ವರದಕ್ಷಿಣೆಯಾಗಿ ಸಿಕ್ತು ಟ್ರೈನ್; ಪಾರ್ಕಿಂಗ್ಗೆ ಜಾಗವಿಲ್ಲವೆಂದು ಆಫರ್ ತಿರಸ್ಕರಿಸಿದ ವರ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 16 ಸಾವಿರಕ್ಕೂ ಹೆಚ್ಚು ವೀವ್ಸ್ ಕಂಡಿದೆ.

ವರದಕ್ಷಿಣೆ ನೀಡುವ ಪದ್ಧತಿ ಇನ್ನೂ ಅನೇಕ ಕಡೆಗಳಲ್ಲಿ ಜಾರಿಯಲ್ಲಿದೆ. ವರನಿಗೆ ದಕ್ಷಿಣೆ ರೂಪದಲ್ಲಿ ಕಾರು, ಮನೆ, ಸೈಟ್, ಚಿನ್ನ ಹೀಗೆ ಹತ್ತು ಹಲವು ವಸ್ತುಗಳನ್ನು ನೀಡಲಾಗುತ್ತದೆ. ಈ ಮಧ್ಯೆ, ವ್ಯಕ್ತಿಯೋರ್ವನಿಗೆ ವರದಕ್ಷಿಣೆಯಾಗಿ ಟ್ರೈನ್ ಸಿಕ್ಕಿದೆ! ಆದರೆ, ಇದನ್ನು ಆತ ತಿರಸ್ಕರಿಸಿಬಿಟ್ಟಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
30 ಸೆಕಂಡ್ನ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿ ವರದಕ್ಷಿಣೆ ವಿಚಾರ ಪ್ರಸ್ತಾಪ ಮಾಡಿದ್ದಾನೆ. ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಪ್ರಶ್ನೆ ಕೇಳಿದ್ದಾನೆ. ನಿನಗೆ ವರದಕ್ಷಿಣೆ ರೂಪದಲ್ಲಿ ರೈಲು ಸಿಕ್ಕಿಂತಂತೆ ನಿಜವೇ ಎಂದು ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ವ್ಯಕ್ತಿ ಹೌದು, ಹೆಣ್ಣಿನ ಕಡೆಯವರು ಟ್ರೈನ್ಅನ್ನೇ ನೀಡಲು ಬಂದಿದ್ದರು ಆದರೆ ನಾನು ಬೇಡ ಎಂದೆ ಎಂದಿದ್ದಾನೆ.
ರೈಲು ಸಣ್ಣ ವಾಹನವಲ್ಲ. ನನಗೆ ರೈಲು ಬಿಡೋಕೆ ಬರುತ್ತದೆ. ಆದರೆ, ಸಮಸ್ಯೆ ಇರುವುದು ಅಲ್ಲಲ್ಲ. ಇದನ್ನು ಹಳ್ಳಿಯಲ್ಲಿ ಪಾರ್ಕ್ ಮಾಡೋದು ಕಷ್ಟ. ಹೀಗಾಗಿ ನಾನು ಇದನ್ನು ಬೇಡ ಎಂದು ಹೇಳಿದೆ ಎಂದಿದ್ದಾನೆ.
????????? pic.twitter.com/a1RaPIUhUp
— Professor ngl राजा बाबू ?? (@GaurangBhardwa1) April 11, 2021
ಈ ವಿಡಿಯೋವನ್ನು ಶೂಟ್ ಮಾಡಿದವರು ಯಾರು? ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬಿತ್ಯಾದಿ ವಿಚಾರ ತಿಳಿದು ಬಂದಿಲ್ಲ. ಇದನ್ನು ಆತ ಗಂಭೀರವಾಗಿಯೇ ಹೇಳಿದರೂ ಇದು ಕೇವಲ ಹಾಸ್ಯಕ್ಕಾಗಿ ಮಾಡಿದ ವಿಡಿಯೋ ಎಂಬುದು ನೆಟ್ಟಿಗರಿಗೆ ಸ್ಪಷ್ಟವಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 16 ಸಾವಿರಕ್ಕೂ ಹೆಚ್ಚು ವೀವ್ಸ್ ಕಂಡಿದೆ. 1,300 ಲೈಕ್ಸ್ ಬಂದಿದೆ. ಈ ವಿಡಿಯೋ ಬಗ್ಗೆ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ನರ್ಸ್, ವೈದ್ಯರ ಜಗಳ; ಕಪಾಳಮೋಕ್ಷ ಮಾಡಿ ನಿಂದಿಸಿದ ವಿಡಿಯೋ ವೈರಲ್