Video: ಚಲಿಸುವ ಬೈಕ್‌ನಲ್ಲಿ ಶೇವಿಂಗ್ ಮಾಡಿದ ವ್ಯಕ್ತಿ, ಮುಂದೇನಾಯ್ತು ನೋಡಿ

ಕೆಲವರು ಎಷ್ಟು ಬ್ಯುಸಿ ಅಂದ್ರೆ ದಿನದ ಇಪ್ಪತ್ತಾನಾಲ್ಕು ಗಂಟೆ ಕೂಡ ಸಾಕಾಗಲ್ಲ. ಊಟ ಮಾಡಲು, ನಿದ್ದೆ ಮಾಡಲು ಟೈಮ್ ಇರಲ್ಲ. ಈ ವಿಡಿಯೋ ನೋಡಿದ್ರೆ ಈ ವ್ಯಕ್ತಿ ಎಷ್ಟು ಬ್ಯುಸಿ ಅನ್ನೋದು ನಿಮಗೆ ತಿಳಿಯುತ್ತೆ. ಚಲಿಸುವ ಬೈಕ್‌ನಲ್ಲಿ ಶೇವಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವ್ಯಕ್ತಿಯ ಕೆಲಸ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ

Video: ಚಲಿಸುವ ಬೈಕ್‌ನಲ್ಲಿ ಶೇವಿಂಗ್ ಮಾಡಿದ ವ್ಯಕ್ತಿ, ಮುಂದೇನಾಯ್ತು ನೋಡಿ
ವೈರಲ್ ವಿಡಿಯೋ
Image Credit source: Facebook

Updated on: Feb 25, 2026 | 12:09 PM

ಈಗಿನ ಕಾಲದಲ್ಲಿ ಎಲ್ಲರೂ ಬ್ಯುಸಿನೇ. ಮನೆಯವರ ಹತ್ರ ಮಾತನಾಡಲು ಸಾಧ್ಯವಾಗದಷ್ಟು ಬ್ಯುಸಿ. ಯಾರತ್ರ ಕೇಳಿದ್ರು ಟೈಮ್ ಸಾಕಾಗಲ್ಲ ಎಂದು ಹೇಳ್ತಾರೆ. ಈ ವ್ಯಕ್ತಿಯ ಕೆಲಸ ನೋಡಿದ್ರೆ  ನಿಮಗೂ ಕೂಡ ಇವನಷ್ಟು ಬ್ಯುಸಿ ಯಾರು ಇರಲ್ಲ ಎಂದೆನಿಸಬಹುದು. ಹೌದು, ವ್ಯಕ್ತಿಯೊಬ್ಬ (man) ಚಲಿಸುವ ಬೈಕ್‌ನಲ್ಲಿ ಶೇವಿಂಗ್ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ಈ ವ್ಯಕ್ತಿಯ ವಿರುದ್ಧ ಗರಂ ಆಗಿದ್ದಾರೆ.

Vinod Jaishi ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೈವೇ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದಾನೆ. ಆದರೆ ಬೈಕ್ ಹ್ಯಾಂಡಲ್ ಹಿಡಿಯುವ ಬದಲು ತನ್ನ ಎರಡೂ ಕೈಗಳನ್ನು ಮುಖದ ಹತ್ತಿರ ಹಿಡಿದು ಶೇವಿಂಗ್ ಮಾಡುತ್ತಿದ್ದಾನೆ. ಬೈಕ್ ತನ್ನ ಪಾಡಿಗೆ ಚಲಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇವನೆಷ್ಟು ಬ್ಯುಸಿ ಇರ್ಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಲ್ಟಿಟಾಸ್ಕಿಂಗ್ ಕಿಂಗ್ ಇವನೇ ಇರ್ಬೆಕು ಎಂದು ಹೇಳಿದ್ದಾರೆ.. ಮತ್ತೊಬ್ಬರು, ಎನ್ ಧೈರ್ಯ ಗುರು ಇವನಿಗೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us