ತಡವಾಗಿ ಆರ್ಡರ್ ಮಾಡಿದ್ದ ಅಸ್ವಸ್ಥ ಗ್ರಾಹಕನಿಗೆ ಉಚಿತ ಫುಡ್ ಜೊತೆ ಪ್ರೀತಿಯ ಸಂದೇಶ ಕಳುಹಿಸಿದ ರೆಸ್ಟೋರೆಂಟ್; ಹೃದಯಸ್ಪರ್ಶಿ ಸ್ಟೋರಿ ಓದಿ

| Updated By: shruti hegde

Updated on: Nov 30, 2021 | 11:33 AM

ಇನ್ನೇನು 14 ನಿಮಿಷ ತಡವಾಗಿದ್ದರೆ ರೆಸ್ಟೋರೆಂಟ್ ಮುಚ್ಚುವ ಸಮಯವಾಗಿತ್ತು. ಆದರೆ ಆ ಸಮಯದಲ್ಲಿಯೂ ಸಹ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಉಚಿತ ಆಹಾರ ನೀಡುವ ವ್ಯವಸ್ಥೆಯನ್ನು ರೆಸ್ಟೋರೆಂಟ್​ ಮಾಡಿದೆ. ಈ ಹೃದಯಸ್ಪರ್ಶಿ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.

ತಡವಾಗಿ ಆರ್ಡರ್ ಮಾಡಿದ್ದ ಅಸ್ವಸ್ಥ ಗ್ರಾಹಕನಿಗೆ ಉಚಿತ ಫುಡ್ ಜೊತೆ ಪ್ರೀತಿಯ ಸಂದೇಶ ಕಳುಹಿಸಿದ ರೆಸ್ಟೋರೆಂಟ್; ಹೃದಯಸ್ಪರ್ಶಿ ಸ್ಟೋರಿ ಓದಿ
Follow us on

ಹಸಿವಾದ ತಕ್ಷಣ ಆನ್ಲೈನ್ ಮೂಲಕ ಆರ್ಡರ್ ಮಾಡಿ ಬೇಕಾದ ಆಹಾರವನ್ನು ತರಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಆಹಾರ ಸರಿಯಿರಲಿಲ್ಲ, ಲೇಟಾಗಿ ಬಂದು ತಲುಪಿತು, ಯಾವುದೋ ಫುಡ್ ಆರ್ಡರ್ ಮಾಡಿ ಇನ್ಯಾವುದೂ ಫುಡ್ ಬಂದಿದೆ ಎಂದೆಲ್ಲಾ ರೆಸ್ಟೋರೆಂಟ್ ಸಿಬ್ಬಂದಿಯ ಮೇಲೆ ರೇಗಾಡಿರುವ ಸನ್ನಿವೇಷಗಳು ನಡೆದಿವೆ. ಅದೇ ರೀತಿ ಲೇಟಾಗಿ ಆರ್ಡರ್ ಮಾಡಿದ ಸಿಬ್ಬಂದಿಯ ಆರ್ಡರ್​ಅನ್ನು ರೆಸ್ಟೋರೆಂಟ್​ ಕ್ಯಾನ್ಸಲ್ ಮಾಡಿರುವ ಅನುಭವವೂ ಆಗಿರಬಹುದು. ಆದರೆ ಈ ರೆಸ್ಟೋರೆಂಟ್, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ವಿನಂತಿಯನ್ನು ಸ್ವೀಕರಿಸಿ ಆಹಾರ ತಲುಪುವಂತೆ ಮಾಡಿದೆ. ಇನ್ನೇನು 14 ನಿಮಿಷ ತಡವಾಗಿದ್ದರೆ ರೆಸ್ಟೋರೆಂಟ್ ಮುಚ್ಚುವ ಸಮಯವಾಗಿತ್ತು. ಆದರೆ ಆ ಸಮಯದಲ್ಲಿಯೂ ಸಹ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಉಚಿತ ಆಹಾರ ನೀಡುವ ವ್ಯವಸ್ಥೆ ಮಾಡಿದೆ. ಈ ಹೃದಯಸ್ಪರ್ಶಿ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಆಸ್ಟ್ರೇಲಿಯಾದ ಓರ್ವ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರು. ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಅವರು ಕಣ್ಬಿಟ್ಟರೆ ಆಗಲೇ ತಡವಾಗಿತ್ತು. ರೆಸ್ಟೊರೆಂಟ್ ಬಾಗಿಲುಗಳೆಲ್ಲ ಮುಚ್ಚಿದ್ದವು. ಆನ್ಲೈನ್ ಆರ್ಡರ್ ಮಾಡಿದ ವ್ಯಕ್ತಿ ಚಿಕ್ಕ ಸಂದೇಶವನ್ನು ಕಳುಹಿಸಿದ್ದರು. ಅ ಸಂದೇಶ ನೋಡಿ ಪ್ರತಿಕ್ರಿಯಿಸಿದ ರೆಸ್ಟೋರೆಂಟ್ ಉಚಿತ ಆಹಾರವನ್ನು ನೀಡಿದೆ. ಈ ಹೃದಯಸ್ಪರ್ಶಿ ಘಟನೆಯನ್ನು ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ಫುಲ್ ವೈರಲ್ ಆಗಿದೆ.

ಇನ್ನೇನು ಕೆಲವೇ ನಿಮಿಷಗಳಲ್ಲಿ ರೆಸ್ಟೋರೆಂಟ್ಅನ್ನು ಮುಚ್ಚಲಾಗುತ್ತಿತ್ತು. ಕೊನೆಯ ಕ್ಷಣದಲ್ಲಿ ಫುಡ್ ಆರ್ಡರ್ ಮಾಡಿದ ವ್ಯಕ್ತಿ, ಕ್ಷಮಿಸಿ ನಾನು ತಡವಾಗಿ ಫುಡ್ ಆರ್ಡರ್ ಮಾಡುತ್ತಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಆರ್ಡರ್ ಮಾಡುವುದು ತಡವಾಯಿತು. ನಿಮ್ಮ ಸಮಯ ಮುಗಿದಿದೆ ಎಂಬುದು ನನಗೆ ತಿಳಿದಿದೆ, ಸಾಧ್ಯವಾಗದೇ ಹೋದರೆ ಆರ್ಡರ್ ರದ್ದುಗೊಳಿಸಬಹುದು ಎಂದು ಟಿಪ್ಪಣಿಯಲ್ಲಿ ಬರೆದು ಕಳುಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರೆಸ್ಟೋರೆಂಟ್, ನಿಮ್ಮ ಟಿಪ್ಪಣಿಗೆ ಧನ್ಯವಾದಗಳು. ತಡವಾಗಿ ಆರ್ಡರ್ ಮಾಡಿರುವ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ನಿಮಗೆ ಸ್ವಲ್ಪ ಸಹಾಯವಾಗಲು ಗಾರ್ಲಿಕ್ ಬ್ರೆಡ್ ಕಳುಹಿಸಿಕೊಟ್ಟಿದ್ದೇವೆ. ನಿಮ್ಮ ಈ ಸಂದೇಶಕ್ಕೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದೆ.

ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ವಿನಯತೆಯ ವರ್ತನೆ ಮತ್ತು ಅದಕ್ಕೆ ರೆಸ್ಟೋರೆಂಟ್ ಪ್ರತಿಕ್ರಿಯಿಸಿದ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹೃದಯಸ್ಪರ್ಷಿ ಘಟನೆಯನ್ನು ಹಂಚಿಕೊಂಡ ಆಸ್ಟ್ರೇಲಿಯಾದ ವ್ಯಕ್ತಿ, ನಾನು ಅಸ್ವಸ್ಥನಾಗಿದ್ದಾಗ ಉಚಿತವಾದ ಆಹಾರ ನೀಡಿದರು. ಜೊತೆಗೆ ಸಂದೇಶವನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದರು. ಅಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral News: 7 ರೂ. ಬ್ಯಾಗ್ ತಗೊಳ್ಳಿ ಎಂದು ಒತ್ತಾಯಿಸಿದ ಪಿಜ್ಜಾ ಶಾಪ್​ಗೆ 11,000 ರೂ. ದಂಡ!

Viral News: ತನ್ನ ಕೋಟಿಗಟ್ಟಲೆ ಆಸ್ತಿಯನ್ನು ರಿಕ್ಷಾ ಚಾಲಕನಿಗೆ ದಾನ ಮಾಡಿದ ವೃದ್ಧೆ! ಕಾರಣ ಗೊತ್ತೇ?

Published On - 11:29 am, Tue, 30 November 21