Trending : ಕೇರಳದ ಮಲ್ಲಪ್ಪುರಂನ ಯುವಕನೊಬ್ಬ ಮಹಡಿಯಿಂದ ಬಿಳುತ್ತಿದ್ದಾಗ ಆತನ ಅಣ್ಣ ಅವನನ್ನು ಹಿಡಿದುಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ. ಸದ್ಯ ಯಾವುದೇ ಗಾಯವಾಗಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ವೈರಲ್ ಆಗಿದೆ. ಟೆರೇಸ್ ಸ್ವಚ್ಛಗೊಳಿಸುವ ಕೆಲಸದಲ್ಲಿ ಮಗ್ನನಾಗಿದ್ದಾಗ ಈ ಘಟನೆ ಸಂಭವಿಸಿದೆ. ಪೈಪ್ನಿಂದ ಟೆರೇಸಿಗೆ ನೀರು ಸಿಂಪಡಿಸುತ್ತಿರುವಾಗ ಅರಿವಿಲ್ಲದೇ ಹಿಂಬದಿಯಲ್ಲಿ ಜಾರಿ ಬಿದ್ದಿದ್ದಾನೆ. ತಕ್ಷಣವೇ ಅವನ ಅಣ್ಣ ಅವನನ್ನು ಹಿಡಿದುಕೊಂಡಿದ್ದಕ್ಕೆ ಜೀವ ಉಳಿದಿದೆ! ಇಬ್ಬರೂ ನೆಲಕ್ಕುರುಳಿದ್ದಾರಷ್ಟೇ. ಹೆಚ್ಚಿನ ನೋವು ಗಾಯಗಳು ಸಂಭವಿಸದೇ ಇರುವುದು ಅದೃಷ್ಟವಲ್ಲದೆ ಇನ್ನೇನು? ನೀವೂ ಹುಷಾರು! ಎತ್ತರದಲ್ಲಿ ನಿಂತು ಇಂಥ ಕೆಲಸಗಳಲ್ಲಿ ತೊಡಗಿಕೊಂಡಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕೆಳಗೊಬ್ಬರು ಸಹಾಯಕ್ಕೆ ನಿಂತಿರುವುದು ಬಹಳೇ ಮುಖ್ಯ.
— Vishal Dharm (@VishalDharm1) August 3, 2022