45 ವರ್ಷಗಳ ನಂತರ ತನ್ನ ದಾದಿಯನ್ನು ಹುಡುಕಿಕೊಂಡು ಹೋದ ಈ ವ್ಯಕ್ತಿ

|

Updated on: Sep 29, 2022 | 2:57 PM

Meeting his Nanny : ಕೂಸಿದ್ದಾಗ ತನ್ನನ್ನು ಪೋಷಿಸಿದ ದಾದಿಯನ್ನು ಹುಡುಕಿಕೊಂಡು ಸ್ಪೇನ್​ನಿಂದ ಬೊಲಿವಿಯಾಕ್ಕೆ ಹೋಗಿದ್ದಾನೆ ಈ ವ್ಯಕ್ತಿ. ಈ ಅಪೂರ್ವ ಸಮ್ಮಿಲನದ ವಿಡಿಯೋ ಮಾಂಟೇಜ್ ಇಲ್ಲಿದೆ.

45 ವರ್ಷಗಳ ನಂತರ ತನ್ನ ದಾದಿಯನ್ನು ಹುಡುಕಿಕೊಂಡು ಹೋದ ಈ ವ್ಯಕ್ತಿ
ಬೊಲೀವಿಯಾದಲ್ಲಿ ತನ್ನ ದಾದಿಯೊಂದಿಗೆ ಸ್ಪೇನ್​ನ ವ್ಯಕ್ತಿ
Follow us on

Viral Video : ಕೂಸುಗಳನ್ನು ನೋಡಿಕೊಳ್ಳಲು ತಮ್ಮ ಮನೆಗಳಲ್ಲಿ ಸಾಕಷ್ಟು ಜನ ದಾದಿಯರನ್ನು ನೇಮಿಸಿಕೊಂಡಿರುತ್ತಾರೆ. ಮಗು ದೊಡ್ಡದಾಗುತ್ತಿದ್ದಂತೆ ದಾದಿ ಬೇರೆಮನೆಯ ಕೂಸುಗಳನ್ನು ನೋಡಿಕೊಳ್ಳಲು ಹೊರಟುಬಿಡುತ್ತಾರೆ. ಆ ಅಗಲುವಿಕೆ ಮನೆಮಂದಿಗೂ ಮಗುವಿಗೂ ದಾದಿಗೂ ಅನಿವಾರ್ಯ. ಅಂಥ ಬಂಧವನ್ನು ಅದು ಕಟ್ಟಿಕೊಟ್ಟಿರುತ್ತದೆ. ಕಾಲ ನಿಲ್ಲುವುದೇ? ಕ್ರಮೇಣ ಎಲ್ಲ ಬದಲಾಗುತ್ತಾ ಸಾಗುತ್ತದೆ. ಆದರೆ, ಎಲ್ಲ ಕೂಸುಗಳಿಗೂ ಈ ದಾದಿಯರು ನೆನಪಿರುತ್ತಾರೆಯೇ? ಅಪರೂಪಕ್ಕೆ ಕೆಲವರಿಗೆ ಮಾತ್ರ ನೆನಪಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ. ಭಾವಪೂರ್ಣತೆಯಿಂದ ಕೂಡಿರುವ ಈ ವಿಡಿಯೋ ನಿಮ್ಮ ಮನಸ್ಸನ್ನು ಸಂಪೂರ್ಣ ಆರ್ದ್ರವಾಗಿಸುತ್ತದೆ. ಈ ವ್ಯಕ್ತಿ 45 ವರ್ಷಗಳ ನಂತರ ಸ್ಪೇನ್​ನಿಂದ ಬೊಲಿವಿಯಾಕ್ಕೆ ಪ್ರಯಾಣಿಸಿದ್ದಾನೆ. ಕಾರಣ, ಚಿಕ್ಕಂದಿನಲ್ಲಿ ತನ್ನನ್ನು ನೋಡಿಕೊಂಡ ದಾದಿಯನ್ನು ಕಾಣಲು. ಗುಡ್​ನ್ಯೂಸ್​ ಕರಸ್ಪಾಂಡೆಂಟ್ ಎಂಬ ಟ್ವಿಟರ್ ಖಾತೆಯು ಈ ವಿಡಿಯೋದ ಮಾಂಟೇಜ್​ ಹಂಚಿಕೊಂಡಿದೆ.

After more than 45 years apart this man finds his former nanny named Ana. An incredible woman who took care of him as a child as if he were her own son. (?:juanitojonsson)

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ದಾದಿಯ ಹೆಸರು ಆನಾ, ತನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುವಂಥ ಕರುಣಾಮಯಿ ಈಕೆ. ಬಹುಶಃ ಈಕೆಯ ಈ ಗುಣವೇ ಈತನನ್ನು 45 ವರ್ಷಗಳ ನಂತರವೂ ಈಕೆಯನ್ನು ನೋಡಲೇಬೇಕೆಂದು ಪ್ರೇರೇಪಿಸಿದ್ದು ಎನ್ನಿಸುತ್ತದೆ. ಅಚಾನಕ್​ ಆಗಿ ಈತ ಆಕೆಯ ಮನೆಗೆ ಹೋದಾಗ ಅಪರಿಚಿನಂತೆ ನೋಡುತ್ತಾಳೆ. ಹೀಗೀಗೆ ಎಂದು ಆತ ಪರಿಚಯಿಸಿಕೊಂಡಾಗ ಆಕೆ ಕರಗಿಹೋಗುತ್ತಾಳೆ.

ನೆಟ್ಟಿಗರು ಈ ಹೃದಯಸ್ಪರ್ಶಿಯಾದ ವಿಡಿಯೋ ನೋಡಿ ನೆನಪುಗಳಲ್ಲಿ, ಪ್ರೀತಿಯಲ್ಲಿ ತೇಲಿಹೋಗುತ್ತಿದ್ದಾರೆ. ‘ಈ ದೃಶ್ಯ ಬಹಳ ಸುಂಧರವಾಗಿದೆ. ನನ್ನ ಸಹೋದರಿಯರು ಮತ್ತು ನಾನು ನಮ್ಮ ದಾದಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಆದರೆ ನಮಗೆ ಇಂಥ ಅದೃಷ್ಟ ಇಲ್ಲವೆನ್ನಿಸುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ ಒಬ್ಬರು.

ಇಂಥ ಸಂಗತಿಗಳನ್ನು ಟ್ವಿಟರ್​ನಲ್ಲಿ ನೋಡುವುದು ಬಹಳ ಆಹ್ಲಾದವನ್ನು ಕೊಡುತ್ತದೆ ಎಂದು ಮತ್ತೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

ಯಾಂತ್ರಿಕ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಅನೇಕರಿಗೆ ಮನುಷ್ಯ ಸಂಬಂಧಗಳ ಬೆಲೆಯನ್ನು ನೆನಪಿಸುವುದು ಇಂಥ ಅಪರೂಪದ ವಿಡಿಯೋಗಳೇ ಎಂಬಂತಾಗಿದೆ ಪರಿಸ್ಥಿತಿ!

ನಿಮ್ಮನ್ನು ಚಿಕ್ಕಂದಿನಲ್ಲಿ ನೋಡಿಕೊಂಡ ಇಂಥ ಅಪರೂಪದ ವ್ಯಕ್ತಿಗಳು ನಿಮ್ಮ ನೆನಪಲ್ಲಿದ್ದಾರೆಯೇ? ಅವರನ್ನು ಎಂದಾದರೂ ಸಂಪರ್ಕಿಸಲು ಪ್ರಯತ್ನಿಸಿದ್ದೀರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:47 pm, Thu, 29 September 22