ಭಾರತದಲ್ಲಿ ಯಮುನಾ ನದಿ ಮಲಿನಗೊಂಡು, ಅದರ ಮೇಲೆ ವಿಷಕಾರಿ ಬುರುಗು ತೇಲುತ್ತಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಈಗ ಮೇಘಾಲಯದ ಸ್ಫಟಿಕದಷ್ಟು ಶುಭ್ರವಾಗಿರುವ ನದಿಯೊಂದರ ಚಿತ್ರ ವೈರಲ್ ಆಗಿದ್ದು ನೆಟ್ಟಿಗರ ಮನಗೆದ್ದಿದೆ. ಜಲ ಶಕ್ತಿ ಸಚಿವಾಲಯದ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, ನದಿಯ ಪಕ್ಷಿನೋಟವನ್ನು ಹಂಚಿಕೊಳ್ಳಲಾಗಿದೆ. ಶಿಲ್ಲಾಂಗ್ನ ಉಮ್ನ್ಗೋಟ್ ನದಿಯ ಚಿತ್ರವನ್ನು ಸಚಿವಾಲಯ ಶೇರ್ ಮಾಡಿದ್ದು, ಅದರಲ್ಲಿ ಸ್ಫಟಿಕದಷ್ಟು ಶುಭ್ರವಾದ ನೀರಿನ ಮೇಲೆ ದೋಣಿಯೊಂದರಲ್ಲಿ ಸ್ಥಳೀಯರು ಸಂಚರಿಸುತ್ತಿದ್ದಾರೆ. ಚಿತ್ರ ಹಲವಾರು ಕಾರಣಗಳಿಂದ ಜನರ ಕುತೂಹಲ ಕೆರಳಿಸಿದೆ.
ಮೊದಲ ಕಾರಣ, ಜಲ ಶಕ್ತಿ ಸಚಿವಾಲಯವು, ಟ್ವಿಟರ್ನಲ್ಲಿ ಚಿತ್ರವನ್ನು ಹಂಚಿಕೊಳ್ಳುವಾಗ, ಸುಂದರವಾದ ಕ್ಯಾಪ್ಶನ್ ನೀಡಿದೆ. ಅದರಲ್ಲಿ ಬರೆಯುತ್ತಾ, ಈ ಚಿತ್ರ ನೋಡಿದಾಗ ಬೋಟ್ ಆಗಸದಲ್ಲಿದೆ ಎಂಬ ಭಾವ ಉಟುಮಾಡುತ್ತದೆ ಎಂದು ಬರೆದಿದೆ. ಈ ಹೋಲಿಕೆ ನೆಟ್ಟಿಗರಿಗೆ ಇಷ್ಟವಾಗಿದೆ. ಚಿತ್ರವನ್ನು ಹಂಚಿಕೊಂಡ ಸಚಿವಾಲಯವು, ‘‘ಇದು ವಿಶ್ವದಲ್ಲೇ ಅತ್ಯಂತ ಶುದ್ಧವಾದ ನದಿಗಳಲ್ಲೊಂದು. ಮೇಘಾಲಯದ ಶಿಲ್ಲಾಂಗ್ನಿಂದ 100 ಕಿಮೀ ದೂರದಲ್ಲಿರುವ ಉಮ್ನ್ಗೋಟ್ ಎಂಬಲ್ಲಿದೆ. ನದಿ ನೀರು ಎಷ್ಟು ಶುಭ್ರವಾಗಿದೆಯೆಂದರೆ, ಬೋಟ್ ಆಗಸದಲ್ಲಿರುವಂತೆ ಭಾಸವಾಗುತ್ತದೆ. ನಮ್ಮೆಲ್ಲಾ ನದಿಗಳು ಹೀಗೇ ಇರಲಿ ಎಂದು ಬಯಸುತ್ತೇವೆ. ಇಂತಹ ನದಿಯನ್ನು ಕಾಪಾಡಿಕೊಂಡಿದ್ದಕ್ಕೆ ಮೇಘಾಲಯದ ಜನರಿಗೆ ಧನ್ಯವಾದಗಳು’’ ಎಂದು ಬರೆದಿದೆ.
ಜಲ ಶಕ್ತಿ ಸಚಿವಾಲಯ ಹಂಚಿಕೊಂಡ ಟ್ವೀಟ್ ಇಲ್ಲಿದೆ:
One of the cleanest rivers in the world. It is in India. River Umngot, 100 Kms from Shillong, in Meghalaya state. It seems as if the boat is in air; water is so clean and transparent. Wish all our rivers were as clean. Hats off to the people of Meghalaya. pic.twitter.com/pvVsSdrGQE
— Ministry of Jal Shakti ?? #AmritMahotsav (@MoJSDoWRRDGR) November 16, 2021
ಈ ಚಿತ್ರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಅಚ್ಚರಿ ಸೂಚಿಸಿದ್ದಾರೆ. ಕೆಲವರು ಇದು ಫೋಟೋಶಾಪ್ಡ್ ಚಿತ್ರ ಇರುವಂತೆ ಇದೆ. ಅಷ್ಟು ಅದ್ಭುತವಾಗಿದೆ ಎಂದು ಹೊಗಳಿದ್ದಾರೆ.
ಇದನ್ನೂ ಓದಿ:
Password: ಭಾರತದಲ್ಲಿ ಜನರು ಅತಿ ಹೆಚ್ಚಾಗಿ ಬಳಸೋದು ಇದೇ ಪಾಸ್ವರ್ಡ್ಗಳನ್ನಂತೆ! ಅವು ಯಾವುವು ಗೊತ್ತಾ?
ನಯನತಾರಾಗೆ ಕೊಟ್ಟಿದ್ದ ಆಫರ್ ಬಾಚಿಕೊಂಡ ಸ್ಯಾಂಡಲ್ವುಡ್ ನಟಿ; ಕಾಲಿವುಡ್ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ