ನಮ್ಮಲ್ಲಿ ಜುಗಾಡ್ ಐಡಿಯಾಗಳಿಗೇನೂ ಕೊರತೆ ಇಲ್ಲ. ಹೊಸ ಹೊಸ ಪ್ರಯೋಗಗಳ ಕುರಿತ ಇಂತಹ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಹೊಲಿಗೆ ಯಂತ್ರವನ್ನು ಕಾರ್ಯನಿರ್ವಹಿಸಲು ವ್ಯಕ್ತಿಯೊಬ್ಬರು ವಿಭಿನ್ನ ಸಾಧನವನ್ನು ಬಳಸಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯು ಹೊಲಿಗೆ ಯಂತ್ರವನ್ನು ನೆಲದ ಮೇಲೆ ಇರಿಸಿಕೊಂಡಿದ್ದಾರೆ. ಈ ಹೊಲಿಗೆ ಯಂತ್ರದ ರೋಟೇಟರ್ ಅನ್ನು ತಿರುಗಿಸಲು ಮುಖ್ಯ ಸ್ಟ್ಯಾಂಡ್‌ನಲ್ಲಿ ಬೈಕಿನ ಹಿಂದಿನ ಚಕ್ರಕ್ಕೆ ತಾಗುವಂತೆ ಇರಿಸಿದ್ದಾರೆ. ಬೈಕ್ ಸ್ಟಾರ್ಟ್ ಮಾಡಿ ಅದರ ಹಿಂದಿನ ಚಕ್ರವನ್ನು ತಿರುಗಿಸಿದ ತಕ್ಷಣ, ಹೊಲಿಗೆ ಯಂತ್ರದ ಆವರ್ತಕವೂ ತಿರುಗಲು ಪ್ರಾರಂಭಿಸುತ್ತದೆ. ಈ ಮೂಲಕ ವ್ಯಕ್ತಿಯು ಸುಲಭವಾಗಿ ಬಟ್ಟೆಯನ್ನು ಹೊಲಿಯುವುದನ್ನು ಕಾಣಬಹುದು.
ಇದನ್ನೂ ಓದಿ: ಇಂಡೋನ್ಯೇಷ್ಯಾದಲ್ಲಿ ನಡೆಯುತ್ತೆ ಪ್ರವಾಸಿಗರ ಜೊತೆ ತಾತ್ಕಾಲಿಕ ಮದುವೆ, ಏನಿದು ವಿಚಿತ್ರ ಮದುವೆ ಪದ್ಧತಿ?
sarcasticschool_ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಈ ವೀಡಿಯೊವನ್ನು ಇಷ್ಟಪಟ್ಟಿದ್ದು, ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು, ಏನ್ ತಲೆ ಗುರು ಇವನದ್ದು, ಹೀಗೂ ಬಟ್ಟೆ ಹೊಲಿಯಬಹುದಂತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪೆಟ್ರೋಲ್ ಚಾಲಿತ ಬೈಕ್ ಬಳಸುವ ಬದಲು ಬ್ಯಾಟರಿ ಯಂತ್ರವನ್ನು ಬಳಸಿದರೆ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ