ತತ್ ಕ್ಷಣದಲ್ಲೇ ಕರ್ಮ…ಅಲ್ಲೇ ಡ್ರಾ ಅಲ್ಲೇ ಬಹುಮಾನ: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ, ನೀವು ಏನು ಕೊಟ್ಟರೂ ಅದು ನಿಮಗೆ ಮರಳಿ ಬರುತ್ತದೆ. ಇದನ್ನು ಕರ್ಮ ಸಿದ್ಧಾಂತ ಎನ್ನುತ್ತಾರೆ. ತಪ್ಪು ಮಾಡಿದವರು ಖಂಡಿತ ಬೆಲೆ ತೆರುತ್ತಾರೆ. ನಾವು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಅನೇಕ ವೀಡಿಯೊಗಳನ್ನು ನೋಡಿದ್ದೇವೆ. ಇತ್ತೀಚೆಗೆ ಆ ಗುಂಪಿಗೆ ಸೇರಿದ ವಿಡಿಯೋವೊಂದು ಜೋರಾಗಿ ಸದ್ದು ಮಾಡುತ್ತಾ ಹರಿದಾಡುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಅದರ ಪಾಡಿಗೆ ಅದು ನಡೆದು ಹೋಗುತ್ತಿದ್ದ ನಾಯಿಯ ಮೇಲೆ ತನ್ನ ಪೌರುಷ ತೋರಲು ಹೋಗಿದ್ದಾನೆ. ಅಷ್ಟೇ ಆ ನಾಯಿ ನೀನಾ ನಾನಾ ಎಂದು ಅವನ ಮೇಲೆ ಎಗರಿದೆ. ವೀರತ್ವ ತೋರಿಸಲು ಕಲ್ಲಿನಿಂದ ಹೊಡೆಯ ಬಂದ ವ್ಯಕ್ತಿಗೆ ಜೋರಾಗಿಯೇ ಬುದ್ದಿ ಕಲಿಸಿದೆ.
ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ:
ವೈರಲ್ ಆಗಿರುವ ವೀಡಿಯೋ ನೋಡಿದಾಗ.. ಅವನ ಕರ್ಮವು ಕಲ್ಲು ಒಗೆದ ಶರವೇಗದಲ್ಲೇ ಹಿಂತಿರುಗಿ ಬಂದಿದೆ. ನಾಯಿ ಆತನ ಮೇಲೆ ದಾಳಿ ಮಾಡಿದೆ. ಕಚ್ಚಿ ಕಚ್ಚಿ ಆ ವ್ಯಕ್ತಿಗೆ ಪಾಠ ಕಲಿಸಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟಿಜನ್‌ಗಳು ಸಾಲುಗಟ್ಟಿ ಕಾಮೆಂಟ್‌ಗಳ ಮೂಲಕ ಆ ವ್ಯಕ್ತಿಗೆ ನಾಯಿ ಪಾಠ ಕಲಿಸಿದ್ದಾರೆ.