ರೊಟ್ಟಿ ತಟ್ಟಿದ ಬೆಳದಿಂಗಳ ಬಾಲೆ; ತಂಗಾಳಿಯಂಥಾ ನಗುವಿಗೆ ಸೋತು ಹೋದರು ಲಕ್ಷಾಂತರ ಮಂದಿ

| Updated By: Skanda

Updated on: Jun 05, 2021 | 3:13 PM

ಜಾಸ್ಮೀನ್​ ಸೈನಿ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಹೊರಾಂಗಣದಲ್ಲಿ ಕುಳಿತ ಯುವತಿ ನಗುನಗುತ್ತಲೇ ರೊಟ್ಟಿ ತಟ್ಟುತ್ತಿದ್ದಾಳೆ. ತೀರಾ ಕಡಿಮೆ ಅವಧಿಯಲ್ಲಿರುವ ವಿಡಿಯೋ ಇದಾದರೂ ನೋಡುಗರು ಮಾತ್ರ ಮಂತ್ರ ಮುಗ್ಧರಾಗಿದ್ದಾರೆ. ಮೇ 17ರಂದು ಹಂಚಿಕೊಳ್ಳಲಾಗಿರುವ ಈ ವಿಡಿಯೋ ಇದುವರೆಗೆ ಸುಮಾರು 1ಲಕ್ಷದ 43ಸಾವಿರ ಲೈಕ್ಸ್ ಗಿಟ್ಟಿಸಿಕೊಂಡಿದೆ.

ರೊಟ್ಟಿ ತಟ್ಟಿದ ಬೆಳದಿಂಗಳ ಬಾಲೆ; ತಂಗಾಳಿಯಂಥಾ ನಗುವಿಗೆ ಸೋತು ಹೋದರು ಲಕ್ಷಾಂತರ ಮಂದಿ
ಮನಕದ್ದ ಯುವತಿ
Follow us on

ಸಾಮಾಜಿಕ ಜಾಲತಾಣಗಳು ಸುಲಭವಾಗಿ ಕೈಗೆಟುಕಲಾರಂಭಿಸಿದ ಮೇಲೆ ಯಾರು ಯಾವಾಗ ಸುದ್ದಿಯಾಗುತ್ತಾರೆ ಎಂದು ಹೇಳಲಾಗದು. ರಾತ್ರಿಯ ತನಕ ತೀರಾ ಸಾಮಾನ್ಯನಾಗಿ ಊರಿನವರಿಗೇ ಹೆಚ್ಚು ಪರಿಚಯವಿರದ ವ್ಯಕ್ತಿಯನ್ನು ಬೆಳಗಾಗುವಷ್ಟರಲ್ಲಿ ಜಗತ್ತಿಗೇ ಪರಿಚಯಿಸುವ ಶಕ್ತಿ ಈ ಸಾಮಾಜಿಕ ಜಾಲತಾಣಗಳಿಗಿದೆ. ಎಷ್ಟೋ ಜನರು ಇವುಗಳಿಂದಲೇ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದಾರೆ. ಇನ್ನು ಕೆಲವರು ಧಾರಾವಾಹಿ, ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಅಪವಾದ, ಅಪಖ್ಯಾತಿ, ನಿಂದನೆ, ಮಾನಸಿಕ ಹಿಂಸೆಗೆ ತುತ್ತಾಗಿ ಸಾಕಪ್ಪಾ ಇದರ ಸಹವಾಸ ಎಂದವರೂ ಇದ್ದಾರೆ. ಇದೀಗ ನಗುಮುಖದ ಯುವತಿಯೊಬ್ಬಳು ರೊಟ್ಟಿ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದು ಎಲ್ಲೆಡೆ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿರುವ ಯುವತಿಯ ಹೆಸರು, ವಿಳಾಸ, ಊರು ಯಾವುದೂ ಗೊತ್ತಿಲ್ಲವಾದರೂ ಆಕೆಯ ಸೌಂದರ್ಯ ಹಾಗೂ ಅದನ್ನು ಮತ್ತಷ್ಟು ಚಂದಗೊಳಿಸಿದ ನಗು ಎಲ್ಲರ ಮನಸೂರೆಗೊಳ್ಳುತ್ತಿದೆ. ಇದನ್ನೇ ಚರ್ಚೆಯ ಕೇಂದ್ರಬಿಂದುವಾಗಿರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಆಕೆ ಧಾರಾವಾಹಿ ಅಥವಾ ಯಾವುದಾದರೂ ಸಿನಿಮಾಕ್ಕೆ ನಟಿಸುತ್ತಿದ್ದಾಳಾ ಎಂದೆನಿಸುತ್ತದೆ. ಆ ಸಹಜ ಸೌಂದರ್ಯಕ್ಕೆ ಮನಸೋಲದೇ ಇರುವವರು ಯಾರು ಎಂದು ತಮಗನ್ನಿಸಿದ್ದನ್ನು ಹಂಚಿಕೊಂಡಿದ್ದಾರೆ.

ಜಾಸ್ಮೀನ್​ ಸೈನಿ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಹೊರಾಂಗಣದಲ್ಲಿ ಕುಳಿತ ಯುವತಿ ನಗುನಗುತ್ತಲೇ ರೊಟ್ಟಿ ತಟ್ಟುತ್ತಿದ್ದಾಳೆ. ತೀರಾ ಕಡಿಮೆ ಅವಧಿಯಲ್ಲಿರುವ ವಿಡಿಯೋ ಇದಾದರೂ ನೋಡುಗರು ಮಾತ್ರ ಮಂತ್ರ ಮುಗ್ಧರಾಗಿದ್ದಾರೆ. ಮೇ 17ರಂದು ಹಂಚಿಕೊಳ್ಳಲಾಗಿರುವ ಈ ವಿಡಿಯೋ ಇದುವರೆಗೆ ಸುಮಾರು 1ಲಕ್ಷದ 43ಸಾವಿರ ಲೈಕ್ಸ್ ಗಿಟ್ಟಿಸಿಕೊಂಡಿದೆ. ಅಷ್ಟೇ ಅಲ್ಲದೇ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುವ ಮೂಲಕ ಕೋಟ್ಯಂತರ ಜನರ ಗಮನ ಸೆಳೆದಿದೆ.

ಜಾಸ್ಮೀನ್​ ಸೈನಿ ಎಂಬ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇದೊಂದೇ ವಿಡಿಯೋ ಅಲ್ಲದೇ ಇನ್ನೂ ಹಲವು ಮನಸೆಳೆಯುವ ವಿಡಿಯೋ ಇದ್ದು, ಅವುಗಳನ್ನು ನೋಡಲೆಂದೇ ನಾಲ್ಕೂವರೆ ಸಾವಿರಕ್ಕೂ ಅಧಿಕ ಜನ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ. ಆದರೆ, ಉಳಿದೆಲ್ಲಾ ವಿಡಿಯೋಗಳಿಗಿಂತ ರೊಟ್ಟಿ ತಟ್ಟುವ ವಿಡಿಯೋ ಮಾತ್ರ ಅತ್ಯಧಿಕ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದೆ.

ಇದನ್ನೂ ಓದಿ:
ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್ 

Viral Video: ಸಾಕಿದ ನಾಯಿಯನ್ನು ರಕ್ಷಿಸಲು ದೈತ್ಯಾಕಾರದ ಕರಡಿಯನ್ನು ತಳ್ಳುತ್ತಿರುವ ಬಾಲಕಿ; ಆಘಾತಕಾರಿ ವಿಡಿಯೋ ವೈರಲ್​