Viral Video: ಅಮಾಯಕನಂತೆ ವರ್ತಿಸುತ್ತಾ ಸೈಕಲ್ ಕದ್ದು ಪರಾರಿಯಾಗಲು ಹೊರಟ ಕಳ್ಳ; ಮುಂದೇನಾಯ್ತು? ವಿಡಿಯೊ ನೋಡಿ

ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಕಳ್ಳನು ಸೈಕಲ್ ಕದಿಯಲು ಬಂದಿದ್ದಾನೆ. ಮುಂದೇನಾಗುತ್ತೆ ಗೊತ್ತಾ? ವಿಡಿಯೊದಲ್ಲೇ ನೋಡಿ.

Viral Video: ಅಮಾಯಕನಂತೆ ವರ್ತಿಸುತ್ತಾ ಸೈಕಲ್ ಕದ್ದು ಪರಾರಿಯಾಗಲು ಹೊರಟ ಕಳ್ಳ; ಮುಂದೇನಾಯ್ತು? ವಿಡಿಯೊ ನೋಡಿ
ಸೈಕಲ್ ಕದ್ದು ಪರಾರಿಯಾಗಲು ಹೊರಟ ಕಳ್ಳ
Updated By: shruti hegde

Updated on: Nov 21, 2021 | 10:22 AM

ಕಳ್ಳ ಕದಿಯಲು ಹೋಗಿ ಸಿಕ್ಕಿಬಿದ್ದ ವಿಡಿಯೊಗಳು ಸಾಕಷ್ಟು ಹರಿದಾಡುತ್ತವೆ. ಕದಿಯೋಕೆಂದು ಹೋಗಿ ಎಡವಟ್ಟಾಗಿ ಮಾಲೀಕರ ಬಳಿ ಸಿಲುಕಿಕೊಂಡು ಒದ್ದಾಡಿದ ಕಳ್ಳರ ಪಜೀತಿ ನೋಡಲು ಮಜವಾಗುತ್ತವೆ. ಅವುಗಳಲ್ಲಿ ಕೆಲವು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಕಳ್ಳನು ಸೈಕಲ್ ಕದಿಯಲು ಬಂದಿದ್ದಾನೆ. ಮುಂದೇನಾಗುತ್ತೆ ಗೊತ್ತಾ? ವಿಡಿಯೊದಲ್ಲೇ ನೋಡಿ.

ಕಳ್ಳ ತನ್ನದೇ ಮನೆಯ ಗೇಟ್ ಅನ್ನುವಂತೆ ಆರಾಮವಾಗಿ ನಡೆದು ಬಂದು ಗೇಟ್ ಒಳಗೆ ನಿಂತಿದ್ದಾನೆ. ಮೆಟ್ಟಿಲು ಏರಿ ಮೇಲೆ ಹತ್ತುವಂತೆ ವರ್ತಿಸುತ್ತಾನೆ. ಆಚೆ ಈಚೆಗೆಲ್ಲಾ ತಿರುಗಾಡಿ ಯಾರಾದರೂ ಇದ್ದಾರಾ? ಎಂದು ಪರೀಕ್ಷಿಸಿಕೊಳ್ಳುತ್ತಾನೆ. ಬಳಿಕ ಅಲ್ಲೇ ನಿಂತಿದ್ದ ಕೆಂಪು ಬಣ್ಣದ ಸೈಕಲ್ ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ. ಇಷ್ಟೇ ಅಲ್ಲ. ಮುಂದೇನಾಯ್ತು? ಎಂಬುದು ಮಜವಾಗಿದೆ ವಿಡಿಯೋ ನೋಡಿ. ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಈ ವಿಡಿಯೊ ಸುಮಾರು 8,850 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ಕಳ್ಳ ಸೈಕಲ್ ಕದ್ದು ಓಡುತ್ತಿದ್ದಂತೆಯೇ ಹಿಂದಿನಿಂದ ಮಾಲೀಕ ಕೂಡಾ ಓಡಿದ್ದಾನೆ. ಬಳಿಕ ಕಳ್ಳನನ್ನು ಹಿಡಿದು ತನ್ನ ಸೈಕಲ್ಅನ್ನು ಹಿಂತಿರುಗಿ ತಂದಿದ್ದಾನೆ. ಈ ವಿಡಿಯೊ ಇದೀಗ ಫುಲ್ ವೈರಲ್ ಆಗಿದ್ದು, ಕಳ್ಳನ ಪಜೀತಿ ಏನಾಗಿರಬಹುದು? ಎನ್ನುತ್ತಾ ನೆಟ್ಟಿಗರು ತಮಾಷೆ ಮಾಡಿದ್ದಾರೆ. ಸಕತ್ ವೈರಲ್ ಆದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಕಳ್ಳನ ಪರಿಸ್ಥಿತಿ ನೋಡಿ ಕೆಲವರು ನಕ್ಕಿದ್ದರೆ, ಮಾಲೀಕ ಎಚ್ಚೆತ್ತುಕೊಂಡಿದ್ದಕ್ಕೆ ಸೈಕಲ್ ಸಿಕ್ಕಿತು ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಆನೆ ಮರಿಯ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತನ ವಿಡಿಯೋ ವೈರಲ್

Viral Video: ದೈತ್ಯ ಆನೆ ಕಬ್ಬಿಣದ ಬೇಲಿ ಏರುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೊ ನೋಡಿ

Published On - 10:20 am, Sun, 21 November 21