ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ​ಟೈರ್​ ಹೊರತೆಗೆದ ವ್ಯಕ್ತಿ

| Updated By: Pavitra Bhat Jigalemane

Updated on: Feb 09, 2022 | 12:09 PM

ಮೊಸಳೆಯ ಕುತ್ತಿಗೆ ಸಿಲಿಕಿದ್ದ ಬೈಕ್​ನ ಟೈರ್​ಅನ್ನು ಬರೋಬ್ಬರಿ 6 ವರ್ಷಗಳ ಬಳಿಕ ಹೊರತೆಗೆದು ಮೊಸಳೆಯನ್ನು ರಕ್ಷಿಸಲಾಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ​ಟೈರ್​ ಹೊರತೆಗೆದ ವ್ಯಕ್ತಿ
ಮೊಸಳೆ
Follow us on

ಪ್ರಾಣಿಗಳು ಅದೆಷ್ಟೇ ಭಯಾನಕವಾಗಿದ್ದರೂ ಕೆಲವೊಮ್ಮೆ ಜೀವಸಂಕಟಕ್ಕೆ ಒಳಗಾಗಿಬಿಡುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವುದು ಮಾನವರ ಹೊಣೆಯಾಗಿರುತ್ತದೆ. ಇದೀಗ ಮೊಸಳೆಯ (Crocodile)ಕುತ್ತಿಗೆ ಸಿಲಿಕಿದ್ದ ಬೈಕ್​ನ ಟೈರ್​ಅನ್ನು (Tyre) ಬರೋಬ್ಬರಿ 6 ವರ್ಷಗಳ ಬಳಿಕ ಹೊರತೆಗೆದು ಮೊಸಳೆಯನ್ನು ರಕ್ಷಿಸಲಾಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ (Indonesia)ನಡೆದಿದೆ. ವ್ಯಕ್ತಿಯೊಬ್ಬರು ಮೊಸಳೆಯನ್ನು ಹಿಡಿದು ಟೈರ್​ಅನ್ನು ಹೊರತೆಗೆದಿದ್ದಾರೆ. ವ್ಯಕ್ತಿಯ ಧೈರ್ಯಕ್ಕೆ  ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇಂಡೋನೇಷ್ಯಾದ ತಿಲಿ ಎನ್ನುವ 35 ವರ್ಷದ ಪ್ರಾಣಿ ಪ್ರಿಯ ವ್ಯಕ್ತಿ ಮೊಸಳೆಯ ಕುತ್ತಿಗೆಗೆ ಸಿಲುಕಿದ್ದ ಟೈರ್​​ಅನ್ನು ಹೊರತೆಗೆದಿದ್ದಾರೆ. 2018ರಲ್ಲಿ ಮೊಸಳೆಯ ಕುತ್ತಿಗೆಗೆ ಟೈರ್​ ಸಿಲುಕಿಕೊಂಡಿತ್ತು ಎನ್ನಲಾಗಿದೆ. ಈ ಹಿಂದೆ ಹಲವರು ಮೊಸಳೆಯನ್ನು ಟೈರ್​ನಿಂದ ಮುಕ್ತಿಗೊಳಿಸಲು ಯತ್ನಿಸಿದ್ದು, ವಿಫಲರಾಗಿದ್ದಾರೆ ಎನ್ನಲಾಗಿದೆ. ಇದೀಗ 35 ವರ್ಷದ ತಿಲಿ ಎನ್ನುವ ವ್ಯಕ್ತಿ ಮರದ ದಿಮ್ಮಿಯ ಮೂಲಕ ಮೊಸಳೆಯನ್ನು ಸೆರೆಹಿಡಿದು, ಕಣ್ಣಿಗೆ ಬಟ್ಟೆಯನ್ನು ಸುತ್ತಿ, ಗರಗಸದ ಮೂಲಕ ಟೈರ್​ಅನ್ನು ಹೊರತಗೆದಿದ್ದಾರೆ.

ಈ ಕುರಿತು ತಿಲಿ ಮಾತನಾಡಿ. ನಾನು ಒಬ್ಬನೇ ಮೊಸಳೆಯನ್ನು ಸೆರೆ ಹಿಡಿದೆ. ಸ್ಥಳೀಯರನ್ನು ಸಹಾಯ ಕೇಳಿದರೂ ಅವರು ಭಯಗೊಂಡು ಸಹಾಯಕ್ಕೆ ಮುಂದಾಗಲಿಲ್ಲ ಹೀಗಾಗಿ ಮರದ ದಿಮ್ಮಿಗಳನ್ನು ಅಳವಡಿಸಿಕೊಂಡು ಮೊಸಳೆಯನ್ನು ಸೆರೆಹಿಡಿದು ರಕ್ಷಿಸಲಾಗಿದೆ ಎಂದಿದ್ದಾರೆ.  ಮೊಸಳೆಯ ಕುತ್ತಿಗೆಯಿಂದ ಟೈರ್​ಅನ್ನು ತೆಗೆದ ಬಳಿಕ ಮತ್ತೆ ನೀರಿಗೆ ಬಿಡಲಾಗಿದೆ ಎಂದು ವರದಿ ತಿಳಿಸಿದೆ. ಈ ಹಿಂದೆ ನ್ಯಾಷನಲ್​ ಜಿಯೋಗ್ರಫಿಯ ಆ್ಯಂಕರ್​ ಒಬ್ಬರು ಮೊಸಳೆಯನ್ನು ರಕ್ಷಿಸಲು ಯತ್ನಿಸಿದ್ದರು. ಆದರೆ ಮೊಸಳೆ ಹಲವು ಬಾರಿ ಕಣ್ಮರೆಯಾಗಿದ್ದು, ಟೈರ್​ಅನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:

Viral News: ಉದ್ಯೋಗಿಗಳಿಗೆ ಧನ್ಯವಾದ ಹೇಳಲು 1 ಕೋಟಿ ರೂ.ಗಳ ಟೂರ್​ ಪ್ಯಾಕೇಜ್​ ನೀಡಿದ ಕಂಪನಿ