ಈ ಕೆಲವೊಬ್ಬರಿಗೆ ವಿಪರೀತ ಸೆಲ್ಫಿ ಕ್ರೇಜ್. ತಾವು ಹೋದಲ್ಲೆಲ್ಲಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಕೆಲವೊಬ್ಬರಿಗೆ ಅಪಾಯಕಾರಿ ಜಾಗಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚು. ಹೀಗೆ ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ, ಅಪಾಯಕ್ಕೆ ಸಿಲುಕಿದಂತಹ ಅದೆಷ್ಟೋ ಜನರಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಚಲಿಸುತ್ತಿರುವ ರೈಲಿನ ಪಕ್ಕ ಸೆಲ್ಫಿಗೆ ಪೋಸ್ ನೀಡಲು ಹೋಗಿ ಯುವತಿಯೊಬ್ಬಳು ಅಪಾಯಕ್ಕೆ ಸಿಲುಕಿದ್ದಾರೆ. ಈ ಕುರಿತ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಬ್ರೆಜಿಲ್ ದೇಶದ ಉಬೆರಾಬಾ ಎಂಬಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದು, ರೈಲು ಸಮೀಪಿಸುತ್ತಿದ್ದಂತೆ ಸೈಕ್ಲಿಸ್ಟ್ ಒಬ್ಬಳು ತನ್ನ ಸ್ನೇಹಿತೆಯರೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿರುವ ವೇಳೆ ವೇಗವಾಗಿ ಬಂದ ಗೂಡ್ಸ್ ಟ್ರೈನ್ ಆ ಯುವತಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಆಕೆ ತಲೆಗೆ ಹೆಲ್ಮೆಟ್ ಧರಿಸಿದ್ದ ಕಾರಣ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ತಿಳಿಸಿದೆ.
Woman hit by a freight train in Uberaba, Brazil while posing for a selfie with her friends as the train approached.
Just a friendly reminder to not take selfies in front of moving trains.
According to the New York Post, the woman survived and miraculously only suffered… pic.twitter.com/u4vrPbg45x
— Collin Rugg (@CollinRugg) June 5, 2024
ಈ ಕುರಿತ ವಿಡಿಯೋವೊಂದನ್ನು CollinRugg ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಸೈಕ್ಲಿಸ್ಟ್‌ಗಳ ತಂಡವೊಂದು ಚಲಿಸುತ್ತಿರುವ ರೈಲಿನ ಬಳಿ ಸೆಲ್ಫಿಗೆ ಪೋಸ್ ನೀಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲೇ ರೈಲ್ವೆ ಹಳಿಯ ಪಕ್ಕದಲ್ಲಿ ನಿಂತಿದ್ದ ಯುವತಿಯೊಬ್ಬಳಿಗೆ ಗೂಡ್ಸ್ ಟ್ರೈನ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ, ಹೇಗಿದೆ ನೊಡಿ?
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಜನರು ಅಪಾಯಕಾರಿ ಸ್ಥಳಗಳಲ್ಲಿ ಏಕೆ ಈ ರೀತಿ ಹುಚ್ಚಾಟಗಳನ್ನು ಮೆರೆಯುತ್ತಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Thu, 6 June 24