Viral: ಸಂಬಳ ಎಷ್ಟಿದ್ದರೇನಂತೆ, ಹುಡುಗ್ರು ಸಿಂಪಲ್ ಎನ್ನುವುದಕ್ಕೆ ಈ ವ್ಯಕ್ತಿಗಿಂತ ಬೇರೆ ಉದಾಹರಣೆ ಬೇಕಿಲ್ಲ ಬಿಡಿ

ಹುಡುಗಿಯರಿಗೆ ಹೋಲಿಸಿದ್ರೆ ಹುಡುಗರು ತುಂಬಾನೇ ಸಿಂಪಲ್. ದುಡಿಯುವ ಸಂಬಳದಲ್ಲಿಯೇ ಎಲ್ಲವನ್ನು ಸಂಬಾಳಿಸಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬನ ಆದಾಯಕ್ಕೂ ಇವನು ಬದುಕುತ್ತಿರುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ವಾರ್ಷಿಕವಾಗಿ 45 ಲಕ್ಷ ರೂ. ಸಂಬಳ ಪಡೆಯುತ್ತಾನಾದರೂ ಅತೀ ಸಾಮಾನ್ಯ ಹಾಗೂ ಕಡಿಮೆ ವಸ್ತುಗಳನ್ನೆ ಇಟ್ಟುಕೊಂಡು ಸಿಂಪಲ್‌ ಜೀವನ ನಡೆಸುತ್ತಿದ್ದಾನೆ. ಈ ಬಗೆಗಿನ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

Viral: ಸಂಬಳ ಎಷ್ಟಿದ್ದರೇನಂತೆ, ಹುಡುಗ್ರು ಸಿಂಪಲ್ ಎನ್ನುವುದಕ್ಕೆ ಈ ವ್ಯಕ್ತಿಗಿಂತ ಬೇರೆ ಉದಾಹರಣೆ ಬೇಕಿಲ್ಲ ಬಿಡಿ
ವೈರಲ್​ ಪೋಸ್ಟ್​
Edited By:

Updated on: Feb 07, 2025 | 10:21 AM

ಈಗಿನ ಕಾಲದಲ್ಲಿ ಎಷ್ಟು ದುಡಿದರೂ ಸಾಲಲ್ಲ. ಎಲ್ಲರಂತೆ ನಾವು ಕೂಡ ಐಷಾರಾಮಿ ಜೀವನ ನಡೆಸಬೇಕು ಎನ್ನುವುದಿರುತ್ತದೆ. ಹೀಗಾಗಿ ದುಡಿದ ಅರ್ಧಕ್ಕರ್ಧ ಹಣವು ನೋಡಿದ್ದಲ್ಲೇ ತೆಗೆದುಕೊಳ್ಳುವುದಕ್ಕೆ ಖಾಲಿಯಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಬದುಕುವ ರೀತಿ ನೋಡಿದ್ರೆ ಅಚ್ಚರಿಯಾಗುತ್ತದೆ. ಹೌದು, ವರ್ಷಕ್ಕೆ 45 ಲಕ್ಷ ರೂ. ಸಂಬಳ ದುಡಿಯುವ ಈ ವ್ಯಕ್ತಿಯೂ ಎಷ್ಟು ಸಿಂಪಲ್ ಎನ್ನುವುದನ್ನು ತಿಳಿಸುತ್ತದೆ. ಹೌದು, ಸಾಕ್ಷಿ ಎಂಬ ಮಹಿಳೆ ಪೋಸ್ಟ್‌ ವೊಂದನ್ನು ಶೇರ್ ಮಾಡಿಕೊಂಡಿದ್ದು, ತನ್ನ ಸ್ನೇಹಿತ ಬಳಸುವ ದೈನಂದಿನ ಬಾತ್‌ರೂಂ ಕಿಟ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸಾಕ್ಷಿ ತನ್ನ ಸ್ನೇಹಿತನ ಬಾತ್‌ರೂಂ ಕಿಟ್‌ನ ಫೋಟೋವನ್ನು ಹಂಚಿಕೊಂಡಿದ್ದು, ವರ್ಷಕ್ಕೆ 45 ಲಕ್ಷ ರೂ. ಪ್ಯಾಕೇಜ್‌ ಹೊಂದಿರುವ ನನ್ನ ಸ್ನೇಹಿತನ ಈ ಚೀಲವನ್ನು ನೋಡಿ. ಪುರುಷರು ಅತ್ಯಂತ ಸರಳ ಸ್ವಭಾವದವರು ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಗಮನಿಸಿದರೆ ಆ ವ್ಯಕ್ತಿಯ ಪೌಚ್‌ನಲ್ಲಿ ಒಂದು ಲಕ್ಸ್ ಸೋಪ್, ಸಣ್ಣ ಕ್ಲೋಸಪ್ ಟೂತ್‌ಪೇಸ್ಟ್, ಪ್ಲಾಸ್ಟಿಕ್ ಬಾಚಣಿಗೆ ಹಾಗೂ ಕೂದಲಿಗೆ ಹಚ್ಚುವ ಎಣ್ಣೆಯ ಸಣ್ಣ ಬಾಟಲಿ ಹೀಗೆ ಕಡಿಮೆ ಬೆಲೆಯ ಸಿಂಪಲ್ ವಸ್ತುಗಳಿವೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಈ ಪೋಸ್ಟ್ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು,’ಆತ ಆ ಪೌಚ್‌ ಅನ್ನು ಇಟ್ಟುಕೊಂಡಿದ್ದಾನೆ ಎನ್ನೋದೇ ದೊಡ್ಡ ವಿಷಯ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಲಕ್ಸ್ ಸೋಪ್‌ ಪ್ರೀಮಿಯಂ ಆಗಿದೆ. ಲೈಫ್‌ಬಾಯ್ ಸೋಪ್ ರೀತಿಯೇ ಅದು ಕೂಡ ಕೆಲಸ ಮಾಡುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬಳಕೆದಾರರು, ‘ಅಷ್ಟೊಂದು ದೊಡ್ಡ ಮೊತ್ತದ ಸಂಬಳ ಇದ್ರೂ ಇವನ ಸಿಂಪಲ್ ಲೈಫ್ ನಿಜಕ್ಕೂ ಶಾಕ್ ಎನಿಸುವಂತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ