಅಗಲಾಚಿದೆ. ಅಲ್ಲಿಗೆ ಬಂದಂತಹ ವ್ಯಕ್ತಿಯೊಬ್ಬರು ಮುಳುಗುತ್ತಿದ್ದಂತಹ ಹದ್ದನ್ನು ರಕ್ಷಿಸಿ ಅದಕ್ಕೆ ಮರು ಜೀವವನ್ನೇ ನೀಡಿದ್ದಾರೆ. ಈ ಭಾವನಾತ್ಮಕ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ದೆಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ನುಡಿ ಮಾತುಗಳು ಇಂದಿಗೂ ಪ್ರಸ್ತುತ. ನಾವು ಎಷ್ಟೇ ಮುಂದುವರೆದಿದ್ದರೂ ನಮ್ಮಲ್ಲಿ ದಯಾ ಮನೋಭಾವ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಆದರೆ ಇಂದು ಮನುಷ್ಯನಲ್ಲಿ ದಯೆ, ಮಾನವೀಯತೆಯು ಸತ್ತು ಹೋಗಿದೆ. ತನ್ನವರ ಕಷ್ಟಕ್ಕೆ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಅದೆಷ್ಟೋ ಜನರು ನಮ್ಮ ಸಮಾಜದಲ್ಲಿದ್ದಾರೆ. ಹೀಗೆ ತಮ್ಮವರಿಗೆಯೇ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಜನರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ನದಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದಂತ ಹದ್ದಿನ ಪ್ರಾಣ ರಕ್ಷಣೆ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದದ್ದಾರೆ.
ಈ ಘಟನೆ ಎರಡು ವರ್ಷಗ ಹಿಂದೆ ನಡೆದಿದ್ದು, ಕೆನಡಾದ ನೋವಾ ಸ್ಕಾಟಿಯಾದ ಶುಬೆನಾಕಾಡಿ ನದಿಯಲ್ಲಿ ಎಮ್ಮೆಟ್ ಬ್ಲೋಯಿಸ್ ಎಂಬವರು ಬೋಟಿಂಗ್ ಮಾಡುತ್ತಿದ್ದ ವೇಳೆ ನೀರಿನ ಅಲೆಗಳ ಹೊಡೆತಕ್ಕೆ ಸಿಕ್ಕಿಹಾಕಿಕೊಂಡ ಹದ್ದು ಹಾರಲು ಆಗದೆ ರೆಕ್ಕೆ ಬಡಿಯುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಾ ನಿಂತಿತ್ತು. ಈ ದೃಶ್ಯವನ್ನು ಕಂಡ ಬ್ಲೋಯಿಸ್ ಮುಳುಗುತ್ತಿದ್ದಂತಹ ಹದ್ದನ್ನು ರಕ್ಷಣೆ ಮಾಡಿ, ನಂತರ ಅದನ್ನು ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕರೆದೊಯ್ದು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಹದ್ದಿಗೆ ಮರು ಜೀವವನ್ನೇ ನೀಡಿದ್ದಾರೆ.
Eagle rescue pic.twitter.com/ek4DZf135X
— Nature is Amazing ☘️ (@AMAZlNGNATURE) May 8, 2024
ಇದನ್ನೂ ಓದಿ: ಮೊಬೈಲ್ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ ಕರೆಂಟ್ ಶಾಕ್ ಕೊಟ್ಟ ಪತ್ನಿ
ಈ ಕುರಿತ ವಿಡಿಯೋವೊಂದನ್ನು @AMAZINGNATURE ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ನದಿ ನೀರಿನ ಅಲೆಗಳ ಹೊಡೆದಕ್ಕೆ ಸಿಕ್ಕಂತಹ ಹದ್ದು ಹಾರಲು ಆಗದೆ ರೆಕ್ಕೆಯನ್ನು ಬಡಿಯುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯವನ್ನು ಕಾಣಬಹುದು. ಆ ವೇಳೆ ಬೋಟಿಂಗ್ ಮಾಡುತ್ತಿದ್ದಂತ ಬ್ಲೋಯಿಸ್ ಎಂಬವರು ಹದ್ದನ್ನು ರಕ್ಷಣೆ ಮಾಡಿ, ನಂತರ ಅದನ್ನು ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಿ ಕೆಲ ದಿನಗಳ ನಂತರ ಅದನ್ನು ಕಾಡಲ್ಲಿ ಬಿಟ್ಟು ಬಂದಿದ್ದಾರೆ. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವ್ಯಕ್ತಿಯ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ