ಇತ್ತೀಚಿನ ದಿನಗಳಲ್ಲಿ ಜನರು ಹೊಸ ಹೊಸ ಸ್ಟಂಟ್ಗಳನ್ನು ಮಾಡಲು ಹೆಚ್ಚು ಉತ್ಸುಕರಾಗಿರುತ್ತಾರೆ. ಇಂತಹ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಕೆಲವು ಅಚ್ಚರಿ ಮೂಡಿಸುವಂತಿದ್ದರೆ, ಇನ್ನು ಕೆಲವು ಭಯಂಕರವಾಗಿರುತ್ತವೆ. ಒಮ್ಮೆಲೆ ಬೆರಗಾಗಿ ನೋಡುವಷ್ಟು ಆಶ್ಚರ್ಯವನ್ನುಂಟು ಮಾಡುವ ವಿಡಿಯೋಗಳೂ ಸಹ ಹೆಚ್ಚು ವೈರಲ್ ಆಗುತ್ತವೆ. ಅಂತಹುದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ವ್ಯಕ್ತಿ ಬೈಕ್ನಲ್ಲಿ ಸಾಗುವಾಗ ಸ್ಟಂಟ್ ಮಾಡುತ್ತಿದ್ದಾನೆ. ವಿಡಿಯೋ ನೋಡಿದಾಕ್ಷಣ ಆಶ್ಚರ್ಯದ ಜತೆಗೆ ಭಯವೂ ಆಗುತ್ತದೆ. ಚಲಿಸುತ್ತಿರುವ ಬೈಕ್ನಲ್ಲಿ ವಿಭಿನ್ನ ಶೈಲಿಯ ಸ್ಟಂಟ್ಗಳನ್ನು ಮಾಡುತ್ತಿದ್ದಾನೆ. ಬೈಕ್ ಅತಿವೇಗದಲ್ಲಿ ಚಲಿಸುತ್ತಿದೆ ಜತೆಗೆ ವ್ಯಕ್ತಿಯ ಸಾಹಸಗಳು ಬೆರಗಾಗುವಂತೆ ಮಾಡಿದೆ.
ಬೈಕ್ ಚಲಿಸುತ್ತಿರುವಾಗಲೇ ಹ್ಯಾಂಡಲ್ ಬಿಟ್ಟು ವ್ಯಕ್ತಿ ಕೈ ಕಟ್ಟಿ ಕುಳಿತಿದ್ದಾನೆ. ಕಾಲನ್ನೂ ಸಹ ಮಡಚಿ ಕುಳಿತುಕೊಳ್ಳುತ್ತಾನೆ. ಬೈಕ್ ಮೇಲೆ ಮಲಗುತ್ತಾನೆ, ಹಿಂತಿರುಗಿಯೂ ಸಹ ಕುಳಿತುಕೊಳ್ಳುತ್ತಾನೆ. ವಿಡಿಯೋಗೆ ಮ್ಯೂಸಿಕ್ ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಬಿಗ್ ಬುಲ್ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಫುಲ್ ವೈರಲ್ ಆಗಿದ್ದು 21 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಅನೇಕರು ವಿಡಿಯೋವನ್ನು ಇಷ್ಪಟ್ಟಿದ್ದಾರೆ. ವ್ಯಕ್ತಿಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ತಮಾಷೆಯ ಕಾಮೆಂಟ್ಗಳನ್ನು ಮಾಡಿದ್ದರೆ, ಇನ್ನು ಕೆಲವರು ವಿಡಿಯೋದಲ್ಲಿ ಅಚ್ಚರಿಯ ಸಂದೇಶವೂ ಇದೆ, ಯಾವುದೇ ಪ್ರತಿಭೆಯಾಗಲಿ.. ಅದೆಷ್ಟೋ ಸಮಯದ ಕಲಿಕೆ ಇರುತ್ತದೆ. ಸಾಮಾನ್ಯ ಜನರು ಈ ವಿಡಿಯೋ ನೋಡಿ ಇದೇ ರೀತಿ ಮಾಡಬೇಡಿ ಎಂದು ಹೇಳಿದ್ದಾರೆ. ಇನ್ನೋರ್ವರು ತಮ್ಮ ಅಭಿಪ್ರಾಯ ತಿಳಿಸಿದ್ದು, ಅಪಾಯಕಾರಿ ವಿಡಿಯೋ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:
Viral Video: ದೆಹಲಿ ಮಹಾನಗರದ ಮಧ್ಯದಲ್ಲೇ ಸೃಷ್ಟಿಯಾಯ್ತು ಜಲಪಾತ! ಭಾರೀ ಮಳೆಗೆ ಅಸ್ತವ್ಯಸ್ತವಾಯ್ತು ರಾಷ್ಟ್ರ ರಾಜಧಾನಿ
Viral Video: ಹಾರುತ್ತಿರುವ ಡ್ರೋನ್ ಹಿಡಿದು ಜಗಿದ ಮೊಸಳೆ; ವಿಡಿಯೋ ನೋಡಿ
(Man showed amazing bike ride stunt video goes viral)
Published On - 1:18 pm, Fri, 3 September 21