Viral Video: ಸ್ವಾಮಿ ವಿವೇಕಾನಂದರನ್ನು ಗೇಲಿ ಮಾಡಿದ ಅಮೋಘ ಲೀಲಾ ದಾಸ್; ಇಸ್ಕಾನ್​ ಖಂಡನೆ

|

Updated on: Jul 12, 2023 | 11:57 AM

Swami Vivakanand : ''ದೈವಿಕ ವ್ಯಕ್ತಿ ಪ್ರಾಣಿಯನ್ನು ಕೊಂದು ತಿನ್ನಲಾರ. ಮೀನನ್ನು ತಿನ್ನು ಎಂದು ಹೇಳುವ ಹೃದಯದಲ್ಲಿ ಕರುಣೆ ಇರುತ್ತದೆಯೇ? ವಿವೇಕಾನಂದರು ಮೀನು ತಿಂದಿದ್ದು ತಪ್ಪು. ಅವರು ಹೇಳಿದ್ದನ್ನೆಲ್ಲ ಒಪ್ಪಲಾಗದು'' ಅಮೋಘ ಲೀಲಾ ದಾಸ್​.

Viral Video: ಸ್ವಾಮಿ ವಿವೇಕಾನಂದರನ್ನು ಗೇಲಿ ಮಾಡಿದ ಅಮೋಘ ಲೀಲಾ ದಾಸ್; ಇಸ್ಕಾನ್​ ಖಂಡನೆ
ಅಮೋಘ ಲೀಲಾ ದಾಸ್​
Follow us on

ISCKON : ದಿವ್ಯ ಪುರುಷರು ಮೀನು ತಿನ್ನಬಹುದೇ? ಹೃದಯದಲ್ಲಿ ಕರುಣೆ ಇದ್ದವರು ಪ್ರಾಣಿಯನ್ನು ಕೊಂದು ತಿನ್ನುತ್ತಾರೆಯೇ? ಹಾಗೆ ತಿಂದವರು ಸಿದ್ದ ಪುರುಷರು ಎನ್ನಿಸಿಕೊಳ್ಳುತ್ತಾರೆಯೇ? ಎಂದು ಸ್ವಾಮಿ ವಿವೇಕಾನಂದರನ್ನು (Swami Vivekanand) ಗೇಲಿ ಮಾಡಿದ ಇಸ್ಕಾನ್​ನ ಸನ್ಯಾಸಿ ಅಮೋಘ ಲೀಲಾ ದಾಸ್ (Amogh Leela Das) ಇದೀಗ ಸುದ್ದಿಯಲ್ಲಿದ್ದಾರೆ. ಈ ಹೇಳಿಕೆಯನ್ನು ನೀಡಿದ ಇವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಸ್ಕಾನ್​ ಇವರಿಗೆ ಒಂದು ತಿಂಗಳ ಕಾಲ ನಿಷೇಧ ಹೇರಿದೆ. ಜೊತೆಗೆ ಪ್ರಾಯಶ್ಚಿತಕ್ಕಾಗಿ ಇವರು ಗೋವರ್ಧನ ಬೆಟ್ಟಕ್ಕೆ ಹೋಗಲಿದ್ದಾರೆ ಎಂದೂ ತಿಳಿಸಿದೆ. ಈ ವಿಡಿಯೋ ಅನ್ನು ರೀಟ್ವೀಟ್ ಮಾಡುತ್ತಿರುವ ನೆಟ್ಟಿಗರು ಈ ಹೇಳಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಮೀನು ತಿಂದರೆ ಅದಕ್ಕೆ ನೋವಾಗುವುದಿಲ್ಲವಾ? ಮೀನನ್ನು ತಿನ್ನು ಎಂದು ಹೇಳುವ ಹೃದಯದಲ್ಲಿ ಕರುಣೆ ಇರಲು ಸಾಧ್ಯವೆ? ತುಳಸಿಗಿಂತ ಬದನೆಕಾಯಿ ಹಸಿವನ್ನು ನೀಗಿಸುತ್ತದೆ ನಿಜ, ಹಾಗೆಂದು ತುಳಸಿಗಿಂತ ಬದನೆಕಾಯಿ ಶ್ರೇಷ್ಠ ಎಂದು ಹೇಳಬಹುದೆ? ಹಾಗೆಯೇ ಭಗವದ್ಗೀತೆಯನ್ನು ಅಧ್ಯಯನ ಮಾಡುವುದಕ್ಕಿಂತ ಫುಟ್​ಬಾಲ್​ ಆಡುವುದೇ ಶ್ರೇಷ್ಠ ಎಂದು ಹೇಳಬಹುದೆ? ಖಂಡಿತ ಇಲ್ಲ. ಸ್ವಾಮಿ ವಿವೇಕಾನಂದರ ಬಗ್ಗೆ ನಾನು ಅಪಾರ ಗೌರವವನ್ನು ಹೊಂದಿದ್ದೇನೆ ನಿಜ, ಅವರೇನಾದರೂ ನನ್ನೆದುರು ಇದ್ದಿದ್ದರೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳಿದ್ದನ್ನೆಲ್ಲವನ್ನೂ ಕುರುಡನಂತೆ ನಂಬಲಾರೆ, ಒಪ್ಪಲಾರೆ’ ಎಂದು ಅಮೋಘ ಲೀಲಾ ದಾಸರು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : Viral Video: ಭಕ್ತಕಳ್ಳ; ಹನುಮಾನ್ ಚಾಲೀಸಾ ಪಠಿಸಿ ಕಾಣಿಕೆ ಡಬ್ಬಿಯಿಂದ ರೂ. 5,000 ಕದ್ದ ಕಳ್ಳ

ಆಧ್ಯಾತ್ಮಿಕ ಮಾರ್ಗಗಳ ವೈವಿಧ್ಯತೆ ಮತ್ತು ವೈಯಕ್ತಿಕ ಆಯ್ಕೆಗಳ ಬಗ್ಗೆ ಅಮೋಘ ಲೀಲಾ ದಾಸ್​ ಅವರಿಗೆ ಅರಿವಿನ ಕೊರತೆ ಇದೆ ಇಸ್ಕಾನ್ ಹೇಳಿದೆ. ‘ನಮ್ಮ ಸಂಸ್ಥೆಯು ಎಲ್ಲಾ ರೀತಿಯ ಆಧ್ಯಾತ್ಮಿಕ ಮಾರ್ಗ ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತದೆ. ಈ ಮೂಲಕ ಜನರಲ್ಲಿ ಸಾಮರಸ್ಯ, ಗೌರವ ಮತ್ತು ತಿಳಿವಳಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಅಮೋಘ ಲೀಲಾ ದಾಸರ ಅಭಿಪ್ರಾಯಗಳು ಇಸ್ಕಾನ್‌ನ ಮೌಲ್ಯಗಳು ಬೋಧನೆಗಳನ್ನು ಪ್ರತಿನಿಧಿಸದೆ, ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳ ಕುರಿತು ಅವರ ಅಸಹಿಷ್ಣುತತೆಯನ್ನು ಪ್ರದರ್ಶಿಸುತ್ತಿದೆ. ಇಂಥ ಅಗೌರವಯುತ ನಡೆಯನ್ನು ಸಂಸ್ಥೆಯು ಖಂಡಿಸುತ್ತದೆ’ ಎಂದು ಇಸ್ಕಾನ್ ತಿಳಿಸಿದೆ.

ಇದನ್ನೂ ಓದಿ : Viral: 5 ಜೀವಂತ ಹಾವುಗಳನ್ನು ತನ್ನ ಎದೆಯಬಳಿ ಅಡಗಿಸಿಟ್ಟುಕೊಂಡಿದ್ದ ಮಹಿಳೆ

43 ವರ್ಷದ ಅಮೋಘ ಲೀಲಾ ದಾಸರ ಮೂಲ ಹೆಸರು ಆಶೀಷ್​ ಅರೋರಾ. ಸನಾಸ ದೀಕ್ಷೆಗಿಂತ ಮೊದಲು ಇವರು ಎಂಜಿನಿಯರ್ ಆಗಿದ್ದರು. ನಂತರ ದ್ವಾರಕಾದಲ್ಲಿರುವ ಇಸ್ಕಾನ್​ನ ದ್ವೈಕ ಅಧ್ಯಯನದ ಉಪಾಧ್ಯಕ್ಷರಾಗಿದ್ದಾರೆ.  ಸದ್ಯ​ ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜನಾತ್ಮಕ ಭಾಷಣಗಳನ್ನು ನೀಡುತ್ತ ಜನಪ್ರಿಯರಾಗಿದ್ದಾರೆ. ಘನಘೋರ ವಿವಾದಗಳಿಂದ ಕೂಡಿದ ಇತಿಹಾಸವುಳ್ಳ ಈ ‘ಸಂಘಟನೆ’ಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರೊಬ್ಬರು. ಸ್ವಾಮಿ ವಿವೇಕಾನಂದರಂತೆ ನೀವು ಚಿಕಾಗೋದಲ್ಲಿ ಭಾಷಣ ಮಾಡಲು ಸಾಧ್ಯವಾಗುವುದೆ? ಮಹಾನ್ ಆಧ್ಯಾತ್ಮಿಕ ವ್ಯಕ್ತಿ ಸ್ವಾಮಿ ವಿವೇಕಾನಂದರನ್ನು ಟೀಕಿಸಲು ನಿಮಗೇನು ಅರ್ಹತೆ ಇದೆ? ಇಂಥ ಬೀಸುಹೇಳಿಕೆಗಳನ್ನು ನಾವು ಸ್ವೀಕರಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನೇಕರು.

ಈ ಕುರಿತು ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 11:49 am, Wed, 12 July 23