Viral Video : ಎಷ್ಟೇ ದೊಡ್ಡವರಾದರೂ ಅಮ್ಮನ ಮಡಿಲಿಗೆ ತಲೆಯಿಟ್ಟು ಮಲಗುವವರು ಅದೆಷ್ಟು ಜನರಿಲ್ಲ? ಆದರೆ ಇಲ್ಲಿರುವ ವಿಡಿಯೋದಲ್ಲಿ ಮಗನ ಮಡಿಲಿಗೆ ಅಮ್ಮ ತಲೆ ಇಟ್ಟು ಮಲಗಿದ ದೃಶ್ಯ ನೆಟ್ಟಿಗರನ್ನು ಮೃದುಗೊಳಿಸಿದೆ. ರಾಚೆಲ್ ಫ್ಲವರ್ಸ್ ಎಂಬ ಇನ್ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಮಗ ಹೇಗೆ ಪ್ರತಿಕ್ರಿಯಿಸಬಹುದೆಂದು ತಿಳಿದುಕೊಳ್ಳಲು ಮೂರು ವರ್ಷದ ಅವನ ತೊಡೆಯ ಮೇಲೆ ಮಲಗಿದೆ’ ಎಂದು ಅಮ್ಮ ಫೋಟೋ ಟೆಕ್ಸ್ಟ್ ಹಾಕಿದ್ದಾರೆ.
ತೊಡೆಯ ಮೇಲೆ ಮಲಗಿದ ಮೇಲೆ, ಓಹ್ ಅಮ್ಮಾ ನೀನು ನನ್ನ ತೊಡೆಯ ಮೇಲೆ! ಎಂದು ಪುಳಕಗೊಳ್ಳುತ್ತದೆ ಮಗು. ಗಂಡುಮಗುವನ್ನು ಅನುಕಂಪ, ಸಂವೇದನೆಗಳಿಂದ ಬೆಳೆಸುವುದು ಹೇಗೆ? ಎನ್ನುವುದನ್ನು ತನ್ನ ನೋಟ್ನಲ್ಲಿ ಹೇಳಿದ್ದಾರೆ; ಅವನು ತನ್ನ ಭಾವನೆಗಳನ್ನು ಹತ್ತಿಕ್ಕಬಾರದು. ಅಳುತ್ತಿದ್ದರೆ ನಿಲ್ಲಿಸು ಎಂದು ಹೇಳದಿರಿ. ಅವನ ಭಾವನೆಗಳನ್ನು ಸ್ವೀಕರಿಸಿ. ತನಗಾದ ನೋವು ದುಃಖವನ್ನು ಅವ ಅನುಭವಿಸಬೇಕು. ಹಾಗೆ ಅನುಭವಿಸುವುದು ತಪ್ಪಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಿ. ಏಕೆಂದರೆ ಅವನಿಗೆ ಅನುಕಂಪ, ದಯೆ, ಸೂಕ್ಷ್ಮತೆಗಳು ಅರ್ಥವಾಗಬೇಕು. ಅದನ್ನು ಕಲಿಯಲು ಅವಕಾಶ ನೀಡಿ.
ಈ ವಿಡಿಯೋ 1 ಮಿಲಿಯನ್ ವೀಕ್ಷಣೆ ಹೊಂದಿದೆ. ಅನೇಕರು ಈ ಬಾಂಧವ್ಯವನ್ನು ಮೆಚ್ಚಿದ್ದಾರೆ. ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:15 am, Sat, 27 August 22