Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆಯುತ್ತಿದ್ದಂತೆ ಜೋರಾಗಿ ಗದರಿದ ಕಂದಮ್ಮ

ಪುಟಾಣಿಗಳೇ ಹಾಗೆ, ತಾವು ಇಷ್ಟ ಪಡುವವರು ಬೇರೆಯವರ ಮೇಲೆ ಹೆಚ್ಚು ಪ್ರೀತಿ ತೋರಿದರೆ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗೂ ತನ್ನ ತಂದೆಯ ಮೇಲೆ ಯಾರು ಗದರುವಂತಿಲ್ಲ. ಒಂದು ವೇಳೆ ಗದರಿದರೆ ಮುಗಿದೇ ಹೋಯ್ತು, ತನ್ನ ಕೋಪವನ್ನೆಲ್ಲಾ ಎದುರಿಗಿರುವ ವ್ಯಕ್ತಿಯ ಮೇಲೆ ತೋರಿಸಿ ಬಿಡುತ್ತಾರೆ. ಇದೀಗ ತಂದೆಯ ಮಡಿಲಿನಲ್ಲಿ ಮಲಗಿರುವ ಕಂದಮ್ಮ ತನ್ನ ತಾಯಿಯ ಮೇಲೆ ಗದರಿದೆ. ಈ ಪುಟಾಣಿಯ ಬೈಗುಳದ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆಯುತ್ತಿದ್ದಂತೆ ಜೋರಾಗಿ ಗದರಿದ ಕಂದಮ್ಮ
ವೈರಲ್‌ ವಿಡಿಯೋ
Image Credit source: Instagram

Updated on: Apr 03, 2026 | 11:33 AM

ಪ್ರತಿಯೊಬ್ಬ ಅಪ್ಪನಿಗೆ (father) ಮುದ್ದಿನ ಮಗಳು ಪುಟ್ಟ ರಾಜಕುಮಾರಿಯೇ. ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಎಲ್ಲಾ ಆಗಿರುತ್ತಾರೆ. ಅಪ್ಪನಿಗೂ ಮಗಳೆಂದರೆ ಜೀವಕ್ಕಿಂತ ಹೆಚ್ಚು. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ತಂದೆಯ ಮಡಿಲಿನಲ್ಲಿ ಮಲಗಿರುವ ಕಂದಮ್ಮನು ತನ್ನ ಅಮ್ಮನಿಗೆ ಗದರಿದೆ. ತನ್ನ ಅಮ್ಮನು ಅಪ್ಪನಿಗೆ ಮೆಲ್ಲನೆ ಒಂದೇಟು ಹೊಡೆಯುತ್ತಿದ್ದಂತೆ ಈ ಪುಟಾಣಿ ತನ್ನದೇ ಭಾಷೆಯಲ್ಲಿ ಬೈಯಲು ಶುರು ಮಾಡಿದೆ. ಈ ಪುಟಾಣಿಯ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

baby-doll-udhra ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೂ ತನ್ನ ತಂದೆಯ ಮಡಿಲಿನಲ್ಲಿ ಮಲಗಿದೆ. ಇದೇ ವೇಳೆ ಮಹಿಳೆಯೂ ಪುಟಾಣಿ ಬಳಿ, ಇದು ನಿನ್ನ ಅಪ್ಪನಾ ಎಂದು ಹೇಳುತ್ತಾ ಮೆಲ್ಲನೆ ಒಂದೇಟು ತನ್ನ ಗಂಡನಿಗೆ ಹೊಡೆದಿದ್ದಾಳೆ. ಅಪ್ಪನಿಗೆ ಅಮ್ಮನು ಹೊಡೆಯುತ್ತಿದ್ದಂತೆ ಕೋಪದಲ್ಲಿ ಪುಟಾಣಿ ತನ್ನದೇ ಭಾಷೆಯಲ್ಲಿ ಬೈಯುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ವಿಡಿಯೋ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಒಬ್ಬ ಬಳಕೆದಾರ ಅಪ್ಪನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ, ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೇನಿಸುವ ವಿಡಿಯೋ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಗಳ ಪ್ರೀತಿ ತಾಯಿ ಪ್ರೀತಿ ಸಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us