ಮನೆ ಮನೆಗೆ ಬಂತು ಒಂಟೆ ಗಾಡಿಯ ಲೈಬ್ರರಿ; 1,500ಕ್ಕೂ ಹೆಚ್ಚಿನ ಪುಸ್ತಕಗಳನ್ನು ನೋಡಿ ರಾಜಸ್ಥಾನದ ಮಕ್ಕಳೆಲ್ಲಾ ಫುಲ್ ಖುಷ್
ಮಕ್ಕಳಿಗೆ ಆಕರ್ಷಣೆಯಾಗಿ ಕಾಣುವಂತೆ ಒಂಟೆ ಗಾಡಿಯ ಸುಲ್ಲಲೂ ಬಣ್ಣ ಬಣ್ಣದ ಬಲೂನುಗಳನ್ನು ಕಟ್ಟಿ ಅಲಂಕಾರ ಮಾಡಲಾಗಿದೆ. 1500 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊತ್ತ ಒಂಟೆ ಗಾಡಿ ಹಳ್ಳಿ ಹಳ್ಳಿಯ ಮನೆಗಳ ಬಾಗಿಲಿಗೆ ತಲುಪುತ್ತದೆ.
ಕೊರೊನಾ ಸಾಂಕ್ರಾಮಿಕದ ಮಧ್ಯೆ ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆ ಆಗಬಾರದೆಂದು ರಾಜಸ್ಥಾನದಲ್ಲಿ ಒಂಟೆ ಗಾಡಿಯ ಲೈಬ್ರರಿ ಆರಂಭಗೊಂಡಿದೆ. ಶಾಲೆಗಳನ್ನು ಮುಚ್ಚಿರುವ ಸಮಯದಲ್ಲಿ ಈ ಗ್ರಂಥಾಲಯವು ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿರುವ ಹಳ್ಳಿ ಹಳ್ಳಿಗೆ ಆಕರ್ಷಣೆಯಾಗಿದೆ. ಮಕ್ಕಳಲ್ಲಿ ಓದುವ ಅಭ್ಯಾಸ ಎಂದೂ ನಿಲ್ಲಬಾರದು ಎಂಬ ಉದ್ದೇಶದಿಂದ ಮನೆ ಬಾಗಿಲಿಗೆ ಈ ಒಂಟೆ ಗಾಡಿಯ ಗ್ರಂಥಾಲಯ ತೆರಳುತ್ತಿದೆ.
ರಾಜ್ಯದ ದೂರದ ಹಳ್ಳಿಗಳಲ್ಲಿರುವ ಮಕ್ಕಳಿಗಾಗಿ ಒಂಟೆ ಗಾಡಿಯ ಗ್ರಂಥಾಲಯವಾದ ವಿಶಿಷ್ಟ ಉಪಕ್ರಮವನ್ನು ಆರಂಭಿಸಲಾಗಿದೆ. ಮಕ್ಕಳಿಗೆ ಆಕರ್ಷಣೆಯಾಗಿ ಕಾಣುವಂತೆ ಒಂಟೆ ಗಾಡಿಯ ಸುಲ್ಲಲೂ ಬಣ್ಣ ಬಣ್ಣದ ಬಲೂನುಗಳನ್ನು ಕಟ್ಟಿ ಅಲಂಕಾರ ಮಾಡಲಾಗಿದೆ. 1500 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊತ್ತ ಒಂಟೆ ಗಾಡಿ ಹಳ್ಳಿ ಹಳ್ಳಿಯ ಮನೆಗಳ ಬಾಗಿಲಿಗೆ ತಲುಪುತ್ತದೆ.
ಎನ್ಜಿಒ ರೂಮ್ ಟು ರೀಡ್ ವಿಭಾಗವು ಈ ಉಪಕ್ರಮವನ್ನು ಪ್ರಾರಂಭಿಸಿದೆ. ಆನ್ಲೈನ್ ತರಗತಿಗಳು ನಡೆಯುತ್ತಿದ್ದರೂ ಸಹ ಓದುವ ಅಭ್ಯಾಸ ಮಕ್ಕಳಲ್ಲಿ ಬೆಳೆಯಬೇಕು. ಮಕ್ಕಳು ಎಂದಿಗೂ ಓದುವ ಅಭ್ಯಾಸವನ್ನು ನಿಲ್ಲಿಸಬಾರದು ಎಂದು ಶಾಲಾ ಶಿಕ್ಷಣ ಜಂಟಿ ನಿರ್ದೇಶಕ ಪ್ರೇಮ್ ಚಂದ್ ಸಾಖ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.
Rajasthan | Camel carts carrying books are helping children have access to educational resources amid #COVID19 pandemic
With help of an NGO, students are being provided education via camel carts libraries: Prem Chand Sankhla, Joint Director, School Education Department, Jodhpur pic.twitter.com/LWGHV7b63C
— ANI (@ANI) September 2, 2021
ಇತರರ ವಾಹನಗಳು ದೂರದ ಮರುಭೂಮಿ ಪ್ರದೇಶಗಳನ್ನು ತಲುಪಲು ಸಾಧ್ಯವಾದ ಕಾರಣ ಒಂಟೆ ಗಾಡಿಯನ್ನು ಗ್ರಂಥಾಲಯವಾಗಿ ಸಿದ್ಧಪಡಿಸಲಾಯಿತು. ಇದು ಜೋದ್ಪುರದ 30 ಗ್ರಾಮಗಳನ್ನು ಇದು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಒಂದು ಒಂಟೆ ಗಾಡಿಯಲ್ಲಿ ಒಬ್ಬ ಸವಾರ, ಇಬ್ಬರು ಎನ್ಜಿಒ ಸದಸ್ಯರು ಮತ್ತು ಹತ್ತಿರ ಶಾಲೆಯ ಓರ್ವ ಶಿಕ್ಷಕರು ಇರುತ್ತಾರೆ. ಮಕ್ಕಳಿಗೆ ಅವರ ವಯಸ್ಸು ಮತ್ತು ಆಸಕ್ತಿಗೆ ಅನುಗುಣವಾಗಿ ಪುಸ್ತಕಗಳನ್ನು ನೀಡಲಾಗುತ್ತದೆ. ಈ ಪ್ರಯತ್ನದಿಂದ ಮಕ್ಕಳು ಓದುವಂತೆ ಮಾಡುವುದು ಮಾತ್ರವಲ್ಲದೆ ಅವರಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಪುಸ್ತಕದಲ್ಲಿರುವ ಕಥೆಗಳನ್ನು ಶಿಕ್ಷಕರು, ಎನ್ಜಿಒ ಸದಸ್ಯರು, ಸ್ಥಳೀಯ ವಿದ್ಯಾವಂತರ ಜತೆಗೆ ಗ್ರಾಮಸ್ಥರು ವಿವರಿಸುತ್ತಾರೆ. ಪುಸ್ಕ ಮಕ್ಕಳಿಗೆ ಇಷ್ಟವಾದರೆ ಆ ಪುಸ್ತಕಗಳನ್ನು ಮಕ್ಕಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಶಾಲೆಗಳಿಲ್ಲದೆ ಒಂದೂವರೆ ವರ್ಷ ಕಳೆಯಬೇಕಾಯಿತು. ಶಿಕ್ಷಕರೊಂದಿಗೆ ಮತ್ತು ಅಭ್ಯಾಸದೊಂದಿಗೆ ಸಂಪರ್ಕವನ್ನು ಕಾಯ್ದುಕೊಳ್ಳಲು ಇದೊಂದು ಉಪಕ್ರಮವಾಗಿದೆ. ಮಕ್ಕಳೊಂದಿಗೆ ಪಾಲ್ಗೊಳ್ಳಲು ಮತ್ತು ಪ್ರತಿದಿನ 15 ರಿಂದ 20 ನಿಮಿಷಗಳ ಕಾಲ ಓದುವ ಮತ್ತು ಬರೆಯುವ ಅಭ್ಯಾಸ ಇರುವಂತೆ ನೋಡಿಕೊಳ್ಳಲು ಪೋಷಕರಿಗೆ ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
Award : ಲೇಖಕಿ ಕಾವ್ಯಾ ಕಡಮೆಗೆ ‘ಛಂದ ಪುಸ್ತಕ ಹಸ್ತಪ್ರತಿ ಪ್ರಶಸ್ತಿ‘
(Rajasthan unique mobile library and camel cart for village kids)
Published On - 11:06 am, Fri, 3 September 21