AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಳ್ಳೆಯ ಹುಡುಗ ಓಲ್ಲೀ ಕೊಡುವ ಈ ಗಿಫ್ಟ್ಸ್​ ನೋಡಿ ನಗಬಾರದು ಮತ್ತೆ!

Welcome Home Gifts : ನಿಮ್ಮ ಪ್ರೀತಿಪಾತ್ರರನ್ನು ಮನೆಗೆ ಸ್ವಾಗತಿಸಲು ವೆಲ್​ಕಮ್​ ಗಿಫ್ಟ್ಸ್ ಐಡಿಯಾ ಬೇಕಾ? ಈ ಒಳ್ಳೆಯ ಹುಡುಗ ಓಲ್ಲೀಯನ್ನು ಕೇಳಿ. ಒಂದೂವರೆ ಲಕ್ಷ ಫಾಲೋವರ್ಸ್​ ಗಳಿಸಿದ ಇವನ ಈ ವಿಡಿಯೋ ನೋಡಿ.​

Viral Video: ಒಳ್ಳೆಯ ಹುಡುಗ ಓಲ್ಲೀ ಕೊಡುವ ಈ ಗಿಫ್ಟ್ಸ್​ ನೋಡಿ ನಗಬಾರದು ಮತ್ತೆ!
ಸ್ವಾಗತ!
TV9 Web
| Edited By: |

Updated on: Aug 24, 2022 | 10:26 AM

Share

Dog : ಸ್ವಾಗತ! ಶೂ ಹಿಡಿದುಕೊಂಡು ಬರುತ್ತಾನೆ ಈ ಒಳ್ಳೆಯ ಹುಡುಗ ಓಲ್ಲೀ. ಸುಸ್ವಾಗತ! ಪಾತ್ರೆ ಒರೆಸುವ ಬಟ್ಟೆಯೊಂದಿಗೆ ಬರುತ್ತಾನೆ ಈ ಒಳ್ಳೆಯ ಹುಡುಗ ಓಲ್ಲೀ. ಓಹ್​ ಬನ್ನಿ ಬನ್ನಿ, ಗಮ್​ ಟೇಪ್ ಬಾಯಲ್ಲಿ ಕಚ್ಚಿಕೊಂಡು ಓಡಿ ಬರುತ್ತಾನೆ ಈ ಒಳ್ಳೆಯ ಹುಡುಗ ಓಲ್ಲೀ. ವಾವ್  ಬಂದ್ರಾ, ಆಟದ ಕಂಬಳಿಹುಳುವಿನೊಂದಿಗೆ ಬರುತ್ತಾನೆ ಒಳ್ಳೆಯ ಹುಡುಗ ಓಲ್ಲೀ. ಬಂದೇ ಬಿಟ್ರಿ! ಕುಷನ್ ಪಿಲೋ ಜೊತೆ ಬರುತ್ತಾನೆ ಒಳ್ಳೆಯ ಹುಡುಗ ಓಲ್ಲಿ. ಎಲ್ಲಿಂದ ಬರುತ್ತಾನೆ ಏನು ಕಥೆ? ತಲೆಕೆಡಿಸ್ಕೊಳ್ತಿದೀರಾ? ಇನ್​ಸ್ಟಾಗ್ರಾಮ್​ನಲ್ಲಿ Good Boy Ollie ಎಂಬ ಪುಟವನ್ನು ಹೊಂದಿದ ಈ ನಾಯಿ ಸುಮಾರು ಐದೂವರೆ ಲಕ್ಷ ಫಾಲೋವರ್​ಗಳನ್ನು ಹೊಂದಿದೆ. ದಿನವೂ ಅದರ ಪೋಷಕ ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆ ಒಂದೊಂದೇ ಸಾಮಾನು ಬಾಯಿಯಲ್ಲಿ ಕಚ್ಚಿಹಿಡಿದು ಸ್ವಾಗತ ಕೋರಿ ಮುದ್ದು ಮಾಡಿಸಿಕೊಳ್ಳುತ್ತದೆ. ನೋಡಿ ಈ ವೆಲ್ಕಮ್​ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Good Boy Ollie ? (@good.boy.ollie)

ನಾಯಿಗಳು ಹೀಗೆ ತಮ್ಮ ಪೋಷಕರನ್ನು ಪ್ರೀತಿಸುವ ರೀತಿ ಇದು. ಅದರಲ್ಲೂ ರಿಟ್ರೈವರ್​ ನಾಯಿಗಳು ಹೀಗೆ ಗಿಫ್ಟ್​ ಕೊಡುವುದು ಹೆಚ್ಚು. ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್​ ಈ ವಿಡಿಯೋ ಪಡೆದಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ