Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್

Mango Man : ಪದ್ಮಶ್ರೀ ಪುರಸ್ಕೃತ ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ತಾವು ಸೃಷ್ಟಿಸಿದ ಹೊಸ ಮಿಶ್ರತಳಿಯ ಮಾವಿನಹಣ್ಣುಗಳಿಗೆ ಅಮಿತ್ ಆಮ್​ ಮತ್ತು ಸುಷ್ಮಿತಾ ಆಮ್​ ಎಂದು ಹೆಸರಿಸಿದ್ದಾರೆ.

Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್
ಅಮಿತ್ ಷಾ, ಕಲೀಮುಲ್ಲಾ, ಸುಷ್ಮಿತಾ ಸೇನ್
Updated By: ಶ್ರೀದೇವಿ ಕಳಸದ

Updated on: Aug 05, 2022 | 10:59 AM

Trending : ಆಪೂಸ್, ರಸಪುರಿ, ಸಿಂಧೂರಾ ಹೀಗೆ ಸಾಕಷ್ಟು ಮಾವಿನ ತಳಿಗಳ ಹೆಸರುಗಳನ್ನು ಅದೆಷ್ಟೋ ವರ್ಷಗಳಿಂದ ಕೇಳುತ್ತ ಬಂದಿದ್ದೀರಿ. ಆದರೆ ಮ್ಯಾಂಗೋ ಮ್ಯಾನ್​ ಎಂದೇ ಪ್ರಸಿದ್ಧಿ ಪಡೆದ ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ, ತಾವು ಸೃಷ್ಟಿಸುವ ಹೊಸ ತಳಿಯ ಮಾವುಗಳಿಗೆ ಇಡುವ ಹೆಸರುಗಳನ್ನು ಗಮನಿಸಿದ್ದೀರಾ? ಹಿಂದೆ ಸೃಷ್ಟಿಸಿದ ಹೊಸ ತಳಿಗಳಿಗೆ ಐಶ್ವರ್ಯಾ ಆಮ್, ಸಚಿನ್ ಆಮ್ ಎಂದು ಹೆಸರಿಟ್ಟಿದ್ದರು. ಈಗ ಸೃಷ್ಟಿಸಿರುವ ಹೊಸ ಮಿಶ್ರ ತಳಿಗಳಿಗೆ ಸುಷ್ಮಿತಾ ಆಮ್​, ಅಮಿತ್ ಷಾ ಆಮ್​ ಎಂದು ಹೆಸರಿಸಿದ್ದಾರೆ. ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಮಾವಿನ ತಳಿಗಳಿಗೆ ಹೆಸರಿಡುವುದು ಇವರ ವಾಡಿಕೆ.

ಉತ್ತರ ಪ್ರದೇಶದ ಮಲಿಹಾಬಾದ್‌ನಲ್ಲಿರುವ ಅವರ ತೋಟದಲ್ಲಿ ಈ ಎರಡೂ ಮಿಶ್ರ ತಳಿಗಳನ್ನು ಬೆಳೆದಿದ್ದಾರೆ. ‘ಸೌಂದರ್ಯ, ವ್ಯಕ್ತಿತ್ವ, ಸಾಮಾಜಿಕ ಕಳಕಳಿಯಿಂದ ಗಮನ ಸೆಳೆದಿರುವ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಹೆಸರನ್ನಿಡುವುದು ಸೂಕ್ತ ಎನ್ನಿಸಿತು. ಆಕೆ ಸಹೃದಯಿ ಎಂದು ಜನ ನೆನಪಿಸಿಕೊಳ್ಳಬೇಕು ಅದಕ್ಕಾಗಿ ಆಕೆಯ ಹೆಸರು ಇಟ್ಟಿದ್ದೇನೆ. ಇನ್ನೊಂದು ಮಾವಿಗೆ ಅಮಿತ್ ಷಾ ಅವರ ಹೆಸರಿಟ್ಟಿದ್ದರೂ ಈ ತಳಿ ಗಾತ್ರದಲ್ಲಿ ಮತ್ತು ಪರಿಮಳದಲ್ಲಿ ಸುಧಾರಣೆ ಕಾಣಬೇಕಿದೆ. ಹಾಗಾಗಿ ಇನ್ನೂ ಸ್ವಲ್ಪ ಪ್ರಯೋಗಕ್ಕೆ ಒಳಪಡಿಸಬೇಕಿದೆ’ ಎಂದಿದ್ದಾರೆ ಕಲೀಮುಲ್ಲಾ.

ದಶಕಗಳಿಂದಲೂ ಮಿಶ್ರತಳಿ ಮಾವಿನಹಣ್ಣುಗಳನ್ನು ಬೆಳೆಯುತ್ತ ಪ್ರಸಿದ್ಧಿ ಪಡೆದಿರುವ ಕಲೀಮುಲ್ಲಾ ಅವರಿಗೆ ಈಗ 82 ವರ್ಷ. 300 ಕ್ಕೂ ಹೆಚ್ಚಿ ವಿಶಿಷ್ಟ ತಳಿಯ ಮಾವುಗಳನ್ನು ಬೆಳೆದಿರುವ ಇವರು ಮುಲಾಯಂ ಆಮ್, ನಮೋ ಆಮ್, ಸಚಿನ್ ಆಮ್, ಕಲಾಂ ಆಮ್, ಅಮಿತಾಬ್​ ಆಮ್​, ಯೋಗಿ ಆಮ್​ ಹೀಗೆ ಹೆಸರಿಸುತ್ತ ಬಂದಿದ್ದಾರೆ.

ತೋಟಗಾರಿಕೆ ಕ್ಷೇತ್ರದ ಸಾಧನೆಗಾಗಿ 2008ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

Published On - 10:54 am, Fri, 5 August 22