
ಕೆಲವೊಮ್ಮೆ ದೇವರು ಕಷ್ಟಕಾಲದಲ್ಲಿ ಸಹಾಯ ಮಾಡಲು ಮನುಷ್ಯ ರೂಪದಲ್ಲಿ ಬರುತ್ತಾರೆ ಎನ್ನುವ ಮಾತಿದೆ. ಕೆಲ ಘಟನೆಗಳನ್ನು ನೋಡಿದಾಗ ಈ ಮಾತು ಅಕ್ಷರಶಃ ನಿಜ ಎನಿಸುತ್ತದೆ. ಕೆಲವರು ದೇವರ ರೂಪದಲ್ಲಿ ಬಂದು ಮನುಷ್ಯರು ಸೇರಿದಂತೆ ಮೂಕ ಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸುತ್ತಾರೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದೆ. ಲಿಜೋ (Lijo) ಎಂಬ ವ್ಯಕ್ತಿ ಬಾವಿಗೆ ಬಿದ್ದ ಜರ್ಮನ್ ಶೆಫರ್ಡ್ ಶ್ವಾನವನ್ನು (German Shepherd) ಕಾಪಾಡಿದ್ದಾರೆ. ತನ್ನ ಜೀವ ಉಳಿಸಿದ ವ್ಯಕ್ತಿಯ ಮುಂದೆ ಕುಳಿತು ಪ್ರೀತಿಯಿಂದ ಮುತ್ತನ್ನು ನೀಡಿದೆ. ಕೃತಜ್ಞತೆ ಸಲ್ಲಿಸಿರುವ ಈ ಮುಗ್ಧ ಜೀವಿಯ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ದಿ ಬೆಟರ್ ಇಂಡಿಯಾ (thebetterindia) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬಾವಿಗೆ ಬಿದ್ದ ಶ್ವಾನದ ರಕ್ಷಣೆ ವ್ಯಕ್ತಿಯೊಬ್ಬ ದೇವರಂತೆ ಬಂದಿರುವುದನ್ನು ಕಾಣಬಹುದು. ಹೌದು, ಜರ್ಮನ್ ಶೆಫರ್ಡ್ ಶ್ವಾನವೊಂದು ತೆರೆದ ಬಾವಿಗೆ ಬಿದ್ದಿದೆ. ಮನೆ ಮಾಲೀಕರು ವನ್ಯಜೀವಿಗಳ ಸಂರಕ್ಷಕ ಲಿಜೋಅವರಿಗೆ ವಿಷಯ ತಿಳಿಸಿದ್ದಾರೆ. ಆ ಕೂಡಲೇ ಸ್ಥಳಕ್ಕೆ ಧಾವಿಸಿ ಸುರಕ್ಷತಾ ಸಲಕರಣೆಗಳೊಂದಿಗೆ ಬಾವಿಗೆ ಇಳಿದು ಶ್ವಾನವನ್ನು ರಕ್ಷಿಸಿದ್ದಾರೆ. ಈ ವ್ಯಕ್ತಿಯೂ ಬಾವಿಯಿಂದ ಮೇಲೆ ಬರುತ್ತಿದ್ದಂತೆ ಶ್ವಾನವು ಅವರ ಮುಖವನ್ನೆಲ್ಲಾ ನೆಕ್ಕುತ್ತಾ ಮುತ್ತನ್ನು ನೀಡುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಲಿಜೋ ಅವರು ಶ್ವಾನದ ತಲೆಯನ್ನು ಸವರುತ್ತಾ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದಾರೆ.
ಇದನ್ನೂ ಓದಿ:Video: ಕಿಲಾಡಿ ಜೋಡಿ; ತಾನ್ ಕುಡಿಯೋದಲ್ದೆ ನಾಯಿಗೂ ಎಣ್ಣೆ ಕುಡಿಸಿ ತೂರಾಡುತ್ತಾ ಹೋದ ವ್ಯಕ್ತಿ
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಬಳಕೆದಾರ ನಿಜವಾದ ಹೀರೋ ಎಂದಿದ್ದಾರೆ. ಮುದ್ದಿನ ಶ್ವಾನವನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು. ನೀವುಗಳೇ ನಿಜವಾದ ಹೀರೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ನಿಮಗೆ ಹಾಟ್ಸ್ ಆಫ್ ಸರ್ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Mon, 20 October 25