Viral Video: ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದ ಹುಡುಗಿ; ನೆಟ್ಟಿಗರಿಂದ ಅಚ್ಚರಿಯ ರಿಯಾಕ್ಷನ್!

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು, ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮವಿಯ ರೊಯ್ಟೆ ಕೂಡ ಶೇರ್ ಮಾಡಿಕೊಂಡಿದ್ದಾರೆ.

Viral Video: ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದ ಹುಡುಗಿ; ನೆಟ್ಟಿಗರಿಂದ ಅಚ್ಚರಿಯ ರಿಯಾಕ್ಷನ್!
ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಟ
Edited By:

Updated on: Jun 06, 2021 | 8:10 PM

ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿನಿತ್ಯ ನೂರಾರು ವಿಡಿಯೋಗಳು ಹರಿದಾಡುತ್ತಿರುತ್ತದೆ. ಹಲವಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಂದಷ್ಟು ವಿಡಿಯೋಗಳು ಕ್ಯೂಟ್ ಅನಿಸಿದರೆ, ಮತ್ತೊಂದಷ್ಟು ನಗು ತರಿಸುತ್ತವೆ. ಕೆಲವು ವಿಡಿಯೋಗಳು ಕುತೂಹಲಕಾರಿಯಾಗಿ, ವಿಚಿತ್ರ ಅಥವಾ ವಿಶೇಷವಾಗಿಯೂ ಇರುತ್ತದೆ. ವೈರಲ್ ವಿಡಿಯೋಗಳು ಕೇವಲ ಇಷ್ಟಕ್ಕೇ ಸೀಮಿತವಾಗದೆ ಒಂದಷ್ಟು ಜನರ ವಿಶೇಷ ಪ್ರತಿಭೆ ನೋಡಲೂ ಅವಕಾಶ ಮಾಡಿಕೊಡುತ್ತವೆ. ಸಾಮಾಜಿಕ ಜಾಲತಾಣಗಳ ಮೂಲಕ ವಿಧವಿಧ ಪ್ರತಿಭೆಗಳ ಪ್ರದರ್ಶನವೂ ಆಗುತ್ತಿರುತ್ತದೆ.

ಈಚೆಗೆ ಕೆಲವು ದಿನಗಳಿಂದ ಅಂತಹಾ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಿಜೋರಾಂನ ಒಬ್ಬಾಕೆ ಹುಡುಗಿ ಹೈ ಹೀಲ್ ಚಪ್ಪಲಿ ಧರಿಸಿ ಫುಟ್​ಬಾಲ್ ಆಡುತ್ತಿರುವುದು ಕಂಡುಬಂದಿದೆ. ಹೈ ಹೀಲ್ಸ್ ಧರಿಸಿ ನಡೆಯುವುದೇ ಕಷ್ಟ ಎಂದಿರುವಾಗ ಈ ವಿಡಿಯೋ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಕೆಲವಷ್ಟು ಪ್ರತಿಭೆಗಳು ಹೀಗೆ ವಿಶೇಷವೂ ವಿಶಿಷ್ಟವೂ ಆಗಿರುತ್ತದೆ. ಇಲ್ಲಿಯೇ ನೀವು ಗಮನಿಸಬಹುದು. ಹುಡುಗಿಯೊಬ್ಬಳು ಹೇಗೆ ಹೈ ಹೀಲ್ಸ್ ಧರಿಸಿಯೂ ಫುಟ್​ಬಾಲ್ ಆಡುತ್ತಿದ್ದಾಳೆ ಎಂದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು, ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮವಿಯ ರೊಯ್ಟೆ ಕೂಡ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿ:

ಈ ಹುಡುಗಿಯ ಹೆಸರು ಚಿಂಡಿ ರೆಮ್ರುಟ್ಪುಯ್ ಎಂದು ತಿಳಿದುಬಂದಿದೆ. ಆಕೆ ಮಿಜೋರಾಂನ ಐಜ್ವಾಲ್ ಎಂಬ ಊರಿನ ನಿವಾಸಿಯಾಗಿದ್ದಾಳೆ. ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಆಕೆಯ ಪ್ರತಿಭೆಯ ವಿವಿಧ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ನೋಡಬಹುದಾಗಿದೆ. ಅವಳು ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾಳೆ.

ಇದೀಗ ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾಳೆ. ಫುಟ್​ಬಾಲ್ ಪ್ರಿಯರು ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದರೆ ಹೇಗಿರುತ್ತೆ ಎಂದು ನೋಡುತ್ತಿದ್ದಾರಂತೆ. ಈ ವಿಡಿಯೋವನ್ನು ಶೇರ್ ಮಾಡಿ, ಕಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ.

ಇದನ್ನೂ ಓದಿ: Shah Rukh Khan: ಈ ಶಾರುಖ್​ ಖಾನ್​ ಅಸಲಿಯೋ ನಕಲಿಯೋ? ಫ್ಯಾನ್ಸ್​ಗೆ ದಂಗು ಬಡಿಸಿದ ಫೋಟೋ, ವಿಡಿಯೋಗಳು ವೈರಲ್​

Viral Video: ಕೇರಂ ಆಟದ ನಡುವೆ ಅಜ್ಜಂದಿರ ಜಟಾಪಟಿ; ವೈರಲ್ ವಿಡಿಯೋ ನೋಡಿ ನಕ್ಕು ಹಗುರಾದ ನೆಟ್ಟಿಗರು