ಸಂಗೀತಕ್ಕೆ(Music) ಒಲಿಯದ ಜೀವವಿಲ್ಲ. ಮನಸೋಲದ ಜೀವಿಯಿಲ್ಲ. ಹೌದು ಸಂಗೀತ ಎಂತಹವರನ್ನು ಬೇಕಾದರೂ ಆಕರ್ಷಿಸುವ ಶಕ್ತಿ ಹೊಂದಿದೆ. ಪ್ರಾಣಿಗಳನ್ನೂ ಸೆಳೆಯುವ ಗುಣ ಸಂಗೀತಕ್ಕಿದೆ. ಇಲ್ಲೊಬ್ಬ ಯುವಕ ಬ್ಯಾಂಜೊ (Banjo) ಎನ್ನುವ ತಂತಿ ವಾದ್ಯವನ್ನು ನರಿ (Fox)ಗೋಸ್ಕರ ನುಡಿಸಿದ್ದಾನೆ. ಮರದ ವಾದ್ಯದಲ್ಲಿ ವ್ಯಕ್ತಿ ನರಿಗೋಸ್ಕರ ಸಂಗೀತ ನುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೊಲಾರಾಡೋದಲ್ಲಿ(Colorado) ನಡೆದಿದೆ. ಇದರ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ವಿಡಿಯೋವನ್ನು ಗುಡ್ ನ್ಯೂಸ್ ಮೂವ್ಮೆಂಟ್ ಹಂಚಿಕೊಂಡಿದೆ. ಆ್ಯಂಡಿ ಥ್ರೋನ್ ಎನ್ನುವ ವ್ಯಕ್ತಿ ಗುಡ್ಡದ ಮೇಲೆ ನಿಂತು ಬ್ಯಾಂಜೊ ನುಡಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿ ಬ್ಯಾಂಜೊವನ್ನು ಗುಡ್ದದ ಮೇಲೆ ನಿಂತು ನುಡಿಸುವುದನ್ನು ಕಾಣಬಹುದು. ಈ ವೇಳೆ ನರಿ ತಲೆಯಾಡಿಸುತ್ತಾ ಆತನ ಎದುರು ನಿಲ್ಲುವುದನ್ನು ಕಾಣಬಹುದು. ವಿಡಿಯೋ ನೋಡಿ ಇನ್ಸ್ಟಾಗ್ರಾಮ್ ಬಳಕೆದಾರರು ಪುಳಕಗೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದ ಬಳಕೆದಾರರ ಮನಗೆದ್ದ ವಿಡಿಯೋ 9.5 ಮಿಲಿಯನ್ ವೀಕ್ಷಣೆ ಪಡೆದಿದೆ.
ಈ ಹಿಂದೆ ಮೃಗಾಲಯವೊಂದರಲ್ಲಿ ಮಹಿಳೆಯೊಬ್ಬರು ವಯಲಿನ್ ನುಡಿಸುತ್ತಾ ಕುಳಿತುಕೊಂಡಾಗ ಆಕೆಯ ಸುತ್ತಲೂ ಜಿಂಕೆಗಳು ಬಂದು ನಿಲ್ಲುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ನರಿಗಾಗಿ ಸಂಗೀತ ನುಡಿಸಿದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: